ಸ್ತನ ಕ್ಯಾನ್ಸ್‌ರ್‌ನಿಂದ ಗುಣಮುಖರಾಗುತ್ತಿದ್ದಾರೆ ಕನ್ನಡದ ನಟಿ ಹಂಸ ನಂದಿನಿ
ನಟಿ ಹಂಸ ನಂದಿನಿ ಯಾರಿಗೆ ಗೊತ್ತಿಲ್ಲ ಹೇಳಿ. ಸಿನಿಮಾ ವಿಚಾರಕಿಂತಲೂ ತನ್ನ ಮನೋಸ್ಥೈರ್ಯ ಮತ್ತು ದೈರ್ಯದಿಂದ ಆರೋಗ್ಯ ಸ್ಥಿತಿಯನ್ನು ಗೆದ್ದಿರುವ ಈ ನಟಿ ಕನ್ನಡದ ಮೋಹಿನಿ 'ಮೋಹಿನಿ 88888' ಸಿನಿಮಾದಲ್ಲೂ ನಟಿಸಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿರುವ ಹಂಸ ನಂದಿನಿ ತನ್ನ ಆರೋಗ್ಯ ಸ್ಥಿತಿಯ ಬಗ್ಗೆ ಈ ಹಿಂದೆ ಸಾಮಾಜಿಕ ಜಾಲ ತಾಣದ ಮೂಲಕ ತಿಳಿಸಿದ್ದರು. ಆದಷ್ಟು ಬೇಗ ಇದರಿಂದ ನಾನು ಗುಣಮುಖವಾಗುವ ವಿಶ್ವಾಸ ಇದೆ ಎಂದಿದ್ದರು. ನಟಿಯ ಈ ಪರಿಸ್ಥಿತಿ ಕಂಡು ಅಭಿಮಾನಿಗಳು ಮರುಗಿದ್ದರು, ಆದಷ್ಟು ಬೇಗ ಗುಣಮುಖರಾಗುತ್ತೀರಾ ಎಂದು ಧೈರ್ಯ ತುಂಬಿದ್ದರು.
ಇದೀಗ ನಟಿ ಹಂಸಾ ನಂದಿನಿ ತನ್ನ ಆರೋಗ್ಯ ಸ್ಥಿತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಚೇತರಿಸಿಕೊಳ್ಳುತ್ತಿರುವ ಬಗ್ಗೆ, ಶಸ್ತ್ರ ಚಿಕಿತ್ಸೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ನಟಿ ಹಂಸಾ ನಂದಿನಿ ಅವರು ಕೀಮೋಥೆರಪಿಯನ್ನು ಪೂರ್ಣಗೊಳಿಸಿರುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.ಅಷ್ಟೇ ಅಲ್ಲದೇ ಕೀಮೋಥೆರಪಿಯನ್ನು ಪೂರ್ಣಗೊಳಿಸಿದ ನಂತರ ಶಸ್ತ್ರಚಿಕಿತ್ಸೆಗೆ ಸಜ್ಜಾಗುತ್ತಿದ್ದೇನೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನು ಈ ಹಿಂದೆ ಹಂಸ ನಂದಿನಿ ಫೋಟೊ ಹಂಚಿಕೊಳ್ಳುವುದರ ಜೊತೆಗೆ ಹಂಸ ಅವರ ಸದ್ಯ ಯಾವ ಹಂತದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದನ್ನು ತಿಳಿಸಿದ್ದಾರೆ. ಇನ್ನು ಎಷ್ಟು ದಿನಗಳೂ ಚಿಕಿತ್ಸೆ ಪಡೆಯ ಬೇಕು ಎಂಬ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. "ಜೀವನ ನನಗೆ ಏನು ಕೊಟ್ಟರು ಪರವಾಗಿಲ್ಲ, ಇದು ಅತ್ಯಂತ ಕೆಟ್ಟದ್ದು ಅನಿಸಿದರು ಪರವಾಗಿಲ್ಲ, ಆದರೆ ಇದಕ್ಕೆ ಸಾಕ್ಷಿ ಆಗಲು ನಾನು ಇಷ್ಟ ಪಡುವುದಿಲ್ಲ. ಭಯ ನನ್ನನ್ನು ಆಳಲು ನಾನು ಬಿಡುವುದಿಲ್ಲ, ಧೈರ್ಯ ಮತ್ತು ಪ್ರೀತಿಯಿಂದ ನಾನು ಮುಂದುವರೆಯುತ್ತೇನೆ, ನಾಲ್ಕು ತಿಂಗಳಿನಿಂದ ಚಿಕಿತ್ಸೆ ನಡೆಯುತ್ತಿದೆ. ಈ ಹಿಂದೆ ಖಾಯಿಲೆಯಿಂದಾಗಿ ಅಮ್ಮನನ್ನು ಕಳೆದು ಕೊಂಡ ಕಹಿ ನೆರಳಿನಲ್ಲಿ ಇದ್ದಿದ್ದರಿಂದ ಭಯ ಆಗಿತ್ತು. ಆದರೆ ಬೇಗನೆ ನನ್ನ ಕಾಯಿಲೆ ಗುರುತಿಸಲ್ಪಟ್ಟಿದ್ದು, ವೈದ್ಯರು ಭರವಸೆ ನೀಡಿದ್ದಾರೆ". ಎಂದು ಸುದೀರ್ಘ ಪತ್ರ ಬರೆದು ತನಗೆ ಸ್ತನ ಕ್ಯಾನ್ಸರ್ ಆಗಿರುವ ಬಗ್ಗೆ ಬಹಿರಂಗ ಪಡಿಸದ್ದರು.
ಹಂಸ ನಂದಿನಿ 2004ರಿಂದ ಚಿತ್ರರಂಗದಲ್ಲಿ ಸಕ್ರಿಯ ಆಗಿದ್ದಾರೆ. ಹಲವು ಚಿತ್ರಗಳ ವಿಶೇಷ ಹಾಡಿನಲ್ಲಿ ಹಂಸ ಮಸ್ತ್ ಡ್ಯಾನ್ ಮಾಡಿದ್ದಾರೆ. ಪ್ರಭಾಸ್ ಅಭಿನಯದ 'ಮಿರ್ಚಿ' ಚಿತ್ರದಲ್ಲಿ ವಿಶೇಷ ಹಾಡಿನಲ್ಲಿ ಹಂಸ ಡಾನ್ಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದರು. ಈಕೆ ತೆಲುಗಿನಲ್ಲಿ ಹೆಚ್ಚು ಚಿತ್ರಗಳನ್ನು ಮಾಡಿದ್ದಾರೆ. ಕನ್ನಡದಲ್ಲಿ 'ಮೋಹಿನಿ 8888' ಚಿತ್ರದಲ್ಲಿ ಮಾತ್ರ ಅಭಿನಯಿಸಿದ್ದಾರೆ. ಈ ಚಿತ್ರದ ಮೂಲಕ ಆಗ ಒಂದು ಟ್ರೆಂಡ್ ಹುಟ್ಟು ಹಾಕಿದ್ದರು. ಟೈಟಲ್‌ನಲ್ಲಿ ಇರುವ ನಂಬರ್‌ಗೆ ಕಾಲ್ ಮಾಡಿದರೆ ಮೋಹಿನಿಯ ಧ್ವನಿ ಕೇಳುತ್ತಿತ್ತು. ಇದು ಚಿತ್ರ ಪ್ರಚಾರದ ಒಂದು ಭಾಗ ಆಗಿತ್ತು. ತೆಲುಗಿನ ಸಾಕಷ್ಟು ಚಿತ್ರಗಳಲ್ಲಿ ಈಕೆ ಅತಿಥಿ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.


Click it and Unblock the Notifications











