ಶ್ರೀಲಂಕಾ ಗಾಯಕಿಯ ಕನ್ನಡ ಪ್ರೇಮಕ್ಕೆ ದೊಡ್ಡ ಚಪ್ಪಾಳೆ

Recommended Video

ಶ್ರೀಲಂಕಾ ಗಾಯಕಿಯ ಕನ್ನಡ ಪ್ರೇಮಕ್ಕೆ ದೊಡ್ಡ ಚಪ್ಪಾಳೆ | FILMIBEAT KANNADA

ಕನ್ನಡ ಮಾತಾಡೋಕೆ, ಕನ್ನಡ ಹಾಡು ಹಾಡುವುದಕ್ಕೆ ಕೆಲವರು ಹಿಂದೆ ಮುಂದೆ ನೋಡುತ್ತಾರೆ. ಆದರೆ, ಇಂತವರ ಮಧ್ಯೆ ಶ್ರೀಲಂಕಾದ ಗಾಯಕಿ ಕನ್ನಡದ 'ಕೆಜಿಎಫ್' ಸಿನಿಮಾದ ಹಾಡನ್ನು ಹಾಡಿ ಕನ್ನಡ ಅಭಿಮಾನ ತೋರಿಸಿದ್ದಾರೆ.

ಹನ್ಸಿನಿ ವಿಮಲ್ಸಿರಿ ಎಂಬ ಶ್ರೀಲಂಕಾದ ಗಾಯಕಿ 'ಕೆಜಿಎಫ್' ಸಿನಿಮಾದ ತಾಯಿಯ ಹಾಡನ್ನು ಹಾಡಿ ತಮ್ಮ ಯೂ ಟ್ಯೂಬ್ ನಲ್ಲಿ ಪೋಸ್ಟ್ ಮಾಡಿದ್ದಾರೆ. 'ಗರ್ಭದಿ ನನ್ನಿರಿಸಿ..' ಹಾಡನ್ನು ಅದ್ಬುತವಾಗಿ ಹಾಡಿದ್ದಾರೆ.

Hansini Wimalsiri A Sri Lanka Singer Sings KGF Kannada Song

ಕನ್ನಡ ಬರದೆ ಇದ್ದರೂ ಸ್ಪಷ್ಟವಾಗಿ ಕನ್ನಡ ಹಾಡನ್ನು ಹಾಡಿರುವ ಹನ್ಸಿನಿ ವಿಮಲ್ಸಿರಿ ತಮ್ಮ ಇಂಪಾದ ಧ್ವನಿಯ ಮೂಲಕ ಗಮನ ಸೆಳೆದಿದ್ದಾರೆ. ಯಶ್ ಅಭಿಮಾನಿಗಳು ಮಾತ್ರವಲ್ಲದೆ, ಅನೇಕ ಕನ್ನಡಿಗರು ಹನ್ಸಿನಿ ವಿಮಲ್ಸಿರಿ ಗಾಯನವನ್ನು ಮೆಚ್ಚಿಕೊಂಡಿದ್ದಾರೆ.ಶ್ರೇಷ್ಟ

ಮತ್ತೊಂದು ವಿಶೇಷ ಏನೆಂದರೆ, ಈ ಹಾಡಿಗೆ ಕನ್ನಡದಲ್ಲಿ ಕಾಮೆಂಟ್ ಮಾಡಿದ ಅಭಿಮಾನಿಗಳಿಗೆ ತಾನು ಕೂಡ ಕನ್ನಡದಲ್ಲಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಗೂಗಲ್ ಟ್ರಾನ್ಸ್ಲೇಟ್ ನ ಸಹಾಯ ಪಡೆದು, ಕನ್ನಡದಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಭಾಷೆ ಬರದೆ ಇದ್ದರೂ, ಕನ್ನಡದ ಮೇಲಿನ ಆಕೆಯ ಅಭಿಮಾನ ನಿಜಕ್ಕೂ ಖುಷಿ ಆಗುತ್ತದೆ.

Hansini Wimalsiri A Sri Lanka Singer Sings KGF Kannada Song

ಹನ್ಸಿನಿ ವಿಮಲ್ಸಿರಿ ಹಾಡಿನ ಹಾಡು 4 ದಿನದಲ್ಲಿ 56ಕ್ಕೂ ಅಧಿಕ ಹಿಟ್‌ ಪಡೆದುಕೊಂಡು ಮುನ್ನುಗುತ್ತಿದೆ. 5 ಸಾವಿರಕ್ಕೂ ಅಧಿಕ ಜನರು ಆಕೆಯ ವಿಡಿಯೋವನ್ನು ಲೈಕ್ ಮಾಡಿದ್ದಾರೆ.

ತನ್ನದೆ ಯೂ ಟ್ಯೂಬ್ ಚಾನಲ್ ಹೊಂದಿರುವ ಗಾಯಕಿ ಹನ್ಸಿನಿ ವಿಮಲ್ಸಿರಿ ಅನೇಕ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

ಹಾಡು ಕೇಳಲು ಇಲ್ಲಿ ಕ್ಲಿಕ್ ಮಾಡಿ

More from Filmibeat

English summary
Hansini Wimalsiri a sri lanka singer hansini wimalsiri sings KGF kannada movie song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X