Just In
Don't Miss!
- News
ಡ್ರಗ್ಸ್ ಪ್ರಕರಣ: ಜೈಲಿನಲ್ಲಿ ಜೀವಕ್ಕೆ ಬೆದರಿಕೆ ಇದೆ ಎಂದು ಬಿಜೆಪಿ ಯುವ ನಾಯಕಿ ಪಮೇಲಾ ಆರೋಪ
- Automobiles
ರ್ಯಾಪಿಡ್ ಬದಲಾಗಿ ಹೊಸ ಸಿ ಸೆಗ್ಮೆಂಟ್ ಸೆಡಾನ್ ಬಿಡುಗಡೆ ಮಾಡಲಿದೆ ಸ್ಕೋಡಾ
- Lifestyle
ಬೆಡ್ನಲ್ಲಿ ಪುರುಷರ ಸಾಮರ್ಥ್ಯ ಹೆಚ್ಚಿಸುತ್ತೆ ಈ ಕೆಗೆಲ್ ವ್ಯಾಯಾಮ
- Sports
ಭಾರತ vs ಇಂಗ್ಲೆಂಡ್: ಕೊಹ್ಲಿ ಜೊತೆಗಿನ ಮಾತಿನ ಚಕಮಕಿ ಬಗ್ಗೆ ಪ್ರತಿಕ್ರಿಯಿಸಿದ ಬೆನ್ ಸ್ಟೋಕ್ಸ್
- Finance
ಮತ್ತಷ್ಟು ಕಡಿಮೆಯಾಯ್ತು ಚಿನ್ನದ ಬೆಲೆ: ಮಾರ್ಚ್ 04ರ ಬೆಲೆ ಇಲ್ಲಿದೆ
- Education
UAS Dharwad Recruitment 2021: ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದರ್ಶನ್ ಹುಟ್ಟುಹಬ್ಬಕ್ಕೆ ಗಣ್ಯರಿಂದ ಹಾರೈಕೆ: ಯಾರು ಏನು ಹೇಳಿದರು?
ನಟ ದರ್ಶನ್ ಅವರ ಹುಟ್ಟುಹಬ್ಬ ಇಂದು. ಕನ್ನಡ ಚಿತ್ರರಂಗದಲ್ಲಿ ಹಲವಾರು ಗೆಳೆಯರನ್ನು, ಅಭಿಮಾನಿಗಳನ್ನು ಹೊಂದಿರುವ ದರ್ಶನ್ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ದರ್ಶನ್ ಅವರ ಸಿನಿಮಾ ರಂಗದ ಗೆಳೆಯರು, ರಾಜಕೀಯ ರಂಗದ ಗೆಳೆಯರು ಇನ್ನೂ ಹಲವರು ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದಾರೆ.
ದರ್ಶನ್ ಅಭಿಮಾನಿಗಳಂತೂ ಕೆಲವು ದಿನಗಳು ಮುಂಚಿತವಾಗಿಯೇ ದರ್ಶನ್ ಹುಟ್ಟುಹಬ್ಬಕ್ಕೆಂದು ವಿಶೇಷ ಕಾಮನ್ ಡಿಪಿಯನ್ನು ಬಿಡುಗಡೆ ಮಾಡಿದ್ದಾರೆ. ದರ್ಶನ್ ಅವರು ಕ್ಯಾಮೆರಾ ಹಿಡಿದು ಕಾಡುಮೃಗಗಳ ಮಧ್ಯೆ ಕುಳಿತಿರುವ ಚಿತ್ರವು ಸಖತ್ ವೈರಲ್ ಆಗಿದೆ.

ಪುನೀತ್ ರಾಜ್‌ಕುಮಾರ್ ಅವರ ಸರಳ ಶುಭಾಶಯ
ನಟ ಪುನೀತ್ ರಾಜ್‌ಕುಮಾರ್ ಅವರು ಸರಳವಾಗಿ ಹುಟ್ಟುಹಬ್ಬದ ಶಶುಭಾಶಯಗಳು ದರ್ಶನ್ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಇಬ್ಬರೂ ಸಹ ಒಳ್ಳೆಯ ಗೆಳೆಯರಾಗಿದ್ದಾರೆ.

ಸಚಿವ ಶ್ರೀರಾಮುಲು ಶುಭಾಶಯ
ಸಚಿವ ಶ್ರೀರಾಮುಲು ಅವರು ಕನ್ನಡ ಚಿತ್ರರಂಗದ ಖ್ಯಾತ ನಟರು, ಅಭಿಮಾನಿಗಳ ಪ್ರೀತಿಯ ಡಿ ಬಾಸ್ ಶ್ರೀ ದರ್ಶನ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು ನಿಮ್ಮ ಮುಂದಿನ ಎಲ್ಲ ಸಿನಿಮಾಗಳು ಯಶಸ್ಸು ಕಾಣಲಿ ಎಂದು ಹಾರೈಸುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.

ನಟ ರಕ್ಷಿತ್ ಶೆಟ್ಟಿ ಹೇಳಿರುವುದು ಹೀಗೆ
ನಟ ರಕ್ಷಿತ್ ಶೆಟ್ಟಿ ತಮ್ಮ ಹಿರಿಯ ನಟನಿಗೆ ವಿಷ್ ಮಾಡಿದ್ದಾರೆ. ನಿಮ್ಮ ಉದಾತ್ತತೆ ಮತ್ತು ಜನಪರವಾದ ನಿಲವು ಎಲ್ಲರಿಗೂ ಸ್ಪೂರ್ತಿ ನೀಡಲಿ, ಅದ್ಭುತವಾದ ವರ್ಷ ನಿಮಗೆ ಆಗಲಿ, ಜನ್ಮ ದಿನದ ಶುಭಾಶಯಗಳು ಎಂದಿದ್ದಾರೆ ರಕ್ಷಿತ್ ಶೆಟ್ಟಿ.

ಅಣ್ಣನಿಗೆ ಹೀಗೆ ಶುಭಾಶಯ ಕೋರಿದ್ದಾರೆ ಅಭಿಷೇಕ್
ಅಂಬರೀಶ್ ಪುತ್ರ ಅಭಿಷೇಕ್ 'ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್, ಬಾಕ್ಸ್‌ಆಫೀಸ್ ಸುಲ್ತಾನ, ಅಭಿಮಾನಿಗಳ ಪ್ರೀತಿಯ 'ಡಿ ಬಾಸ್' ನನ್ನ ಪ್ರೀತಿಯ "ಸೀನಿಯರ್" ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು ,ಭಗವಂತ ನಿಮಗೆ ಹೆಚ್ಚಿನ ಆರೋಗ್ಯ ಆಯುಷ್ಯಾ ಕೊಟ್ಟು ,ಇನ್ನಷ್ಟೂ ಯಶಸ್ಸು ನಿಮ್ಮದಾಗಲೆಂದು ಆಶಿಸುತ್ತೇನೆ' ಎಂದು ದರ್ಶನ್‌ಗೆ ಶುಭಾಶಯ ಕೋರಿದ್ದಾರೆ.

ಗೆಳೆಯ ಸೃಜನ್ ಲೋಕೇಶ್ ವಿಷ್ ಮಾಡಿರುವುದು ಹೀಗೆ
ದರ್ಶನ್ ಆಪ್ತ ಗೆಳೆಯರಲ್ಲಿ ಒಬ್ಬರು ಸೃಜನ್ ಲೋಕೇಶ್. 'ದೇವರು ನಿಮಗೆ ಸಾಕಷ್ಟು ಖುಷಿ ಮತ್ತು ಯಶಸ್ಸನ್ನು ನೀಡಲಿ. ಸದಾ ಧನ್ಯವಾಗಿರು, ಹುಟ್ಟುಹಬ್ಬದ ಶುಭಾಶಯಗಳು' ಎಂದು ಟ್ವೀಟ್ ಮಾಡಿದ್ದಾರೆ ಸೃಜನ್. ಜೊತೆಗೆ ರಾಬರ್ಟ್ ಟ್ರೇಲರ್ ಅನ್ನು ಸಹ ಹಂಚಿಕೊಂಡಿದ್ದಾರೆ.

ಶುಭಾಶಯ ಕೋರಿದ ಸಂಸದ ಪಿ.ಸಿ.ಮೋಹನ್
ಬಿಜೆಪಿ ಸಂಸದ ಪಿ.ಸಿ.ಮೋಹನ್ ಅವರು ಸಹ ದರ್ಶನ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. 'ನಮ್ಮೆಲ್ಲರ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನವಗ್ರಹದ ಜಗ್ಗು...ಯಜಮಾನದ ಕೃಷ್ಣ...ಕುರುಕ್ಷೇತ್ರದ ದುರ್ಯೋಧನ. ಹೀಗೆ ಪ್ರತಿ ಪಾತ್ರದಲ್ಲೂ ನಿಮಗೆ ನೀವೇ ಸಾಟಿ. ಕನ್ನಡ ಚಿತ್ರರಂಗದ ಡಿ ಬಾಸ್ ಇನ್ನೂ ಕೋಟಿ ಕೋಟಿ ಜನರ ಮನಸ್ಸಿನ ಯಜಮಾನನಾಗಲಿ ಎಂದು ಹಾರೈಸುವೆ' ಎಂದು ಟ್ವೀಟ್ ಮಾಡಿದ್ದಾರೆ.

ಸಚಿವ ಬಿ.ಸಿ.ಪಾಟೀಲ್ ಸಹ ಟ್ವೀಟ್ ಮಾಡಿದ್ದಾರೆ
ಕೃಷಿ ಸಚಿವ ಬಿ.ಸಿ.ಪಾಟೀಲ್ ಸಹ ದರ್ಶನ್ ಹುಟ್ಟುಹಬ್ಬಕ್ಕೆ ಟ್ವೀಟ್ ಮಾಡಿದ್ದು, 'ಚಾಲೆಂಜಿಂಗ್ ಸ್ಟಾರ್ ಖ್ಯಾತಿಯ ಕನ್ನಡ ಚಿತ್ರರಂಗದ ನಟ ಹಾಗೂ ಆತ್ಮೀಯರಾದ ಶ್ರೀ ದರ್ಶನ್ ಅವರಿಗೆ ಜನ್ಮದಿನದ ಶುಭಹಾರೈಕೆಗಳು. ಭಗವಂತ ನಿಮಗೆ ಉತ್ತಮ ಆಯುರಾರೋಗ್ಯ ನೀಡಿ, ಕನ್ನಡ ಚಿತ್ರರಂಗಕ್ಕೆ ಹಾಗೂ ನಾಡು ನುಡಿಗೆ ಇನ್ನೂ ಹೆಚ್ಚಿನ ಕೊಡುಗೆ ನೀಡುವ ಶಕ್ತಿ ದಯಪಾಲಿಸಲಿ ಎಂದು ಹಾರೈಸುತ್ತೇನೆ' ಎಂದಿದ್ದಾರೆ.

ಶುಭಾಶಯ ಕೋರಿದ ಸಂಚಾರಿ ವಿಜಯ್
ವಯಸ್ಸಿನಲ್ಲಿ ನನಗಿಂತ ಹಿರಿಯರು ಸಾಧನೆಯಲ್ಲಿ ಶಿಖರವೇರಿದವರು ಆದರೂ ಭೇಟಿ ಮಾಡಿದ ಕೊಡಲೇ ಮೊದಲ ನುಡಿ 'ಏನ್ರೀ ಹೀರೋ ಹೇಗಿದ್ದೀರ' ಎಂದು ಬಹುವಚನದಿಂದಲೇ ಸಂಬೋಧಿಸುವ ಸಹೃದಯಿ. ಇವರೆದುರಿಗೆ ನಿಂತರೆ ಕುಳಿತುಕೊಳ್ಳುವವರೆಗೂ ಬಿಡದೆ 'ಆಜ್ಞಾಪಿಸುವ' ಪ್ರೀತಿಯ ಯಜಮಾನ. ಕಷ್ಟದಲ್ಲಿರುವವರಿಗೆ ಕ್ಷಣಮಾತ್ರಕ್ಕೆ ಕರಗುವ ಮರುಗುವ ಸ್ಪಂದಿಸುವ ಕರ್ಣನ ಗುಣ. ಮಾತು ಬಾರದ ಪ್ರಾಣಿಗಳಿಗೆ ತೋರುವ ಪ್ರೀತಿ ಅಪಾರ. ನಿಮ್ಮನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತು ನಿಮ್ಮ ಹೃದಯ ವೈಶಾಲ್ಯತೆ, ಅದರಲ್ಲಿ ನಾನೂ ಒಬ್ಬ ಅದೃಷ್ಟವಂತ. ನಮ್ಮಂಥ ಕೋಟ್ಯಂತರ ಅಭಿಮಾನಿಗಳ ಹೃದಯ ಸಿಂಹಾಸನಾಧೀಶ್ವರ ನೀವು. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಸರ್ ಎಂದಿದ್ದಾರೆ ಸಂಚಾರಿ ವಿಜಯ್