'ಬ್ರೇಕಿಂಗ್ ನ್ಯೂಸ್' ವಿರುದ್ಧ ಹಂಸಲೇಖ ಬೇಸರ: 'ವಾಹಿನಿ ಅಂದರೆ ಮೋಹಿನಿ' ಎಂದ ಮನೋಹರ್!

By Naveen

ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ ಈಗ ಸುದ್ದಿ ವಾಹಿನಿಗಳ ವಿರುದ್ಧ ಬೇಸರಗೊಂಡಿದ್ದಾರೆ. ನಾ ಮುಂದು ತಾ ಮುಂದು ಎಂದು ಬ್ರೇಕಿಂಗ್ ನ್ಯೂಸ್ ಹಾಕುವವರ ಬಗ್ಗೆ ಕೋಪಗೊಂಡಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಇತ್ತೀಚಿಗಷ್ಟೆ ಹೊರ ಬಂದ ಒಂದು ಸುದ್ದಿ.

ಹೌದು, ಕಳೆದ ಮಂಗಳವಾರ ಸಂಜೆ ಹಂಸಲೇಖ ಅವರಿಗೆ ಹೃದಯಘಾತ ಆಗಿದೆ ಎಂದು ಕೆಲವು ಸುದ್ದಿ ವಾಹಿನಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಬಂದಿತ್ತು. ಈ ಸುದ್ದಿ ನೋಡಿ ಹಂಸಲೇಖ ಅಭಿಮಾನಿಗಳು ಮತ್ತು ಅವರ ಚಿತ್ರರಂಗದ ಸ್ನೇಹಿತರು ಆತಂಕಗೊಂಡಿದ್ದರು. ಆದರೆ ವಾಸ್ತವವಾಗಿ ಹಂಸಲೇಖ ಆಸ್ಪತ್ರೆಗೆ ಹೋಗಿದ್ದು ರೆಗ್ಯೂಲರ್ ಚಕಪ್ ಗೆ ಅಷ್ಟೆ ಅಂತೆ.

ಈ ರೀತಿ ಏನು ಇಲ್ಲದ ಸಣ್ಣ ಸುದ್ದಿಯನ್ನು ದೊಡ್ಡದಾಗಿ ಬ್ರೇಕಿಂಗ್ ನ್ಯೂಸ್ ಮಾಡಿದ್ದಾರೆ ಎಂದು ಹಂಸಲೇಖ ತಮ್ಮ ಅಸಮಾದಾನವನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚಿಗೆ ಸುದ್ದಿ ವಾಹಿನಿಯಲ್ಲಿ ಹಂಸಲೇಖ ಬಗ್ಗೆ ಬ್ರೇಕಿಂಗ್ ನ್ಯೂಸ್ ಬಗ್ಗೆ ಸಂಗೀತ ನಿರ್ದೇಶನ ವಿ ಮನೋಹರ್ ಮತ್ತು ಹಂಸಲೇಖ ಮಾತನಾಡಿದ್ದಾರೆ. ಮುಂದೆ ಓದಿ..

ನ್ಯೂಸ್ ಬೇಕು ಆದರೆ ಬ್ರೇಕಿಂಗ್ ನ್ಯೂಸ್ ಬೇಕಾಗಿಲ್ಲ

ನ್ಯೂಸ್ ಬೇಕು ಆದರೆ ಬ್ರೇಕಿಂಗ್ ನ್ಯೂಸ್ ಬೇಕಾಗಿಲ್ಲ

''ನ್ಯೂಸ್ ಬೇಕು. ಆದರೆ ಈ ಬ್ರೇಕಿಂಗ್, ಬೇಕಿಂಗ್ ನ್ಯೂಸ್ ಬೇಕಾಗಿಲ್ಲ. ಯಾಕಾಂದ್ರೆ, ಜನ ಈಗ ಅದನ್ನು ನೋಡಿ.. ನೋಡಿ.. ಅದನ್ನು ನಂಬದ ಸ್ಥಿತಿಗೆ ಬಂದಿದ್ದಾರೆ. ವಾಹಿನಿ ಅಂದರೆ ಮೋಹಿನಿ ತರ ಆಗಿದೆ.'' ಎಂದು ಸುದ್ದಿ ಮಾಧ್ಯಮದ ಬಗ್ಗೆ ಇರುವ ತಮ್ಮ ಬೇಸರವನ್ನು ವಿ.ಮನೋಹರ್ ಮತ್ತು ಹಂಸಲೇಖ ಹೇಳಿಕೊಂಡಿದ್ದಾರೆ.

ವಾಹಿನಿ ಅಂದರೆ ಮೋಹಿನಿ ತರ ಆಗಿದೆ

ವಾಹಿನಿ ಅಂದರೆ ಮೋಹಿನಿ ತರ ಆಗಿದೆ

''ಈಗ ವಾಹಿನಿ ಅಂದರೆ ಸುಳ್ಳು ಸುದ್ದಿಗಳ ಮೋಹಿನಿ ತರ ಆಗಿದೆ. ಈ ರೀತಿಯ ಸುದ್ದಿ ಹಬ್ಬಿಸುವುದರಿಂದ ಅಭಿಮಾನಿಗಳಿಗೆ ಒಂದು ರೀತಿಯ ಆತಂಕ, ಶಾಕ್ ಆಗುತ್ತದೆ. ಹಾಗಾಗಿ ಬ್ರೇಕಿಂಗ್ ನ್ಯೂಸ್, ಬೇಕಿಂಗ್ ನ್ಯೂಸ್ ಅನ್ನು ಮಾಡುವುದು ಬೇಕಿಲ್ಲ. ಹಂಸಲೇಖ ಅವರಿಗೆ ಏನು ಆಗಿಲ್ಲ. ಅವರು ಆರೋಗ್ಯವಾಗಿ ಇದ್ದಾರೆ. ಅವರ ಮನೆಯಲ್ಲಿ ಟ್ಯೂನ್ ಕಂಪೋಸ್ ಮಾಡುತ್ತಿದ್ದಾರೆ. ಹಂಸಲೇಖ ಅವರ ಆರೋಗ್ಯ ಸ್ಟ್ರಾಂಗ್ ಆಗಿದೆ. ಅದು ಇನ್ನೂ ಸ್ಟ್ರಾಂಗ್ ಆಗುತ್ತಾ ಹೋಗುತ್ತದೆ. ಅವರ ಮೇಲೆ ಎಷ್ಟೊ ಅಭಿಮಾನಿಗಳ ಆರೈಕೆ, ಪ್ರೀತಿ ಇದೆ. ಎಂದು ವಿ.ಮನೋಹರ್ ಹೇಳಿದ್ದಾರೆ.

ಸುದ್ದಿಗೂ ಹಿಂದೆ ಒಂದು ಬುದ್ದಿ ಬೇಕು

''ನಾನು ಆಸ್ಪತ್ರೆಗೆ ಹೋಗಿ ಒಂದು ಇಂಜಕ್ಷನ್ ತೆಗೆದುಕೊಳ್ಳಬಾರದಾ?. ಇಂಜಕ್ಷನ್ ತೆಗೆದುಕೊಳ್ಳುವುದಕ್ಕೆ ಹೋದರೆ, 'ಡಾಕ್ಟರ್ ಹತ್ತಿರ ಹೋಗಿದ್ದಾರೆ... ಹೃದಯಘಾತ ಆಗಿದೆ...' ಹೀಗೆಲ್ಲ ಮಾಡಿದರೆ ಏನು ಮಾಡುವುದು ?. ಸುದ್ದಿ ಬೇಕು, ಆದರೆ ಸುದ್ದಿಗೂ ಹಿಂದೆ ಒಂದು ಬುದ್ದಿ ಬೇಕು. ನನಗೆ ಏನೂ ಆಗಿಲ್ಲ. ಆತಂಕ ಪಡಬೇಡಿ. ನಾನು ಹೋಗಿದ್ದು ರೆಗ್ಯೂಲರ್ ಚೆಕಪ್ ಗೆ ಅಷ್ಟೇ. ಆದ್ರೆ, ಆತಂಕದಲ್ಲಿ ಬೇರೆಯದ್ದೇ ಸುದ್ದಿ ಹರಡಿದೆ'' ಎಂದು ಹಂಸಲೇಖ ಸ್ಪಷ್ಟ ಪಡಿಸಿದ್ದಾರೆ.

14 ವರ್ಷ ಹಿಂದೆ ಬೈಪಾಸ್ ಸರ್ಜರಿ ಆಗಿದೆ

14 ವರ್ಷ ಹಿಂದೆ ಬೈಪಾಸ್ ಸರ್ಜರಿ ಆಗಿದೆ

ಜೊತೆಗೆ ನಿನ್ನೆ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಲೈವ್ ಬಂದಿದ್ದ ಹಂಸಲೇಖ ''ನನಗೆ ಹೃದಯ ಶಸ್ತ್ರ ಚಿಕಿತ್ಸೆಯಾಗಿ 14 ವರ್ಷ ಆಗಿದೆ. ಅದನ್ನ ಬೈಪಾಸ್ ಸರ್ಜರಿ ಅಂತ್ತಾರೆ. 14 ವರ್ಷದಿಂದ ಪ್ರತಿ 6 ತಿಂಗಳಿಗೊಂದು ಸಲ ಚೆಕಪ್ ಮಾಡಿಸಿಕೊಳ್ಳುವುದು ವಾಡಿಕೆ. ಹಾಗಾಗಿಯೇ ಮೊನ್ನೆ ಚೆಕಪ್ ಮಾಡಿಸಿಕೊಳ್ಳುವ ಉದ್ದೇಶದಿಂದ ಆಸ್ಪತ್ರೆಗೆ ಹೋಗಿದ್ದೆ. ಸರಿಗಮಪ ಸೆಟ್ ನಲ್ಲಿ ಕೂತಿದ್ದಾಗ ಎದ್ದು ಹೋಗಿದ್ದು ಇಷ್ಟು ದೊಡ್ಡ ಸುದ್ದಿಯಾಗಲು ಕಾರಣವಾಗಿದೆ'' ಎಂದು ಹೇಳುವ ಮೂಲಕ ಅಭಿಮಾನಿಗಳಲ್ಲಿ ಕಾಡುತ್ತಿದ್ದ ಆತಂಕಕ್ಕೆ ತೆರೆ ಎಳೆದಿದ್ದಾರೆ.

More from Filmibeat

English summary
Kannada legend music director hamsalekha has taken his facebook account to give clarification about his health condition. presently, hamsalekha is very good and he participate in zee kannada shooting.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X