twitter
    For Quick Alerts
    ALLOW NOTIFICATIONS  
    For Daily Alerts

    ಸಾವನ್ನ 'ಜೋಕರ್' ಎಂದು ಗೇಲಿ ಮಾಡಿದ್ರು ಅಂಬಿ: ಹಂಸಲೇಖ

    |

    ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸಂಗೀತ ದಿಗ್ಗಜ ಹಂಸಲೇಖ ಜೋಡಿಯಲ್ಲಿ ಹತ್ತು ಹಲವು ಸೂಪರ್ ಹಿಟ್ ಗೀತೆಗಳು ಬಂದಿದೆ. ಮಿಡಿದ ಹೃದಯ, ಮಣ್ಣಿನ ದೋಣಿ, ಮುಂಜಾನೆಯ ಮಂಜು, ದಿಗ್ಗಜರು, ಇಂದ್ರಜಿತ್ ಸೇರಿದಂತೆ ಅಂಬರೀಶ್ ಅವರ ಹಲವು ಚಿತ್ರಗಳಿಗೆ ಹಂಸಲೇಖ ಸಂಗೀತ ಒದಗಿಸಿದ್ದರು.

    ಅದನ್ನ ಮೀರಿ ಹಂಸಲೇಖ ಮತ್ತು ಅಂಬಿಯ ಸ್ನೇಹ ಬೆಳೆದಿತ್ತು. ಇಂತಹ ಸ್ನೇಹಿತನನ್ನ ಕಳೆದುಕೊಂಡಿದಕ್ಕೆ ನಾದಬ್ರಹ್ಮ ಕಂಬನಿ ಮಿಡಿದಿದ್ದಾರೆ. ಪ್ರೀತಿಯ ಅಂಬಿಯನ್ನ ಕಳೆದುಕೊಂಡ ಹಂಸಲೇಖ ಈಗ ಅವರಿಗಾಗಿ ಕವನವೊಂದು ರಚಿಸಿದ್ದಾರೆ. ಅಂಬರೀಶ್ ಅವರ ವ್ಯಕ್ತಿತ್ವ, ಅವರ ಗುಣ, ಅವರನ್ನ ಕಂಡ ಬಗೆಯ ಬಗ್ಗೆ ಹಂಸಲೇಖ ಪದಗಳ ಮೂಲಕ ಹೇಳಿಕೊಂಡಿದ್ದಾರೆ.

    ಅಂಬರೀಶ್ - ಜಗ್ಗೇಶ್ ನಡುವಿನ ಕೊನೆಯ ಭೇಟಿ, ಕೊನೆಯ ಮಾತು ಅಂಬರೀಶ್ - ಜಗ್ಗೇಶ್ ನಡುವಿನ ಕೊನೆಯ ಭೇಟಿ, ಕೊನೆಯ ಮಾತು

    ಹಂಸಲೇಖ ಅವರು ಬರೆದಿರುವ ಈ ಸಾಲುಗಳನ್ನ ಮುಂದೆ ಪ್ರಟಿಸಲಾಗಿದೆ. ಈ ಸಾಲುಗಳನ್ನ ಓದಿ ಅರ್ಥೈಸಿಕೊಂಡರೇ ಅಂಬಿ ರೆಬೆಲ್ ವ್ಯಕ್ತಿತ್ವದ ಪರಿಚಯ ನಿಮಗಾಗುತ್ತೆ. ಜಲೀಲನ ಹುಟ್ಟನಿಂದ ಸಾವಿನವರೆಗೂ ಕಂಡ ಜೀವನವನ್ನ ಸರಳವಾಗಿ ವರ್ಣಿಸಿದ್ದಾರೆ. ಮುಂದೆ ಓದಿ....

    ಚಿತ್ರಕೃಪೆ: ಡಾ ಹಂಸಲೇಖ ಅಫೀಶಿಯಲ್

    'ಅಂಬರಕ್ಕೆ ಈಶನಾದ' ಅಂಬಿ

    'ಅಂಬರಕ್ಕೆ ಈಶನಾದ' ಅಂಬಿ

    ಪೂಜ್ಯ ಕನ್ನಡಿಗರೆ...

    ಚಿಂತೆಯ ವನವಾಯ್ತೋ
    ಕಂದನ ಕಳಕೊಂಡ
    ಚಂದನವನ...

    ಅಮರನಾಥಾಂತ
    ಹೆಸರಿಟ್ಟುಕೊಂಡು ಹುಟ್ಟಿದ
    ರೆಬಲ್ ಸ್ಟಾರ್...
    ಇವತ್ತು
    ಅಂಬರಕ್ಕೆ ಈಶನಾಗಿದ್ದಾರೆ...

    ಅಪ್ಪಾಜಿ ದರ್ಶನಕ್ಕಾಗಿ ಸ್ವೀಡನ್ ನಿಂದ ಬಂದಿದ್ದು ದರ್ಶನ್ ಒಬ್ಬರೇ ಅಪ್ಪಾಜಿ ದರ್ಶನಕ್ಕಾಗಿ ಸ್ವೀಡನ್ ನಿಂದ ಬಂದಿದ್ದು ದರ್ಶನ್ ಒಬ್ಬರೇ

    ಬಯಸಿ ಬಯಸಿ ಹೋಗುವುದದೆಷ್ಟು ಸರಿ

    ಬಯಸಿ ಬಯಸಿ ಹೋಗುವುದದೆಷ್ಟು ಸರಿ

    50ರ ದಶಕದಲ್ಲಿ ಹುಟ್ಟಿದ ಪ್ರತಿಭೆಗಳು...
    ಚಂದನವನದಲ್ಲಿ
    ಸಸಿನೆಟ್ಟು, ನೆರಳಿಟ್ಟು
    ಫಲಕೊಟ್ಟು ಹೆಸರಿಟ್ಟು...
    ಒಂದೊಂದಾಗಿ ಮರೆಗೆ ಸರಿಯುತ್ತಿವೆ...
    ಇಲ್ಲಿ ಸಂದವರು ಅಲ್ಲಿಗೆ ಸಲ್ಲಲೇಬೇಕು. ಸರಿ!
    ಆದರೆ, ಬಯಸಿ ಬಯಸಿ ಹೋಗುವುದದೆಷ್ಟು ಸರಿ?

    ಕೊನೆಯ ದಿನಗಳಲ್ಲಿ ಅಂಬಿಗಿದ್ದ ಎರಡು ಆಸೆ ಈಡೇರಲೇ ಇಲ್ಲ.! ಕೊನೆಯ ದಿನಗಳಲ್ಲಿ ಅಂಬಿಗಿದ್ದ ಎರಡು ಆಸೆ ಈಡೇರಲೇ ಇಲ್ಲ.!

    ಸಾವನ್ನ 'ಜೋಕರ್' ಎಂದಿದ್ದ ಅಂಬಿ

    ಸಾವನ್ನ 'ಜೋಕರ್' ಎಂದಿದ್ದ ಅಂಬಿ

    ಸಾವನ್ನು Joker ಎಂದು ಗೇಲಿ ಮಾಡಿ:
    ಜೀವನ ಒಂದು ತಮಾಶೆ ಎಂದು prove ಮಾಡಿ:
    ಶಿಸ್ತುಗಳಿಗೆ ಸೆಡ್ಡು ಹೊಡೆದು ಹೊರಟಿದ್ದಾರೆ ಅಂಬಿ!
    ಕರುನಾಡು ಅಳುತ್ತಿದೆ:
    ಅವರ ಈ ಧೈರ್ಯದ ಡೈಲಾಗುಗಳ ನಂಬಿ!

    ದೈವವಿತ್ತ ದೈತ್ಯ ದೇಹ:
    ಅದಕ್ಕೋ...
    ಮೋಜಿನ ಮೇಲೆ ಮಹಾಮೋಹ!

    ಅಂಬಿ ಅಂತಿಮ ದರ್ಶನಕ್ಕೆ ಬರಬಾರದೆಂದು ನಿರ್ಧರಿಸಿದ್ದರಂತೆ ರವಿಚಂದ್ರನ್ ಅಂಬಿ ಅಂತಿಮ ದರ್ಶನಕ್ಕೆ ಬರಬಾರದೆಂದು ನಿರ್ಧರಿಸಿದ್ದರಂತೆ ರವಿಚಂದ್ರನ್

    ಬೈಗುಳವೇ ಖುಷಿ ಕೊಡ್ತಿತ್ತು

    ಬೈಗುಳವೇ ಖುಷಿ ಕೊಡ್ತಿತ್ತು

    ಅವರಿದ್ದಲ್ಲಿ ನಗುವಿನ ಗಲಾಟೆ...
    ಬೈಗುಳಗಳ ಭರಾಟೆ...
    ಕೈಗೆ ಸಿಕ್ಕವರಿಗೆ ಸುಮ್ಮಸುಮ್ಮನೇ ತರಾಟೆ !

    ಸಮಯಕ್ಕೆ ಸರಿಯಾಗಿ
    ಶೂಟಿಂಗಿಗೆ ಬಂದಿದ್ದೇ ಇಲ್ಲಾ...
    But : 200 ಸಿನಿಮಾಗಳಲ್ಲಿ
    ಒಂದು ಸಿನಿಮಾನೂ
    ನಿಂತು ಹೋದದ್ದೇ ಇಲ್ಲಾ !

    ರಾಜ್ ಸ್ಮಾರಕ ಪಕ್ಕದಲ್ಲೇ ಅಂಬರೀಶ್ ಸಮಾಧಿ: ಅಣ್ಣಾವ್ರ ಕುಟುಂಬ ಹೇಳಿದ್ದೇನು.? ರಾಜ್ ಸ್ಮಾರಕ ಪಕ್ಕದಲ್ಲೇ ಅಂಬರೀಶ್ ಸಮಾಧಿ: ಅಣ್ಣಾವ್ರ ಕುಟುಂಬ ಹೇಳಿದ್ದೇನು.?

    ರಾಂಗ್ ಶೋ ಆಗಿತ್ತು

    ರಾಂಗ್ ಶೋ ಆಗಿತ್ತು

    ಹಂಸಲೇಖ...
    " I Want; But Can't "
    ಅಂದಿದ್ರು... ಆವತ್ತು!

    ಸಿಂಗಾಪೂರಿಗೆ ಹೋಗಿದ್ದೇ ಒಂದು ಆಟ !
    ಬಂದಿದ್ದು ಇನ್ನೊಂದು ಆಟ !...
    " ನಾನುಳಿದಿರೋದೇ ಬೋನಸ್ " ಅಂತ
    ಮೂರುವರ್ಷ ಎಲೆಯಾಡಿದ್ದೆ ಒಂದು ಅದೃಷ್ಟದಾಟ !

    ಈವತ್ತು ಅವರು ಆಡಿದ ಆಟದಲ್ಲಿ...
    ಮೂರು Joker ಬಿದ್ದಿತ್ತು !
    ರೆಮಿ ಇರ್ಲಿಲ್ಲಾ... Show ಅಂತ ಇಟ್ಟುಬಿಟ್ರು...
    ರಾಂಗ್ Show ಆಗಿತ್ತು...

    ಇದಕ್ಕೆ ಕಾಕತಾಳೀಯ ಅಂತೀರಾ, ವಿಚಿತ್ರ ಅಂತೀರಾ.? ಇದಕ್ಕೆ ಕಾಕತಾಳೀಯ ಅಂತೀರಾ, ವಿಚಿತ್ರ ಅಂತೀರಾ.?

    ಅಂಬರೀಶ್ ಅಂದ್ರೆ ಅಮೃತ

    ಅಂಬರೀಶ್ ಅಂದ್ರೆ ಅಮೃತ

    ಜೀವ ನಮ್ಮ ಮಾತು ಕೇಳಲ್ಲಾ: ನಿಜ!
    ಜೀವನ ಕೇಳುತ್ತೆ !
    ಆದರೆ...
    ಸಾವನ್ನ Joker ಅನ್ನೋರ್ಗೆ
    ಇದೆಲ್ಲಾ ಎಲ್ಲಿ ಕೇಳ್ಸುತ್ತೆ !

    ಅಂಬರೀಶ್ ಅಂದ್ರೆ ಅಂಬ್ರೋಸಿಯಾ...
    ಅಂಬ್ರೋಸಿಯಾ ಅಂದ್ರೆ ಅಮೃತ...
    ಅಮೃತವನ್ನು ಮುಟ್ಟಿದರೆ ಮತ್ತು...
    ಹೀರಿದರೆ ಗಮ್ಮತ್ತು...

    ಮತ್ತಿಲ್ಲದೇ...
    ಗಮ್ಮತ್ತಿಲ್ಲದೇ...
    ಚಿಂತೆಯ ವನವಾಯ್ತೋ
    ಕಂದನ ಕಳಕೊಂಡ
    ಚಂದನವನ...

    English summary
    Music director hamsalekha wrote a poem about ambareesh and he has tribute to him.
    Monday, November 26, 2018, 11:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X