ಹಳ್ಳಿಕಾರ್ ಜನಾಂಗಕ್ಕೆ ವರ್ತೂರ್ ಸಂತೋಷ್ ಅಪಮಾನ ಮಾಡ್ತಾವ್ನೆ, ಕಾನೂನು ಹೋರಾಟ ಮಾಡ್ತೀವಿ

ಬಿಗ್‌ಬಾಸ್ ಖ್ಯಾತಿಯ ವರ್ತೂರ್ ಸಂತೋಷ್‌ ವಿರುದ್ಧ ಗಂಭೀರ ಆರೋಪ ಕೇಳಿಬರುತ್ತಿದೆ. ಹಳ್ಳಿಕಾರ್ ಜನಾಂಗಕ್ಕೆ ವರ್ತೂರ್ ಸಂತೋಷ್ ಅಪಮಾನ ಮಾಡುತ್ತಿದ್ದಾರೆ ಎಂದು ಹಳ್ಳಿಕಾರ್ ಸಂರಕ್ಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಸಂಬಂಧ ಕಾನೂನು ಹೋರಾಟಕ್ಕೂ ಸಿದ್ಧರಾಗಿದ್ದಾರೆ.

ವರ್ತೂರ್ ಸಂತೋಷ್ ತನ್ನನ್ನು ತಾನು ಹಳ್ಳಿಕಾರ್ ಒಡೆಯ ಎಂದು ಬಿಂಬಿಸಿಕೊಳ್ಳುತ್ತಿರುವುದು, ಕರೆಸಿಕೊಳ್ಳುತ್ತಿರುವುದು ತಪ್ಪು. ಇದನ್ನು ಕೂಡಲೇ ನಿಲ್ಲಿಸಬೇಕು. ಇದು ಹಳ್ಳಿಕಾರ್ ಜನಾಂಗಕ್ಕೆ ಮಾಡುತ್ತಿರುವ ಅಪಮಾನವಾಗಿದೆ ಎಂದು ಹಳ್ಳಿಕಾರ್ ಸಂರಕ್ಷಕರು ಅಸಮಾಧಾನ ಹೊರ ಹಾಕಿದ್ದಾರೆ. ಹಳ್ಳಿಕಾರ್ ಒಡೆಯ ಎಂದೇ ಕೆಲವರು ವರ್ತೂರ್ ಸಂತೋಷ್‌ನ ಗುರ್ತಿಸುತ್ತಾರೆ. ಆ ರೀತಿ ಆತ ಬಿಂಬಿಸಿಕೊಂಡಿದ್ದಾನೆ. ಆದರೆ ಅದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.

Hallikar protectors Strong Objection On Varthur santhosh over Using Hallikar odeya title

ಬಹಳ ಹಿಂದೆಯೇ ಈ ಹಳ್ಳಿಕಾರ್ ಒಡೆಯ ಬಿರುದು ಬಳಸಿಕೊಳ್ಳುವ ಬಗ್ಗೆ ವರ್ತೂರು ಸಂತೋಷ್ ಜೊತೆ ಚರ್ಚೆ ನಡೆಸಲಾಗಿತ್ತು. ಅಂದಿನ ಸಭೆಯಲ್ಲಿ ವರ್ತೂರು ಸಂತೋಷ್ ಬೆಂಬಲಿಗರು ಹಾಗೂ ಪಾರಂಪರಿಕವಾಗಿ ಹಳ್ಳಿಕಾರ್ ತಳಿ ಸಂರಕ್ಷಣೆ ಮಾಡಿಕೊಂಡು ಬರುತ್ತಿರುವವ ನಡುವೆ ವಾಗ್ವಾದ ನಡೆದು ಸಭೆ ಅರ್ಧಕ್ಕೆ ಮೊಟಕುಗೊಂಡಿತ್ತು. ಇನ್ನು ಬಿಗ್ ಬಾಸ್ ಶೋ ಮುಗಿಸಿ ಹೊರ ಬಂದಮೇಲೆ ಎದುರಾಳಿಗಳಿಗೆ ಸಂತೋಷ್ ಟಾಂಗ್ ಕೊಟ್ಟಿದ್ದರು. ಇದೀಗ ಮಂಡ್ಯದ ಹಳ್ಳಿಕಾರ್ ಸಂರಕ್ಷಕರು, ವರ್ತೂರು ಸಂತೋಷ್ ವಿರುದ್ಧ ಕಾನೂನು ಹೋರಾಟಕ್ಕೆ ಸಜ್ಜಾಗಿದ್ದಾರೆ.

ವರ್ತೂರು ಸಂತೋಷ್ ತಮ್ಮನ್ನು 'ಹಳ್ಳಿಕಾರ್ ಒಡೆಯ' ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಇದು ಮುಂದಿನ ಪೀಳಿಗೆಗೆ ತಪ್ಪು ಸಂದೇಶ ರವಾನೆ ಆದಂತೆ ಆಗುತ್ತದೆ. ಇದೇ ಕಾರಣಕ್ಕೆ ಅಂದು ಸಭೆ ನಡೆಸಿ ಮಾತನಾಡಲು ಪ್ರಯತ್ನಿಸಿದೆವು. ಆದರೆ ಅದು ಫಲಕಾರಿ ಆಗಲಿಲ್ಲ. ಅವರು ಅರ್ಥ ಮಾಡಿಕೊಳ್ಳಲಿಲ್ಲ. ಹಳ್ಳಿಕಾರ್ ತಳಿಗೆ ಇತಿಹಾಸ ಇದೆ. ಪುರಾಣವೇ ಇದೆ. ಹಲವು ವರ್ಷಗಳಿಂದ ಇದನ್ನು ಉಳಿಸಿಕೊಂಡು ಬಂದವರು ಬಹಳ ಜನ ಇದ್ದಾರೆ ಎಂದು ಹಳ್ಳಿಕಾರ್ ಸಂರಕ್ಷಕ ರವಿ ಪಟೇಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Hallikar protectors Strong Objection On Varthur santhosh over Using Hallikar odeya title

ಒಕ್ಕಲಿಗರ ಉಪ ಪಂಗಡ ಹಳ್ಳಿಕಾರ್. ಹಳ್ಳಿಕಾರ್ ಜನಾಂಗವೇ ಒಂದು ಇದೆ. ಅದಕ್ಕೆ ಸೂಕ್ತ ದಾಖಲೆಗಳಿವೆ. ಹೀಗಿರುವಾಗ ಸಮಾಜಕ್ಕೆ ತಪ್ಪು ಕಲ್ಪನೆ ಕೊಡುವುದು ಯಾಕೆ? ನಾವೇ ಹಳ್ಳಿಕಾರ್ ತಳಿ ಸಂರಕ್ಷಕರು ಎಂದು ವರ್ತೂರು ಸಂತೋಷ್ ಬಿಂಬಿಸಿಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ವಿವಿಧ ಭಾಗಗಳಲ್ಲಿ ಹಳ್ಳಿಕಾರ್ ತಳಿಯನ್ನು ರೈತರು ಸಂರಕ್ಷಿಸಿಕೊಂಡು ಬರುತ್ತಿದ್ದಾರೆ. ಆದರೆ ವರ್ತೂರ್ ಸಂತೋಷ್ ತಾವೊಬ್ಬರೇ ಈ ಕಾರ್ಯ ಮಾಡುತ್ತಿರುವುದು. ನಾನು ಹಳ್ಳಿಕಾರ್ ಒಡೆಯ ಎಂದು ಬಿಂಬಿಸಿಕೊಳ್ಳುವುದು ಎಷ್ಟು ಸರಿ? ಇನ್ನು ಗೂಗಲ್‌ನಲ್ಲಿ 'ಛೇರ್ ಮೇನ್ ಆಫ್ ಆಲ್ ಇಂಡಿಯಾ ಹಳ್ಳಿಕಾರ್ ಕನ್ಸರ್ವೇಶನ್' ವರ್ತೂರು ಸಂತೋಷ್ ಎಂದು ತಪ್ಪು ಸಂದೇಶ ನೀಡಲಾಗಿದೆ. ಇದರಿಂದ ಮುಂದೆ ವರ್ತೂರ್ ಸಂತೋಷ್‌ನಿಂದಲೇ ಹಳ್ಳಿಕಾರ್ ತಳಿ ಹುಟ್ಟಿತು ಎನ್ನುವ ತಪ್ಪು ಮಾಹಿತಿ ರವಾನೆ ಆಗುತ್ತದೆ. ಹಾಗಾಗಿ ಗೂಗಲ್ ವಿರುದ್ಧ ಕೂಡ ಕಾನೂನು ಹೋರಾಟ ಮಾಡುತ್ತೇವೆ ಎಂದು ವಿವರಿಸಿದ್ದಾರೆ.

More from Filmibeat

English summary
Hallikar protectors decided to legal action against Varthur santhosh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X