»   » ಹುಟ್ಟು ಉಚಿತ, ಸಾವು ಖಚಿತ, ಇವೆರಡರ ಮಧ್ಯ ಜೀವನ ಕಿರುಚುತ, ಪರಚುತಾ, ಅರಚುತಾ ...

ಹುಟ್ಟು ಉಚಿತ, ಸಾವು ಖಚಿತ, ಇವೆರಡರ ಮಧ್ಯ ಜೀವನ ಕಿರುಚುತ, ಪರಚುತಾ, ಅರಚುತಾ ...

Subscribe to Filmibeat Kannada

ಮೊನ್ನೆ ಶುಕ್ರವಾರ ಹಂಸಲೇಖಾಗೆ 47 ತುಂಬಿತಂತೆ. ಅವರು ತಮ್ಮ ಹುಟ್ಟುಹಬ್ಬವನ್ನು ಆಕಾಶದಲ್ಲಿ ಆಚರಸಿದರಂತೆ. ಬರವಣಿಗೆಯ ಸ್ಪೂರ್ತಿಗಾಗಿ, ಟ್ಯೂನ್‌ಗಳ ಸೃಷ್ಟಿಗಾಗಿ, ಆಕಾಂಕ್ಷೆಗಳ ಸಾಧನೆಗಾಗಿ ಸದಾ ಆಕಾಶವನ್ನೇ ನೋಡುತ್ತಿರುವ ಹಂಸಲೇಖಾರ ಜನ್ಮದಿನೋತ್ಸವ ಆಕಾಶ್‌ ಸ್ಚುಡಿಯೋ ದಲ್ಲೇ ನಡೆದದ್ದು ಅರ್ಥಪೂರ್ಣ ಎಂದು ಅವರ ಅಭಿಮಾನಿಗಳು ವ್ಯಾಖ್ಯಾನ ಮಾಡುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಹಂಸಲೇಖಾ ಆಕಾಶಗಾಮಿಯಾಗುವುದಕ್ಕೆ ಇನ್ನೂ ಒಂದು ಕಾರಣವಿತ್ತು. ಕಳೆದ ಶುಕ್ರವಾರ ಜೂನ್‌ 23ರಂದೇ ಆಕಾಶ್‌ ಜನ್ಮ ತಾಳಿದ್ದು. ಆಕಾಶ್‌ಗೆ 4 ತುಂಬಿದರೆ ಹಂಸಲೇಖಾಗೆ 47 ವರ್ಷ. ಜೊತೆಗೆ ರಾಜ್‌ಕುಮಾರ್‌ ನಾಯಕತ್ವದ ಭಕ್ತ ಅಂಬರೀಷ್‌ ಚಿತ್ರದ ಹಾಡುಗಳ ರೆಕಾರ್ಡಿಂಗ್‌ ಆಕಾಶ್‌ನಲ್ಲಿಯೇ ನಡೆಯುತ್ತಿದೆ. ಹಾಗಾಗಿ ಇಂಥಾದ್ದೊಂದು ಜಂಟಿ ಹುಟ್ಟು ಹಬ್ಬ ಕಾರ್ಯಕ್ರಮವನ್ನು ಆಕಾಶ್‌ ಮಾಲಿಕ ಮಧು ಬಂಗಾರಪ್ಪ ಸಂಯೋಜಿಸಿದ್ದರು. ಇತ್ತೀಚೆಗೆ ಸಿನಿಮಾಗೆ ಸಂಬಂಧಿಸಿದ ಪ್ರತಿಯಾಂದು ಕಾರ್ಯಕ್ರಮವನ್ನೂ ಒಂದು ಹಬ್ಬವಾಗಿ, ಸಾರ್ವಜನಿಕ ಉತ್ಸವವಾಗಿ ಆಚರಿಸುವ ತಂತ್ರದಲ್ಲಿ ಮಧು ಯಶ ಕಂಡಿದ್ದಾರೆ. ವಿಶೇಷವೆಂದರೆ ಹಂಸಲೇಖಾಗೆ ಈ ಸಂಗತಿ ಗೊತ್ತಾಗಿದ್ದು ಶುಕ್ರವಾರ ಸ್ಟೂಡಿಯೋ ಒಳಗೆ ಕಾಲಿಟ್ಟ ನಂತರವೇ. ಅಲ್ಲಿ ಅವರಿಗಾಗಿ ಕೇಕ್‌ ಕಾದು ಕುಳಿತಿತ್ತು.

ಬರ್ತ್‌ಡೇ ಬಾಯ್‌ ಅವತ್ತು ನೀಡಿದ ಸಂದೇಶ ಹೀಗಿತ್ತು : ಹೆಚ್ಚು ಕಡಿಮೆ ಹಂಸ ವಿರಚಿತ ತರಲೆ ಗೀತೆಗಳನ್ನೇ ಹೋಲುವ ಈ ಸಾಲಿಗೆ ಎಲ್ಲರೂ ಬಿದ್ದು ಬಿದ್ದು ನಕ್ಕರು. ಹುಟ್ಟುಹಬ್ಬದ ಸಡಗರ ಅಲ್ಲಿಗೇ ಮುಗಿಯಲಿಲ್ಲ. ಮತ್ತೆ ಆ ದಿನ ಸಂಜೆ ಹಂಸ ಪತ್ನೀ ಸಮೇತರಾಗಿ ಆಕಾಶದೆಡೆ ಬಂದರು. ಇಬ್ಬರೂ ಕೇಕ್‌ನಲ್ಲಿ ಮಿಂದರು. ಮಧು ಬಂಗಾರಪ್ಪ ಒಂದು ಉಡುಗೊರೆ ನೀಡಿದರು. ಹಂಸಲೇಖಾ ಸೈಜಿನ ಬೃಹತ್‌ ಫೋಟೋ. ಅದರಲ್ಲಿ ನೀವು ಕನ್ನಡ ನಾಡಿನ ಅಪರೂಪದ ಮುತ್ತು, ನಿಮ್ಮಿಂದ ಸಿಗಬೇಕು ನಮಗೆ ಸದಾ ಸಿಹಿ ಮುತ್ತು ಎಂಬ ಹಾರೈಕೆಯಿತ್ತು. ಹಂಸಲೇಖಾ ಕಣ್ಣಲ್ಲಿ ಆನಂದ ಬಾಷ್ಪ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada