twitter
    For Quick Alerts
    ALLOW NOTIFICATIONS  
    For Daily Alerts

    ಶ್ರೀಲಂಕಾ ಗಾಯಕಿಯ ಕನ್ನಡ ಪ್ರೇಮಕ್ಕೆ ದೊಡ್ಡ ಚಪ್ಪಾಳೆ

    |

    Recommended Video

    ಶ್ರೀಲಂಕಾ ಗಾಯಕಿಯ ಕನ್ನಡ ಪ್ರೇಮಕ್ಕೆ ದೊಡ್ಡ ಚಪ್ಪಾಳೆ | FILMIBEAT KANNADA

    ಕನ್ನಡ ಮಾತಾಡೋಕೆ, ಕನ್ನಡ ಹಾಡು ಹಾಡುವುದಕ್ಕೆ ಕೆಲವರು ಹಿಂದೆ ಮುಂದೆ ನೋಡುತ್ತಾರೆ. ಆದರೆ, ಇಂತವರ ಮಧ್ಯೆ ಶ್ರೀಲಂಕಾದ ಗಾಯಕಿ ಕನ್ನಡದ 'ಕೆಜಿಎಫ್' ಸಿನಿಮಾದ ಹಾಡನ್ನು ಹಾಡಿ ಕನ್ನಡ ಅಭಿಮಾನ ತೋರಿಸಿದ್ದಾರೆ.

    ಹನ್ಸಿನಿ ವಿಮಲ್ಸಿರಿ ಎಂಬ ಶ್ರೀಲಂಕಾದ ಗಾಯಕಿ 'ಕೆಜಿಎಫ್' ಸಿನಿಮಾದ ತಾಯಿಯ ಹಾಡನ್ನು ಹಾಡಿ ತಮ್ಮ ಯೂ ಟ್ಯೂಬ್ ನಲ್ಲಿ ಪೋಸ್ಟ್ ಮಾಡಿದ್ದಾರೆ. 'ಗರ್ಭದಿ ನನ್ನಿರಿಸಿ..' ಹಾಡನ್ನು ಅದ್ಬುತವಾಗಿ ಹಾಡಿದ್ದಾರೆ.

    Hansini Wimalsiri A Sri Lanka Singer Sings KGF Kannada Song

    ಕನ್ನಡ ಬರದೆ ಇದ್ದರೂ ಸ್ಪಷ್ಟವಾಗಿ ಕನ್ನಡ ಹಾಡನ್ನು ಹಾಡಿರುವ ಹನ್ಸಿನಿ ವಿಮಲ್ಸಿರಿ ತಮ್ಮ ಇಂಪಾದ ಧ್ವನಿಯ ಮೂಲಕ ಗಮನ ಸೆಳೆದಿದ್ದಾರೆ. ಯಶ್ ಅಭಿಮಾನಿಗಳು ಮಾತ್ರವಲ್ಲದೆ, ಅನೇಕ ಕನ್ನಡಿಗರು ಹನ್ಸಿನಿ ವಿಮಲ್ಸಿರಿ ಗಾಯನವನ್ನು ಮೆಚ್ಚಿಕೊಂಡಿದ್ದಾರೆ.ಶ್ರೇಷ್ಟ

    ಗಾಯಕನ ಕೊನೆ 'ಜೀವಗಾನ' : ಎಲ್ ಎನ್ ಶಾಸ್ತ್ರಿ ಬದ್ಧತೆಗೆ ದೊಡ್ಡ ಶರಣುಗಾಯಕನ ಕೊನೆ 'ಜೀವಗಾನ' : ಎಲ್ ಎನ್ ಶಾಸ್ತ್ರಿ ಬದ್ಧತೆಗೆ ದೊಡ್ಡ ಶರಣು

    ಮತ್ತೊಂದು ವಿಶೇಷ ಏನೆಂದರೆ, ಈ ಹಾಡಿಗೆ ಕನ್ನಡದಲ್ಲಿ ಕಾಮೆಂಟ್ ಮಾಡಿದ ಅಭಿಮಾನಿಗಳಿಗೆ ತಾನು ಕೂಡ ಕನ್ನಡದಲ್ಲಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಗೂಗಲ್ ಟ್ರಾನ್ಸ್ಲೇಟ್ ನ ಸಹಾಯ ಪಡೆದು, ಕನ್ನಡದಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಭಾಷೆ ಬರದೆ ಇದ್ದರೂ, ಕನ್ನಡದ ಮೇಲಿನ ಆಕೆಯ ಅಭಿಮಾನ ನಿಜಕ್ಕೂ ಖುಷಿ ಆಗುತ್ತದೆ.

    Hansini Wimalsiri A Sri Lanka Singer Sings KGF Kannada Song

    ಹನ್ಸಿನಿ ವಿಮಲ್ಸಿರಿ ಹಾಡಿನ ಹಾಡು 4 ದಿನದಲ್ಲಿ 56ಕ್ಕೂ ಅಧಿಕ ಹಿಟ್‌ ಪಡೆದುಕೊಂಡು ಮುನ್ನುಗುತ್ತಿದೆ. 5 ಸಾವಿರಕ್ಕೂ ಅಧಿಕ ಜನರು ಆಕೆಯ ವಿಡಿಯೋವನ್ನು ಲೈಕ್ ಮಾಡಿದ್ದಾರೆ.

    ಮ್ಯೂಸಿಕ್ ಡೈರೆಕ್ಟರ್ ಆದ ರಿಯಾಲಿಟಿ ಶೋ ಕೀ ಬೋರ್ಡ್ ಪ್ಲೇಯರ್ಮ್ಯೂಸಿಕ್ ಡೈರೆಕ್ಟರ್ ಆದ ರಿಯಾಲಿಟಿ ಶೋ ಕೀ ಬೋರ್ಡ್ ಪ್ಲೇಯರ್

    ತನ್ನದೆ ಯೂ ಟ್ಯೂಬ್ ಚಾನಲ್ ಹೊಂದಿರುವ ಗಾಯಕಿ ಹನ್ಸಿನಿ ವಿಮಲ್ಸಿರಿ ಅನೇಕ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

    ಹಾಡು ಕೇಳಲು ಇಲ್ಲಿ ಕ್ಲಿಕ್ ಮಾಡಿ

    English summary
    Hansini Wimalsiri a sri lanka singer hansini wimalsiri sings KGF kannada movie song.
    Tuesday, October 1, 2019, 8:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X