ಕನ್ನಡ Rap ಹಾಡುಗಳ ಬಗ್ಗೆ ಹಂಸಲೇಖ ಕೊಟ್ಟ ಹೇಳಿಕೆ ಇದು!
ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಈಗ ಜೀ ಕನ್ನಡ ವಾಹಿನಿಯ 'ಸರಿಗಮಪ' ಕಾರ್ಯಕ್ರಮದ ತೀರ್ಪುಗಾರರಾಗಿದ್ದಾರೆ. ಅದರ ಜೊತೆಗೆ ಹಂಸಲೇಖ 'ಶಕುಂತ್ಲೆ' ಎಂಬ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಕೆಲವು ವಿಷಯವನ್ನು ಹಂಸಲೇಖ ಇದೀಗ ಹಂಚಿಕೊಂಡಿದ್ದಾರೆ.
'ಶಕುಂತ್ಲೆ' ಸಿನಿಮಾದ ಬಗ್ಗೆ ಮಾತನಾಡುವುದಕ್ಕೆ ಹಂಸಲೇಖ ನಿನ್ನೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಲೈವ್ ಬಂದಿದ್ದರು. ಈ ವೇಳೆ ಅವರ ಹೊಸ ಸಿನಿಮಾದ ಬಗ್ಗೆ, Rap ಹಾಡುಗಳ ಬಗ್ಗೆ ಮತ್ತೆ ರವಿಚಂದ್ರನ್ ಜೊತೆಗೆ ಸಿನಿಮಾ ಮಾಡುವ ವಿಷಯ ಸೇರಿದಂತೆ ಅನೇಕ ಸಂಗತಿಗಳ ಕುರಿತು ಮಾತನಾಡಿದರು. ಅಪರೂಪಕ್ಕೆ ಫೇಸ್ ಬುಕ್ ಲೈವ್ ಬಂದಿದ್ದ ಹಂಸಲೇಖ ತಮ್ಮ ಅಭಿಮಾನಿಗಳು ಹೇಳುವ ಪ್ರಶ್ನೆಗೆ ನೇರವಾಗಿ ಉತ್ತರಿಸಿದರು. ಮುಂದೆ ಓದಿ....

ಕನ್ಯಾಕುಮಾರಿ ಅಂತ ಹೆಸರು ಇತ್ತು
ಹಂಸಲೇಖ ತಮ್ಮ 'ಶಕುಂತ್ಲೆ' ಸಿನಿಮಾದ ಬಗ್ಗೆ ಮಾತನಾಡಿ '' ಈ ಸಿನಿಮಾಗೆ ಮೊದಲು ಕನ್ಯಾಕುಮಾರಿ ಅಂತ ಹೆಸರು ಇಟ್ಟಿದೆ. ಈ ಸಿನಿಮಾ ಮಾಡಬೇಕು ಎಂದು 30 ವರ್ಷ ಹಿಂದೆ ಅಂದುಕೊಂಡಿದೆ. ಆದರೆ ಇಂದಿನ ಕಾಲಕ್ಕೆ ಚಿತ್ರಕ್ಕೆ 'ಶಕುಂತ್ಲೆ' ಎಂಬ ಹೆಸರು ಸೂಕ್ತ. 'ಶಕುಂತ್ಲೆ' ಭಾರತೀಯ ಕಾವ್ಯ ನಾಯಕಿ.'' ಎಂದು ಹೇಳಿದರು.

Rap ಹಾಡುಗಳ ಬಗ್ಗೆ
ಇಂದು ಕನ್ನಡದಲ್ಲಿ ಬರುತ್ತಿರುವ Rap ಹಾಡುಗಳ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಅಭಿಮಾನಿಯೊಬ್ಬರು ಪ್ರಶ್ನೆ ಮಾಡಿದರು. ಆಗ ಹಂಸಲೇಖ ''ಬರಲಿ ಬಡಿ.. ರಾಂಪ್ ಫೀವರ್ ಇಡೀ ಜಗತ್ತನ್ನೇ ಕಾಡಿದೆ. ಮೆಲೋಡಿ ಮತ್ತು ರಿದಂ ಜನರಿಗೆ ಬೇಸರ ಆದಾಗ Rap ಹಾಡುಗಳು ಬಂದವು. Rap ಎನ್ನುವುದು ಆದೀಮ ಸಂಗೀತ. ಆಗ ಬುಡಕಟ್ಟುಗಳಲ್ಲಿ Rap ಶೈಲಿಯ ಹಾಡುಗಳನ್ನು ಹೇಳುತ್ತಿದ್ದರು. Rap ಎನ್ನುವುದು ಒಂದು ಬೆಸಿಕ್ ಫಾರ್ಮೆಟ್ ಮತ್ತು ಅದು ತುಂಬ ಎನರ್ಜಿಟಿಕ್. ಕನ್ನಡಕ್ಕೆ ಇತ್ತೀಚಿಗೆ Rap ಬಂದಿದೆ.. ಬರಲಿ.. ಅದು ಒಳ್ಳೆಯದು.'' ಎಂದು ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ್ದಾರೆ.

ಕನ್ನಡದಲ್ಲಿ ಈ ರೀತಿಯ ಪ್ರಯತ್ನ ಮಾಡಬೇಕಿದೆ
''ಇಷ್ಟು ದಿನ 'ಶಕುಂತ್ಲೆ' ಚಿತ್ರಕ್ಕೆ ಬೇಕಾದ ರಿಸರ್ಜ್ ಮಾಡಿದೆ. ಈಗ ಸಿನಿಮಾ ಮಾಡೋಕ್ಕೆ ಒಳ್ಳೆಯ ಟೈಂ ಅನಿಸಿತು. ಒಂದು ಕಡೆ ರಾಜಮೌಳಿ ಅವರು ಇನ್ನೊಂದು ಕಡೆ ಸಂಜಯ್ ಲೀಲಾ ಬಸ್ಸಾಲಿ ಅವರು ಮಿಂಚುತ್ತಿದ್ದಾರೆ. ಕನ್ನಡದಲ್ಲಿ ಆ ರೀತಿಯ ಸಿನಿಮಾ ಮಾಡೋಣ ಅಂತ.'' - ಹಂಸಲೇಖ, ಸಂಗೀತ ನಿರ್ದೇಶಕ.

'ಸರಿಗಮಪ'ದಲ್ಲಿ ಎಸ್ ಪಿ ಬಿ
'ಸರಿಗಮಪ' ಕಾರ್ಯಕ್ರಮದ ವೇದಿಕೆಗೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಬರುತ್ತಾರೆ ಈ ವಿಷಯವನ್ನು ಹಂಸಲೇಖ ಹಂಚಿಕೊಂಡಿದ್ದಾರೆ. ಸದ್ಯದಲ್ಲಿಯೇ ಈ ಸಂಚಿಕೆಯ ಶೂಟಿಂಗ್ ನಡೆಯುತ್ತದೆ.

ರವಿಚಂದ್ರನ್ ಜೊತೆ ಸಿನಿಮಾ
''ನಾನು ದೇವರ ಬಳಿ ಪ್ರಾರ್ಥನೆ ಮಾಡುತ್ತಿದ್ದೇನೆ. ರವಿಚಂದ್ರನ್ ನಾನು ಸೇರಿದಾಗ ಕೂಡ ಮತ್ತೆ ಒಟ್ಟಿಗೆ ಸಿನಿಮಾ ಮಾಡುವ ಬಗ್ಗೆ ಮಾತನಾಡುತ್ತಿರುತ್ತೇವೆ. ಆದರೆ ಅದಕ್ಕೆ ದೇವರು ಇನ್ನು ಸರಿಯಾದ ಸಮಯ ಕೊಟ್ಟಿಲ್ಲ.'' - ಹಂಸಲೇಖ, ಸಂಗೀತ ನಿರ್ದೇಶಕ.

ಮನರಂಜನೆ ಜೊತೆಗೆ ಸಂದೇಶ
''ನಾನು ಮನರಂಜನೆ ಬಿಟ್ಟು ಸಿನಿಮಾ ಮಾಡಲ್ಲ, ಅದೇ ರೀತಿ ಸಿನಿಮಾದಲ್ಲಿ ಸಂದೇಶ ಇಲ್ಲದಿದ್ದರೂ ಮಾಡಲ್ಲ. ಈ ಚಿತ್ರದಲ್ಲಿ ಆ ಎರಡು ಅಂಶಗಳು ಇದೆ. 'ಶಕುಂತ್ಲೆ' ಒಂದು ಮ್ಯೂಸಿಕ್ ಲವ್ ಸಬ್ಜೆಕ್ಟ್ ಸಿನಿಮಾ.'' - ಹಂಸಲೇಖ, ಸಂಗೀತ ನಿರ್ದೇಶಕ.

ಶಿಳ್ಳೆಯ ಹಾಡು
'''ಶಕುಂತ್ಲೆ' ಸಿನಿಮಾದ ಹಾಡುಗಳು ತುಂಬ ಚೆನ್ನಾಗಿ ಮೂಡಿ ಬರುತ್ತಿದೆ. ಅದರಲ್ಲಿ ಒಂದು ಶಿಳ್ಳೆಯ ಹಾಡು ಇದೆ. ಆ ಹಾಡು ತುಂಬ ಹೊಸತನವಾಗಿದೆ.'' - ಹಂಸಲೇಖ, ಸಂಗೀತ ನಿರ್ದೇಶಕ.


Click it and Unblock the Notifications











