»   » ಸಂಗೀತ ನಿರ್ದೇಶಕ ಹಂಸಲೇಖ ಆಸ್ಪತ್ರೆಗೆ ದಾಖಲು

ಸಂಗೀತ ನಿರ್ದೇಶಕ ಹಂಸಲೇಖ ಆಸ್ಪತ್ರೆಗೆ ದಾಖಲು

Posted By:
Subscribe to Filmibeat Kannada
ಅಸ್ವಸ್ಥರಾದ ನಾದಬ್ರಹ್ಮ | Filmibeat Kannada

ಕನ್ನಡ ಸಿನಿಮಾರಂಗದ ನಾದಬ್ರಹ್ಮ ಸಂಗೀತ ನಿರ್ದೇಶಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸರಿಗಮಪ ರಿಯಾಲಿಟಿ ಶೋ ಚಿತ್ರೀಕರಣದ ವೇಳೆ ಸಣ್ಣದಾಗಿ ಎದೆ ನೋವು ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ಹಂಸಲೇಖ ಅವರನ್ನು ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸರಿಗಮಪ ಕಾರ್ಯಕ್ರಮದಲ್ಲಿ ಮಹಾಗುರುಗಳಾಗಿ ಕಾಣಿಸಿಕೊಳ್ಳುತ್ತಿರುವ ಹಂಸಲೇಖ ಅವರಿಗೆ ಈ ಹಿಂದೆ ಕೂಡ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದ್ದ ಕಾರಣ ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು .

Hamsalekha has been admitted to the hospital

ಸರಿಗಮಪ ಕಾರ್ಯಕ್ರಮ ಚಿತ್ರೀಕರಣ ಆಗುತ್ತಿದ್ದ ವೇಳೆಯಲ್ಲಿಯೇ ಎದೆ ನೋವಾಗುತ್ತಿದೆ ಎಂದು ತಿಳಿಸಿದ ತಕ್ಷಣ ಕಾರ್ಯಕ್ರಮದ ಆಯೋಜಕರು ಬನ್ನೇರುಘಟ್ಟದ ಸಾಗರ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದಾರೆ ಎನ್ನಲಾಗಿದೆ. ಆದರೆ ವೈದ್ಯರಿಂದಾಗಲೀ ಹಂಸಲೇಖ ಅವರ ಕುಟುಂಬದವರಿಂದಾಗಲಿ ಅಧಿಕೃತವಾಗಿ ಸ್ಪಷ್ಟ ಪಡಿಸಿಲ್ಲ.

English summary
Kannada music director Hamsalekha admitted to hospital. Hamsalekha is getting treatment in Fortis Hospital in Cunningham road, Bengaluru. During reality show shooting he collapsed complaining about chest pain

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X