twitter
    For Quick Alerts
    ALLOW NOTIFICATIONS  
    For Daily Alerts

    'ಶಕುಂತ್ಲೆ' ಬಳಿಕ ಮತ್ತೊಂದು ಐತಿಹಾಸಿಕ ಚಿತ್ರದತ್ತ ಹಂಸಲೇಖ ಒಲವು

    By Naveen
    |

    Recommended Video

    ಶಕುಂತಲೆ ಬಳಿಕೆ ಬೇರೆಯವರ ಮೇಲೆ ಹಂಸಲೇಖ ಕಣ್ಣು | Oneindia Kannada

    ಒಂದು ಕಡೆ ಸರಿಗಮಪ ಕಾರ್ಯಕ್ರಮದ ಮಹಾಗುರು ಆಗಿರುವ ಸಂಗೀತ ನಿರ್ದೇಶಕ ಹಂಸಲೇಖ ಇನ್ನೊಂದು ಕಡೆ ಸಿನಿಮಾ ನಿರ್ದೇಶನವನ್ನು ಕೂಡ ಶುರು ಮಾಡಿದ್ದರು. ನಾದಬ್ರಹ್ಮ 'ಶಕುಂತ್ಲೆ' ಸಿನಿಮಾ ಮಾಡುವ ವಿಚಾರ ಈ ಹಿಂದೆಯೇ ಸುದ್ದಿ ಆಗಿತ್ತು. ಆದರೆ ವಿಶೇಷ ಎಂದರೆ, ಈ ಚಿತ್ರದ ಬಳಿಕ ಹಂಸಲೇಖ ಮತ್ತೊಂದು ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರಂತೆ.

    ಹಂಸಲೇಖ ಅವರನ್ನು ಮಾಂಸದ ಮುದ್ದೆ ಎಂದು ದೂರ ತಳ್ಳಿದ್ದರು! ಹಂಸಲೇಖ ಅವರನ್ನು ಮಾಂಸದ ಮುದ್ದೆ ಎಂದು ದೂರ ತಳ್ಳಿದ್ದರು!

    ಐತಿಹಾಸಿಕ ಸಿನಿಮಾದತ್ತ ಒಲವು ಹೊಂದಿರುವ ಹಂಸಲೇಖ ಸದ್ಯ 'ಗಂಡುಗಲಿ ವೀರ ಮದಕರಿ ನಾಯಕ' ಹಾಗೂ 'ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕ' ಬಗ್ಗೆ ಹೆಚ್ಚಿನ ವಿವರಗಳನ್ನು ಕಲೆ ಹಾಕುತ್ತಿದ್ದಾರಂತೆ. 'ಶಕುಂತ್ಲೆ' ನಂತರ ಇವುಗಳಲ್ಲಿ ಯಾವುದಾದರು ಒಂದು ಸಿನಿಮಾವನ್ನು ಅವರು ಮಾಡುವ ಸಾಧ್ಯತೆ ಇದೆ. ಸದ್ಯ ಸಿನಿಮಾಗೆ ಬೇಕಾದ ತಯಾರಿಯಲ್ಲಿ ಅವರು ನಿರತರಾಗಿದ್ದು, ಈ ವಿಷಯಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದಾರಂತೆ.

    Hamsalekha planing to directing a story on Gandugali Madakari Nayaka or Raja Bichhugathii Baramanna Nayaka.

    ಈ ವರ್ಷದ ಹಂಸಲೇಖ ಅವರ ಹುಟ್ಟುಹಬ್ಬದ ದಿನ ಅಂದರೆ ಜೂನ್ 23ಕ್ಕೆ ಹೊಸ ಸಿನಿಮಾ ಅಧಿಕೃತವಾಗಿ ಅನೌನ್ಸ್ ಆಗಲಿದೆ. ಕನ್ನಡದಲ್ಲಿ ಈಗ ಒಂದು ಕಡೆ ಪೌರಾಣಿಕ ಸಿನಿಮಾಗಳು ಮತ್ತೆ ಶುರು ಆಗಿದ್ದರೆ, ಇತ್ತ ಐತಿಹಾಸಿಕ ಚಿತ್ರಗಳು ಸಹ ಮರು ಜೀವ ಪಡೆದುಕೊಳ್ಳುತ್ತಿವೆ.

    ಸರಿಗಮಪ ಕಾರ್ಯಕ್ರಮ ಇದೇ ಶನಿವಾರ ಮುಗಿಯಲಿದ್ದು, ಆ ನಂತರ ಹಂಸಲೇಖ ತಮ್ಮ ಸಂಪೂರ್ಣ ಸಮಯವನ್ನು 'ಶಕುಂತ್ಲೆ' ಸಿನಿಮಾಗೆ ಮೀಸಲಿಡಲಿದ್ದಾರೆ. ಈ ಸಿನಿಮಾವನ್ನು ಕನ್ನಡ ಮತ್ತು ಹಿಂದಿ ಎರಡು ಭಾಷೆಗಳಲ್ಲಿ ಮಾಡುವ ಆಲೋಚನೆ ಅವರದ್ದಾಗಿದೆ.

    English summary
    Kannada music director, Nadabrahma Hamsalekha planing to directing a story on Gandugali Madakari Nayaka or Raja Bichhugathii Baramanna Nayaka.
    Wednesday, May 23, 2018, 10:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X