ಹನುಮ ಭಕ್ತ ಧ್ರುವ ಸರ್ಜಾ ಭೇಟಿಯಾದ ಟಾಲಿವುಡ್ 'ಹನುಮಾನ್' ಹೀರೋ

ತೆಲುಗಿನಲ್ಲಿ ಯುವ ನಟ ತೇಜ ಸಜ್ಜಾ ನಟನೆಯ ಹನುಮಾನ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ರಿಲೀಸ್ ಆಗಲಿದೆ. ಕನ್ನಡ ನಟ ಧ್ರುವ ಸರ್ಜಾನ ತೇಜ್ ಸಜ್ಜಾ ಭೇಟಿ ಆಗಿದ್ದಾರೆ.

ಭರ್ಜರಿ ಹುಡ್ಗ ಧ್ರುವ ಸರ್ಜಾ ಹನುಮ ಭಕ್ತ ಎನ್ನುವುದು ಎಲ್ಲರಿಗೂ ಗೊತ್ತಿದೆ. ಸದಾ ಹನುಮಾನ್ ಭಕ್ತಿ ಮೆರೆಯುವ ಆಕ್ಷನ್ ಪ್ರಿನ್ಸ್‌ 'ಹನುಮಾನ್' ಸಿನಿಮಾ ಹೀರೊ ತೇಜ ಸಜ್ಜಾ ಭೇಟಿಯಾಗಿದ್ದಾರೆ. ತಮ್ಮ ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ತೇಜ, ಈ ವೇಳೆ ಧ್ರುವ ಸರ್ಜಾ ಭೇಟಿಯಾಗಿ ಕೆಲ‌ಕಾಲ ಸಿನಿಮಾಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

Hanuman actor Teja Sajja Meets devotee of Lord Anjaneya Dhruva Sarja

ತೆಲುಗಿನಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಸಂಕ್ರಾಂತಿ ರೇಸ್‌ನಲ್ಲಿವೆ. ಮಹೇಶ್ ಬಾಬು ನಟನೆಯ 'ಗುಂಟೂರು ಖಾರಂ' ಸಿನಿಮಾ ಕೂಡ ಈ ಲಿಸ್ಟ್‌ನಲ್ಲಿದೆ. ಆದರೆ ಬುಕ್‌ಮೈ ಶೋ ಇಂಟ್‌ರೆಸ್ಟ್‌ನಲ್ಲಿ ಮಹೇಶ್ ಬಾಬು ಚಿತ್ರವನ್ನು ತೇಜ ಸಜ್ಜಾ ನಟನೆಯ 'ಹನುಮಾನ್' ಸಿನಿಮಾ ಮೀರಿಸಿ ಎಲ್ಲರ ಹುಬ್ಬೇರಿಸಿದೆ.

ತೇಜ ಸಜ್ಜಾ ನಟಿಸಿರುವ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆ ತಮ್ಮ ಚಿತ್ರ ನೋಡುವಂತೆ ಧ್ರುವ ಸರ್ಜಾಗೆ ತೇಜ ಮನವಿ ಮಾಡಿದ್ದಾರೆ. ಈ ವೇಳೆ 'ಹನುಮಾನ್' ಟ್ರೇಲರ್ ಅದ್ಭುತವಾಗಿದ್ದು, ತಾವು ಸಿನಿಮಾ ನೋಡುವುದಾಗಿ ಆಕ್ಷನ್ ಪ್ರಿನ್ಸ್ ತಿಳಿಸಿದ್ದಾರೆ. ಧ್ರುವ ಅಪ್ ಕಮ್ಮಿಂಗ್ ಚಿತ್ರಗಳಾದ 'ಕೆಡಿ', 'ಮಾರ್ಟಿನ್'ಗೆ ತೇಜ ಸಜ್ಜಾ ಶುಭಾಶಯ ಕೋರಿದ್ದು, ನಿಮ್ಮ 'ಪೊಗರು' ಸಿನಿಮಾ ತೆಲುಗು ರಂಗದಲ್ಲಿ ಸದ್ದು ಮಾಡಿತ್ತು. ನೀವು ಅದ್ಭುತವಾಗಿ ಆಕ್ಷನ್ ಮಾಡುತ್ತೀರಾ ಎಂದು ಧ್ರುವ ನಟನೆಯನ್ನು ಮೆಚ್ಚಿಕೊಂಡಿದ್ದಾರೆ.

ನಿರ್ದೇಶಕ ಪ್ರಶಾಂತ್ ವರ್ಮಾ ಭಾರತದ ಮೊದಲ ಸೂಪರ್ ಹೀರೋ 'ಹನು-ಮಾನ್' ಬಗ್ಗೆ ಕಥೆ ಹೆಣೆದು ಪ್ಯಾನ್ ಇಂಡಿಯಾ ನಿರ್ದೇಶಕನಾಗಿ ಹೊರ ಹೊಮ್ಮುತ್ತಿದ್ದಾರೆ. ಚಿತ್ರದಲ್ಲಿ ನಾಯಕ ನಟನಾಗಿ ತೇಜ ಸಜ್ಜಾ ನಟಿಸುತ್ತಿದ್ದು, ನಾಯಕಿಯಾಗಿ ಕನ್ನಡ ನಟಿ ಅಮೃತಾ ಐಯ್ಯರ್ ನಟಿಸಿದ್ದಾರೆ.

ಅಂಜನಾದ್ರಿ ಎಂಬ ಕಾಲ್ಪನಿಕ ಊರಿನಲ್ಲಿ ನಡೆಯುವ ಹನುಮಾನ್‌ ಕುರಿತು ಎಲ್ಲರಲ್ಲಿಯೂ ನಿರೀಕ್ಷೆ ಹೆಚ್ಚಾಗಿದೆ. ವರಲಕ್ಷಿ ಶರತ್ ಕುಮಾರ್, ವಿನಯ್ ರೈ, ರಾಜ್ ದೀಪಕ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಜನವರಿ 12, 2024ರಂದು ಗ್ರ್ಯಾಂಡ್ ರಿಲೀಸ್ ಆಗಲಿದೆ.

Hanuman actor Teja Sajja Meets devotee of Lord Anjaneya Dhruva Sarja

ಇನ್ನುಳಿದಂತೆ ತೆಲುಗಿನಲ್ಲಿ ವಿಕ್ಟರಿ ವೆಂಕಟೇಶ್ ನಟನೆಯ 'ಸೈಂಧವ್', ನಾಗಾರ್ಜುನ ಅಭಿನಯದ 'ನಾ ಸಾಮಿ ರಂಗಾ' ಸಿನಿಮಾಗಳು ಬಿಡುಗಡೆ ಆಗಲಿದೆ. ವಿಶೇಷ ಅಂದ್ರೆ ಈ ನಾಲ್ಕು ಸಿನಿಮಾಗಳಲ್ಲಿ ನಟಿಸಿರುವ ನಾಯಕಿಯರು ಕನ್ನಡ ನಟಿಯರೇ ಆಗಿದ್ದಾರೆ.

ರವಿತೇಜ ನಟನೆಯ 'ಈಗಲ್' ಸಿನಿಮಾ ಕೂಡ ಸಂಕ್ರಾಂತಿ ರೇಸ್‌ನಲ್ಲಿ ಇತ್ತು. ಆದರೆ ಕೊನೆ ಗಳಿಗೆಯಲ್ಲಿ ರಿಲೀಸ್ ಡೇಟ್ ಮುಂದೂಡಲಾಗಿದೆ. ಮುಂದಿನ ತಿಂಗಳು ಸಿನಿಮಾ ತೆರೆಗೆ ಬರಲಿದೆ. ಇನ್ನು 'ಹನುಮಾನ್' ಸಿನಿಮಾ ಅದ್ಧೂರಿ ಪ್ರೀ ರಿಲೀಸ್ ಈವೆಂಟ್ ಪ್ಲ್ಯಾನ್ ನಡೀತಿದೆ. ಚಿರಂಜೀವಿ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ.

ಇನ್ನು ತೆಲುಗಿನಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಒಮ್ಮೆ ಬಿಡುಗಡೆ ಆಗುತ್ತಿವೆ. ಇದೇ ಕಾರಣಕ್ಕೆ ಸರಿಯಾಗಿ ಚಿತ್ರಮಂದಿರಗಳು ಸಿಗುತ್ತಿಲ್ಲ ಎನ್ನಲಾಗ್ತಿದೆ. 'ಹನುಮಾನ್' ಚಿತ್ರಕ್ಕೆ ಆಂಧ್ರ, ತೆಲಂಗಾಣದಲ್ಲೇ ಥಿಯೇಟರ್ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ.

More from Filmibeat

English summary
Hanuman actor Teja Sajja meets Kannada actor dhruva sarja;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X