ಮೇಘನಾ ರಾಜ್ ಮಗುವಿನ ತೊಟ್ಟಿಲು ಸಾಮಾನ್ಯದ್ದಲ್ಲ: ಇದೆ ವಿಶೇಷತೆ
ಮೇಘನಾ ರಾಜ್ ಪುತ್ರನಿಗೆ ಇಂದು ತೊಟ್ಟಿಲು ಶಾಸ್ತ್ರ ಮಾಡಲಾಗಿದೆ. ಶಾಸ್ತ್ರೋಪ್ತವಾಗಿ ಹಿರಿಯರ, ಗುರುಗಳ ಸಮ್ಮುಖದಲ್ಲಿ ಈ ಕಾರ್ಯವನ್ನು ನೆರವೇರಿಸಲಾಗಿದೆ.
Recommended Video
ಮಗು ಹುಟ್ಟಿದ ಹನ್ನೊಂದನೇ ದಿನಕ್ಕೆ ತೊಟ್ಟಿಲು ಶಾಸ್ತ್ರವನ್ನು ಮಾಡುವ ರೂಢಿ ಆದರೆ ವಿವಿಧ ಕಾರಣಗಳಿಂದ ಮುಂದೂಡಲ್ಪಟ್ಟು, ಇಂದು ಅಂದರೆ ನವೆಂಬರ್ 12 ರಂದು ಮೇಘನಾ-ಚಿರು ಮಗನಿಗೆ ತೊಟ್ಟಿಲು ಶಾಸ್ತ್ರ ಮಾಡಲಾಗಿದೆ.
ಅದ್ಧೂರಿಯಾದ ತೊಟ್ಟಿಲಿನಲ್ಲಿ ಮಗುವನ್ನು ಮಲಗಿಸಿ ತೊಟ್ಟಿಲ ಶಾಸ್ತ್ರ ಮಾಡಲಾಗಿದೆ. ಬಣ್ಣಗಳಿಂದ ತುಂಬಿದ ತೊಟ್ಟಿಲು ಸಾಮಾನ್ಯ ತೊಟ್ಟಿಲಲ್ಲ. ತೊಟ್ಟಿಲು ಹೊಂದಿರುವ ವಿಶೇಷತೆಗಳನ್ನು ಮೇಘನಾ ತಂದೆ ಸುಂದರ್ ರಾಜ್ ಮಾಧ್ಯಮಗಳಿಗೆ ವಿವರಿಸಿದ್ದಾರೆ.

ಯಂತ್ರ ಬಳಸದೆ ನಿರ್ಮಿಸಿರುವ ತೊಟ್ಟಿಲು
ತೊಟ್ಟಿಲ ಶಾಸ್ತ್ರದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುಂದರ್ ರಾಜ್, ತೊಟ್ಟಿಲು ಸಾಮಾನ್ಯವಾದುದಲ್ಲ. ಇಡೀಯ ತೊಟ್ಟಿಲನ್ನು ಕೇವಲ ಕೈಗಳಿಂದಲೇ ಮಾಡಲಾಗಿದೆ. ಎಲ್ಲಿಯೂ ಸಹ ಯಂತ್ರವನ್ನು ಬಳಸಲಾಗಿಲ್ಲ , ಸಣ್ಣ ಕುಸುರಿ ಕೆಲಸಗಳು ಸಹ ಕೈನಲ್ಲಿಯೇ ಮಾಡಲಾಗಿದೆ ಎಂದರು.

ಗತ್ತಲ್ ವನಿತಾ ಎಂಬುವರು ಮಾಡಿರುವ ತೊಟ್ಟಿಲು
ಗದಗದ ಗತ್ತಲ್ ವನಿತಾ ಎಂಬುವರು ಈ ತೊಟ್ಟಿಲನ್ನು ನಿರ್ಮಿಸಿ ಕೊಟ್ಟಿದ್ದಾರೆ. ಮೇಘನಾ ಅವರು ಗರ್ಭಿಣಿ ಆಗಿದ್ದಾಗಲೇ, ತಾವೇ ತೊಟ್ಟಿಲು ನಿರ್ಮಾಣ ಮಾಡಿಕೊಡುವುದಾಗಿ ಹೇಳಿದ್ದರಂತೆ ವನಿತಾ, ಅಂತೆಯೇ ತೊಟ್ಟಿಲು ಮಾಡಿ ಕೊಟ್ಟಿದ್ದಾರೆ.

ತೊಟ್ಟಿಲಿಗೆ ಪೂಜೆ ಮಾಡಲಾಗಿದೆ
ತೊಟ್ಟಿಲಿಗೆ ಹಲವು ರೀತಿಯ ಬಣ್ಣಗಳನ್ನು ಬಳಿಯಲಾಗಿದೆ. ಹಲವು ಚಿತ್ರಗಳು, ಕುಸುರಿ ಕೆಲಸಗಳು ಮಾಡಲಾಗಿದೆ. ದೇಸಿ ಮಾದರಿಯಲ್ಲಿರುವ ತೊಟ್ಟಿಲು ಗಮನ ಸೆಳೆಯುತ್ತಿದೆ. ಇಂದು ಆ ತೊಟ್ಟಿಲಿಗೆ ಪೂಜೆ ಮಾಡಿ, ಮಗುವನ್ನು ತೊಟ್ಟಿಲಿಗೆ ಹಾಕಲಾಗಿದೆ.

ಬೆಳ್ಳಿ ತೊಟ್ಟಿಲು ಖರೀದಿಸಿರುವ ಧೃವ ಸರ್ಜಾ
ಚಿರು ಸಹೋದರ ಧೃವ ಸರ್ಜಾ, ಮೇಘನಾ ಗೆ ಮಗು ಹುಟ್ಟಿದ ದಿನದಂದೇ ಸಂಪೂರ್ಣ ಬೆಳ್ಳಿಯಿಂದ ಮಾಡಿದ ತೊಟ್ಟಿಲು ಖರೀದಿಸಿದ್ದರು. ಇದರ ಬೆಲೆ ಬರೋಬ್ಬರಿ 10 ಲಕ್ಷ ಎನ್ನಲಾಗುತ್ತಿದೆ. ಬೆಳ್ಳಿ ತೊಟ್ಟಿಲಿನ ಪಕ್ಕ ನಿಂತು ಧೃವ ಸರ್ಜಾ ತೆಗೆಸಿಕೊಂಡಿದ್ದ ಫೋಟೊ ಭಾರಿ ವೈರಲ್ ಆಗಿತ್ತು.


Click it and Unblock the Notifications











