twitter
    For Quick Alerts
    ALLOW NOTIFICATIONS  
    For Daily Alerts

    ಅಮ್ಮನೇ ಮಹಾಗುರು ಎನ್ನುತ್ತಾರೆ ನಾದಬ್ರಹ್ಮ ಹಂಸಲೇಖ

    By ಶಶಿಕರ ಪಾತೂರು
    |

    ಅಮ್ಮನ ಕುರಿತಾದ ಹಾಡುಗಳು ಎಂದೊಡನೆ "ಅಮ್ಮಯ್ಯ ಅಮ್ಮಯ್ಯ ಬಾರೇ.." ಎನ್ನುವ ಚಿತ್ರಗೀತೆ ಮುಂದಿನ ಪಂಕ್ತಿಯಲ್ಲಿ ಬಂದು ನಿಲ್ಲುತ್ತದೆ. ಆ ಹಾಡಿನ ಸೃಷ್ಟಿಕರ್ತೃ ಹಂಸಲೇಖ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅಮ್ಮನ ಬಗ್ಗೆ ಅವರು ಆಡುವ ಮಾತುಗಳು ತುಂಬ ಔಚಿತ್ಯ ಪೂರ್ಣವಾಗಿರುವಂಥದ್ದು.

    'ಫಿಲ್ಮೀಬೀಟ್ ಕನ್ನಡ' ಜೊತೆಗೆ ಅವರು ಹಂಚಿಕೊಂಡಂಥ ಸಂಗತಿಗಳು ಅಷ್ಟೇ ಪ್ರಾಮುಖ್ಯವಾದವು ಕೂಡ. "ನನ್ನನ್ನು ರಿಯಾಲಿಟಿ ಶೋನಲ್ಲಿ 'ಮಹಾಗುರು' ಎಂದು ಬಿಡುತ್ತಾರೆ. ನಿಜ ಹೇಳಬೇಕೆಂದರೆ ನಮ್ಮಲ್ಲಿ ಅಂಥ ದೊಡ್ಡ ಸಾಧಕರಿಲ್ಲ. ಮೇರು ಪ್ರತಿಭೆಗಳು ಯಾರೂ ಉಳಿದುಕೊಂಡಿಲ್ಲ. ಸಿಕ್ಕವರಿಗೆ ಒಂದು ಬಿರುದನ್ನು ಸುಲಭವಾಗಿ ಕೊಟ್ಟು ಬಿಡುತ್ತಾರೆ. ನಿಜ ಹೇಳಬೇಕೆಂದರೆ ಇಂದು ಎಲ್ಲರಿಗೂ ಗುರುವಾಗಿ ಯಾರಾದರೂ ಇದ್ದರೆ ಅದು ತಾಯಿ ಮಾತ್ರ.

    ತಾಯಿಯ ತ್ಯಾಗ ನೆನೆದ ಸ್ಯಾಂಡಲ್ ವುಡ್ ಸ್ಟಾರ್ಸ್ ತಾಯಿಯ ತ್ಯಾಗ ನೆನೆದ ಸ್ಯಾಂಡಲ್ ವುಡ್ ಸ್ಟಾರ್ಸ್

    ಮಹಾಗುರು, ವಿಶ್ವಗುರು ಎಲ್ಲವೂ ಆಕೆಯೇ. ನಮಗೆ ನಾಳೆಗಳನ್ನು ಕಟ್ಟಿಕೊಡುವಾಕೆ ಆಕೆ. ನಮ್ಮ ಸುಂದರವಾದ ನಾಳೆಗಳನ್ನು ತೋರಿಸುವವಳು ತಾಯಿ.''ನಾನು ಹದಿಮೂರನೇ ಮಗ! ನನ್ನಮ್ಮನಿಗೆ ನಾನು ಹದಿಮೂರನೇ ಸಂತಾನ. ಹನ್ನೆರಡು ಸ್ವರಗಳ ಬಳಿಕ ಜನಿಸಿದ ಹೊಸ ಸ್ವರ ನಾನು. ಆಕೆ ಹನ್ನೆರಡಕ್ಕೆ ಪ್ರಸವ ನಿಲ್ಲಿಸಿದ್ದಲ್ಲಿ ನಾನು ಇಂದು ಜಗತ್ತಿನಲ್ಲಿ ಇರುತ್ತಿರಲಿಲ್ಲ.

    hamsalekha says mother is a real mahaguru

    ತಂದೆ ಒಂದು ಲೈಬ್ರರಿಯಾದರೆ ತಾಯಿ ದೊಡ್ಡ ಲ್ಯಾಬೋರೆಟರಿಯಂತೆ! ಅಲ್ಲಿನ ಪ್ರಯೋಗದ ಶಿಶುಗಳು ನಾವು. ನಾನು ಅನಾರೋಗ್ಯದಿಂದ ಹುಟ್ಟಿದ ಮಗು. ಹಾಗಾಗಿ ನನ್ನನ್ನು ಎಲ್ಲ ರೀತಿಯಿಂದಲೂ ಆರೋಗ್ಯಪೂರ್ಣವಾಗಿ ಬೆಳೆಸಿದ ಕೀರ್ತಿ ನನ್ನ ಅಮ್ಮನಿಗೆ ಸಲ್ಲುತ್ತದೆ. ಆ ಮಹಾತಾಯಿಗೆ ಎಂದಿಗೂ ನಾನು ಕೃತಜ್ಞ. ಎಲ್ಲ ಅಮ್ಮಂದಿರಿಗೂ ತಾಯಂದಿರ ದಿನಾಚರಣೆಯ ಶುಭಾಶಯಗಳು.

    English summary
    Mothers day 2019 : Kannada music director Hamsalekha says mother is a real mahaguru.
    Sunday, May 12, 2019, 17:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X