twitter
    For Quick Alerts
    ALLOW NOTIFICATIONS  
    For Daily Alerts

    ಮೇಘನಾ ರಾಜ್ ಮಗುವಿನ ತೊಟ್ಟಿಲು ಸಾಮಾನ್ಯದ್ದಲ್ಲ: ಇದೆ ವಿಶೇಷತೆ

    |

    ಮೇಘನಾ ರಾಜ್ ಪುತ್ರನಿಗೆ ಇಂದು ತೊಟ್ಟಿಲು ಶಾಸ್ತ್ರ ಮಾಡಲಾಗಿದೆ. ಶಾಸ್ತ್ರೋಪ್ತವಾಗಿ ಹಿರಿಯರ, ಗುರುಗಳ ಸಮ್ಮುಖದಲ್ಲಿ ಈ ಕಾರ್ಯವನ್ನು ನೆರವೇರಿಸಲಾಗಿದೆ.

    Recommended Video

    ಚಿಂಟುಗೋಸ್ಕರ ನಾನು ತುಂಬಾ ಸ್ಟ್ರಾಂಗ್ ಆಗಿ ಇದ್ದೀನಿ | Meghana Raj | Filmibeat Kannada

    ಮಗು ಹುಟ್ಟಿದ ಹನ್ನೊಂದನೇ ದಿನಕ್ಕೆ ತೊಟ್ಟಿಲು ಶಾಸ್ತ್ರವನ್ನು ಮಾಡುವ ರೂಢಿ ಆದರೆ ವಿವಿಧ ಕಾರಣಗಳಿಂದ ಮುಂದೂಡಲ್ಪಟ್ಟು, ಇಂದು ಅಂದರೆ ನವೆಂಬರ್ 12 ರಂದು ಮೇಘನಾ-ಚಿರು ಮಗನಿಗೆ ತೊಟ್ಟಿಲು ಶಾಸ್ತ್ರ ಮಾಡಲಾಗಿದೆ.

    Exclusive: ಅಣ್ಣನ ಮಗುವಿಗೆ ಧ್ರುವ ಸರ್ಜಾ ಕಡೆಯಿಂದ 'ಬೆಳ್ಳಿ ತೊಟ್ಟಿಲು' ಉಡುಗೊರೆExclusive: ಅಣ್ಣನ ಮಗುವಿಗೆ ಧ್ರುವ ಸರ್ಜಾ ಕಡೆಯಿಂದ 'ಬೆಳ್ಳಿ ತೊಟ್ಟಿಲು' ಉಡುಗೊರೆ

    ಅದ್ಧೂರಿಯಾದ ತೊಟ್ಟಿಲಿನಲ್ಲಿ ಮಗುವನ್ನು ಮಲಗಿಸಿ ತೊಟ್ಟಿಲ ಶಾಸ್ತ್ರ ಮಾಡಲಾಗಿದೆ. ಬಣ್ಣಗಳಿಂದ ತುಂಬಿದ ತೊಟ್ಟಿಲು ಸಾಮಾನ್ಯ ತೊಟ್ಟಿಲಲ್ಲ. ತೊಟ್ಟಿಲು ಹೊಂದಿರುವ ವಿಶೇಷತೆಗಳನ್ನು ಮೇಘನಾ ತಂದೆ ಸುಂದರ್‌ ರಾಜ್ ಮಾಧ್ಯಮಗಳಿಗೆ ವಿವರಿಸಿದ್ದಾರೆ.

     ಯಂತ್ರ ಬಳಸದೆ ನಿರ್ಮಿಸಿರುವ ತೊಟ್ಟಿಲು

    ಯಂತ್ರ ಬಳಸದೆ ನಿರ್ಮಿಸಿರುವ ತೊಟ್ಟಿಲು

    ತೊಟ್ಟಿಲ ಶಾಸ್ತ್ರದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುಂದರ್‌ ರಾಜ್, ತೊಟ್ಟಿಲು ಸಾಮಾನ್ಯವಾದುದಲ್ಲ. ಇಡೀಯ ತೊಟ್ಟಿಲನ್ನು ಕೇವಲ ಕೈಗಳಿಂದಲೇ ಮಾಡಲಾಗಿದೆ. ಎಲ್ಲಿಯೂ ಸಹ ಯಂತ್ರವನ್ನು ಬಳಸಲಾಗಿಲ್ಲ , ಸಣ್ಣ ಕುಸುರಿ ಕೆಲಸಗಳು ಸಹ ಕೈನಲ್ಲಿಯೇ ಮಾಡಲಾಗಿದೆ ಎಂದರು.

    ಮೇಘನಾ ಮನೆಯಲ್ಲಿ ತೊಟ್ಟಿಲ ಶಾಸ್ತ್ರದ ಸಂಭ್ರಮ: ಕುತೂಹಲ ಮೂಡಿಸಿದ ಜೂ.ಚಿರು ಹೆಸರುಮೇಘನಾ ಮನೆಯಲ್ಲಿ ತೊಟ್ಟಿಲ ಶಾಸ್ತ್ರದ ಸಂಭ್ರಮ: ಕುತೂಹಲ ಮೂಡಿಸಿದ ಜೂ.ಚಿರು ಹೆಸರು

    ಗತ್ತಲ್ ವನಿತಾ ಎಂಬುವರು ಮಾಡಿರುವ ತೊಟ್ಟಿಲು

    ಗತ್ತಲ್ ವನಿತಾ ಎಂಬುವರು ಮಾಡಿರುವ ತೊಟ್ಟಿಲು

    ಗದಗದ ಗತ್ತಲ್ ವನಿತಾ ಎಂಬುವರು ಈ ತೊಟ್ಟಿಲನ್ನು ನಿರ್ಮಿಸಿ ಕೊಟ್ಟಿದ್ದಾರೆ. ಮೇಘನಾ ಅವರು ಗರ್ಭಿಣಿ ಆಗಿದ್ದಾಗಲೇ, ತಾವೇ ತೊಟ್ಟಿಲು ನಿರ್ಮಾಣ ಮಾಡಿಕೊಡುವುದಾಗಿ ಹೇಳಿದ್ದರಂತೆ ವನಿತಾ, ಅಂತೆಯೇ ತೊಟ್ಟಿಲು ಮಾಡಿ ಕೊಟ್ಟಿದ್ದಾರೆ.

    ತೊಟ್ಟಿಲಿಗೆ ಪೂಜೆ ಮಾಡಲಾಗಿದೆ

    ತೊಟ್ಟಿಲಿಗೆ ಪೂಜೆ ಮಾಡಲಾಗಿದೆ

    ತೊಟ್ಟಿಲಿಗೆ ಹಲವು ರೀತಿಯ ಬಣ್ಣಗಳನ್ನು ಬಳಿಯಲಾಗಿದೆ. ಹಲವು ಚಿತ್ರಗಳು, ಕುಸುರಿ ಕೆಲಸಗಳು ಮಾಡಲಾಗಿದೆ. ದೇಸಿ ಮಾದರಿಯಲ್ಲಿರುವ ತೊಟ್ಟಿಲು ಗಮನ ಸೆಳೆಯುತ್ತಿದೆ. ಇಂದು ಆ ತೊಟ್ಟಿಲಿಗೆ ಪೂಜೆ ಮಾಡಿ, ಮಗುವನ್ನು ತೊಟ್ಟಿಲಿಗೆ ಹಾಕಲಾಗಿದೆ.

    ಬೆಳ್ಳಿ ತೊಟ್ಟಿಲು ಖರೀದಿಸಿರುವ ಧೃವ ಸರ್ಜಾ

    ಬೆಳ್ಳಿ ತೊಟ್ಟಿಲು ಖರೀದಿಸಿರುವ ಧೃವ ಸರ್ಜಾ

    ಚಿರು ಸಹೋದರ ಧೃವ ಸರ್ಜಾ, ಮೇಘನಾ ಗೆ ಮಗು ಹುಟ್ಟಿದ ದಿನದಂದೇ ಸಂಪೂರ್ಣ ಬೆಳ್ಳಿಯಿಂದ ಮಾಡಿದ ತೊಟ್ಟಿಲು ಖರೀದಿಸಿದ್ದರು. ಇದರ ಬೆಲೆ ಬರೋಬ್ಬರಿ 10 ಲಕ್ಷ ಎನ್ನಲಾಗುತ್ತಿದೆ. ಬೆಳ್ಳಿ ತೊಟ್ಟಿಲಿನ ಪಕ್ಕ ನಿಂತು ಧೃವ ಸರ್ಜಾ ತೆಗೆಸಿಕೊಂಡಿದ್ದ ಫೋಟೊ ಭಾರಿ ವೈರಲ್ ಆಗಿತ್ತು.

    English summary
    Today a ritual done in Meghana Raj's house. Hand made cradle from Gadag exclusively for Meghana Raj's son.
    Thursday, November 12, 2020, 14:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X