twitter
    For Quick Alerts
    ALLOW NOTIFICATIONS  
    For Daily Alerts

    ನಾದಬ್ರಹ್ಮನಿಗೆ 70ರ ಸಂಭ್ರಮ: 'ಹಂಸಲೇಖ' ಹೆಸರು ಬಂದದ್ದು ಹೇಗೆ?

    |

    ನಾದಬ್ರಹ್ಮ ಹಂಸಲೇಖ ಅವರ 70ನೇ ವರ್ಷದ ಹುಟ್ಟುಹಬ್ಬ ಇಂದು. ಹಂಸಲೇಖರ ಜೀವನವನ್ನು ಸಂಗೀತ ಸಾಧನೆಯನ್ನು ಕೆಲವು ನೂರು ಪದಗಳಲ್ಲಿ ಹಿಡಿದಿಡುವುದು ಅಸಾಧ್ಯ. ಸಿನಿಮಾ ಸಂಗೀತ ಕ್ಷೇತ್ರದಲ್ಲಿ ಅವರು ಮೂಡಿಸಿದ ಛಾಪಿನ ಕಿರು ನೋಟವನ್ನಷ್ಟೆ ಇಲ್ಲಿ ನೀಡಲಾಗಿದೆ.

    Recommended Video

    Hamsalekha - ರವಿಚಂದ್ರನ್ ದಾಖಲೆ ಯಾರಿಂದಲೂ ಅಳಿಸೋಕೆ ಸಾಧ್ಯವಿಲ್ಲ | Oneindia Kannada

    ಗೋವಿಂದರಾಜು, ರಾಜಮ್ಮ ದಂಪತಿಯ ಪುತ್ರನಾಗಿ ಬೆಂಗಳೂರಿನಲ್ಲಿಯೇ 1951 ರ ಜೂನ್ 23 ರಂದು ಜನಿಸಿದರು ಹಂಸಲೇಖ. ಅವರ ಮೂಲ ಹೆಸರು ಗಂಗರಾಜು.

    ವಿದ್ಯಾಭ್ಯಾಸ ಮುಗಿಸಿ ತಂದೆಯ ಪ್ರೆಸ್‌ನಲ್ಲಿ ಕೆಲಸ ಮಾಡಲು ಆರಂಭಿಸಿದ ಗಂಗರಾಜುಗೆ ಸಂಗೀತದ ಬಗ್ಗೆ ಅಪಾರ ಒಲವು. ಅವರ ಅಣ್ಣ ಬಾಲಕೃಷ್ಣ ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಿದ್ದರು. ಗಂಗರಾಜು ಸಹ ಆರ್ಕೇಸ್ಟ್ರಾಗಳಲ್ಲಿ ಹಾಡಲು ಪ್ರಾರಂಭಿಸಿದರು.

    ಹಾಡುವ ಜೊತೆಗೆ ಕವಿತೆಗಳನ್ನು ಬರೆದು ಅದಕ್ಕೆ ಅವರೇ ಟ್ಯೂನ್ ಸಹ ಹಾಕುತ್ತಿದ್ದರು. ಅದು ಅವರ ಮೆಚ್ಚಿನ ಹವ್ಯಾಸವಾಗಿತ್ತು. ಸಿನಿಮಾ ರಂಗಕ್ಕೆ ಬರುವ ಮುನ್ನವೇ ಗಂಗರಾಜು ಹಂಸಲೇಖ ಆಗಿದ್ದರು. ಈ ಹೆಸರನ್ನು ತಮಗೆ ತಾವೇ ಇಟ್ಟುಕೊಂಡಿದ್ದರು.

    'ಹಂಸಲೇಖ' ಹೆಸರು ಬಂದಿದ್ದು ಹೇಗೆ?

    'ಹಂಸಲೇಖ' ಹೆಸರು ಬಂದಿದ್ದು ಹೇಗೆ?

    ಗಂಗರಾಜು 'ಸ್ವಾನ್' (ಕನ್ನಡದಲ್ಲಿ ಹಂಸ ಎಂದರ್ಥ) ಹೆಸರಿನ ಪೆನ್ನಿನಿಂದ ಕವನಗಳನ್ನು ಬರೆಯುತ್ತಿದ್ದರು. ಹಾಗಾಗಿಯೇ ಅವರ ಹೆಸರನ್ನು 'ಹಂಸಲೇಖನಿ' ಎಂದು ಇಟ್ಟುಕೊಂಡರು. ಅದೇ ಹೆಸರಿನಿಂದ ಕವನಗಳನ್ನು ಬರೆಯುತ್ತಿದ್ದರು. ಆ 'ಸ್ವಾನ್' ಪೆನ್ನನ್ನು ಅವರ ಗುರುಗಳಾದ ಲಾವಣಿ ನೀಲಕಂಠಪ್ಪ ನೀಡಿದ್ದರು. ಆದರೆ ನಂತರ 'ಹಂಸಲೇಖನಿ' ಹೆಸರನ್ನು 'ಹಂಸಲೇಖ' ಎಂದು ಬದಲಾಯಿಸಿದ್ದು ಅವರ ಶಿಕ್ಷಕರೊಬ್ಬರು.

    ಮೊದಲ ಹಾಡು ಯಾವುದು?

    ಮೊದಲ ಹಾಡು ಯಾವುದು?

    1973ರಲ್ಲಿ ಬಿಡುಗಡೆ ಆದ 'ತ್ರಿವೇಣಿ' ಸಿನಿಮಾದ 'ನೀನಾ ಭಗವಂತ' ಹಾಡು ಹಂಸಲೇಖ ಮೊದಲ ಬಾರಿಗೆ ಸಿನಿಮಾಕ್ಕೆ ಬರೆದ ಹಾಡು. ನಂತರ 1981 ರಲ್ಲಿ 'ರಾಹುಚಂದ್ರ' ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡಿದರು. ಆದರೆ ಸಿನಿಮಾ ಬಿಡುಗಡೆ ಆಗಲಿಲ್ಲ. ಅಧಿಕೃತವಾಗಿ ಸಾಹಿತ್ಯ ಮತ್ತು ಸಂಭಾಷಣೆಕಾರರಾಗಿ ಹಂಸಲೇಖ ಪಾದಾರ್ಪಣೆ ಮಾಡಿದ್ದು ರವಿಚಂದ್ರನ್ ನಟನೆಯ 'ನಾನು ನನ್ನ ಹೆಂಡ್ತಿ' ಸಿನಿಮಾ ಮೂಲಕ. ಆ ಸಿನಿಮಾದ ಹಾಡುಗಳು ಬಹಳ ಫೇಮಸ್ ಆದವು.

    'ಪ್ರೇಮಲೋಕ' ಬೆಳಕಿಗೆ ಬಂದ ಬೃಹತ್ ಪ್ರತಿಭೆ

    'ಪ್ರೇಮಲೋಕ' ಬೆಳಕಿಗೆ ಬಂದ ಬೃಹತ್ ಪ್ರತಿಭೆ

    ನಂತರ ರವಿಚಂದ್ರನ್ ನಿರ್ದೇಶಿಸಿ ನಟಿಸಿದ 'ಪ್ರೇಮಲೋಕ' ಸಿನಿಮಾಕ್ಕೆ ಹಂಸಲೇಖ ಸಂಗೀತ ನೀಡಿದರು. ಆ ಸಿನಿಮಾ ದೊಡ್ಡ ದಾಖಲೆಯನ್ನೇ ಬರೆದುಬಿಟ್ಟಿತು. ಅಂದಿನಿಂದ ದಶಕಗಳ ಕಾಲ ಕನ್ನಡದ ನಂಬರ್ 1 ಸಂಗೀತ ನಿರ್ದೇಶಕರಾಗಿ ಹಂಸಲೇಖ ರಾರಾಜಿಸಿತು. ರವಿಚಂದ್ರನ್-ಹಂಸಲೇಖ ಜೋಡಿ ಮಾಡಿದ ಮೋಡಿ ಸುಲಭಕ್ಕೆ ಅಳಿಸುವಂತಹದ್ದಲ್ಲ.

    ಕತೆ, ಚಿತ್ರಕತೆ ಬರೆದಿದ್ದಾರೆ ಸಹ

    ಕತೆ, ಚಿತ್ರಕತೆ ಬರೆದಿದ್ದಾರೆ ಸಹ

    ಸಂಗೀತ ಮಾತ್ರವೇ ಅಲ್ಲದೆ ಸಿನಿಮಾ ನಿರ್ದೇಶನವನ್ನೂ ಮಾಡಿದ್ದಾರೆ ಹಂಸಲೇಖ. ಮಗ ಅಲಂಕಾರ್‌ಗಾಗಿ 'ಸುಗ್ಗಿ' ಹೆಸರಿನ ಸಿನಿಮಾ ಮಾಡಿದರು ಆದರೆ ಆ ಸಿನಿಮಾ ಬಿಡುಗಡೆ ಆಗಲಿಲ್ಲ. 2015 ರಲ್ಲಿ 'ಸೂಜಿ ಮಲ್ಲಿಗೆ' ಹೆಸರಿನ ಸಿನಿಮಾ ಘೋಷಿಸಿದ್ದರು ಆದರೆ ಅದೂ ಸಹ ಪೂರ್ಣವಾಗಲಿಲ್ಲ. ಹೊರತುಪಡಿಸಿದರೆ, 'ಅವನೇ ನನ್ನ ಗಂಡ', 'ಗಂಧರ್ವ', 'ಶಾಪ' ಸಿನಿಮಾಗಳಿಗೆ ಕತೆ ಬರೆದಿದ್ದಾರೆ. 'ನಿಮ್ಮಜ್ಜಿ', 'ಗಂಧರ್ವ' ಸಿನಿಮಾಕ್ಕೆ ಚಿತ್ರಕತೆ ಬರೆದಿದ್ದಾರೆ. ರವಿಚಂದ್ರನ್ ನಿರ್ದೇಶನದ ಹಲವು ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದಾರೆ ಹಂಸಲೇಖ.

    English summary
    Hamsalekha turning 70 today. Hamsalekha gave music to more than 300 movies. He gave many memorable songs to Kannada movie industry.
    Wednesday, June 23, 2021, 12:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X