ರಾಕಿಂಗ್ ಸ್ಟಾರ್ ಯಶ್ ಗೆ ವಿಶ್ ಮಾಡಿ
ಅಶೋಕ್ ಕಶ್ಯಪ್ ಅವರ ಸೀರಿಯಲ್ ನೋಡಿದವರೆಲ್ಲ ಈ ಹುಡ್ಗ ಮುಂದಕ್ಕೆ ಬರ್ತಾನೇ ಎನ್ನುತ್ತಿದ್ದರು. ನಂತರ ವಿನು ಬಳಂಜ ಅವರ 'ಪ್ರೀತಿ ಇಲ್ಲದ ಮೇಲೆ' ಸೀರಿಯಲ್ ನಲ್ಲಿ ಅನಂತ್ ನಾಗ್ ಅವರ ಮಗನಾಗಿ ನಟಿಸಿದ ಯಶ್ ಗೆ ಮುಂದೆ ಕನ್ನಡ ಚಿತ್ರರಂಗದಲ್ಲಿ ರಾಕಿಂಗ್ ಸ್ಟಾರ್ ಆಗಿ ಮೆರೆಯುವ ಯೋಗ ಒದಗಿ ಬಂದಿದ್ದು ಈಗ ಇತಿಹಾಸ
'ನಂದ ಗೋಕುಲ' ಸೀರಿಯಲ್ ಮೂಲಕ ಕನ್ನಡಕ್ಕೆ ಇಬ್ಬರು ಸ್ಟಾರ್ ಗಳು ಸಿಕ್ಕಿದ್ದು ಪ್ರೇಕ್ಷಕರ ಲಕ್ ಎನ್ನಬಹುದು. ರಾಧಿಕಾ ಪಂಡಿತ್ ಹಾಗೂ ಯಶ್ ಇಬ್ಬರೂ ಈಗ ಕನ್ನಡ ಚಿತ್ರರಂಗದ ಹೆಮ್ಮೆಯ ಯುವತಾರೆಯಾಗಿದ್ದಾರೆ. ಮಳೆಬಿಲ್ಲು, ಉತ್ತರಾಯಣ ಎಂಬ ಇನ್ನೆರಡು ಧಾರಾವಾಹಿಗಳಲ್ಲೂ ಯಶ್ ಅಭಿನಯಿಸಿದ್ದರು.
ಮಧ್ಯಮ ವರ್ಗದ ಹುಡುಗನಾದ ಯಶ್ ಒಬ್ಬ ಚಿತ್ರರಂಗದಲ್ಲಿ ಸ್ಟಾರ್ ಮಟ್ಟಕ್ಕೆ ಬೆಳೆದಿದ್ದು ಸಿನಿಮಾ ಕಥೆಯಂತೆ ಇದೆ. ಯಶ್ ಬಗ್ಗೆ ಮಿಕ್ಕ ವಿಷಯಗಳು ದೃಶ್ಯಾವಳಿಯಲ್ಲಿ ನೋಡುತ್ತಾ ಹೋಗಿ...

ರಾಕಿಂಗ್ ಸ್ಟಾರ್ ಯಶ್ ಗೆವಿಶ್ ಮಾಡಿ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹುಟ್ಟಿದ ಯಶ್ ಅವರ ಮೂಲ ಹೆಸರು ನವೀನ್ ಕುಮಾರ್ ಗೌಡ. ಮಹಾರಾಜ ಹೈಸ್ಕೂಲ್ ನಲ್ಲಿ 10ನೇ ಕ್ಲಾಸ್ ತನಕ ವಿದ್ಯಾಭ್ಯಾಸ. ತಂದೆ ಸರ್ಕಾರಿ ಸಾರಿಗೆ ಸಂಸ್ಥೆಯಲ್ಲಿ ಉದ್ಯೋಗಿ. ಯಶ್ ಗೆ ಒಬ್ಬ ತಂಗಿ ಇದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಗೆ ವಿಶ್ ಮಾಡಿ
ಜಂಬದ ಹುಡುಗಿ ಮೂಲಕ ಬೆಳ್ಳಿತೆರೆಗೆ ಕಾಲಿರಿಸಿದರೂ ಬ್ರೇಕ್ ನೀಡಿದ್ದು ಸ್ತ್ರೀ ಪ್ರಧಾನ ಚಿತ್ರವಾದ ಮೊಗ್ಗಿನ ಮನಸ್ಸು ಮೂಲಕ.

ರಾಕಿಂಗ್ ಸ್ಟಾರ್ ಯಶ್ ಗೆ ವಿಶ್ ಮಾಡಿ
ಡ್ಯಾನ್ಸ್, ಫೈಟ್ಸ್ ಎಂದರೆ ನೀರು ಕುಡಿದಂತೆ ಮಾಡಿ ಬಿಡುವ ಯಶ್, ಅಭಿಮಾನಿಗಳ ಪಾಲಿಗೆ ರಾಕಿಂಗ್ ಸ್ಟಾರ್. ಮೊದಲ ನೋಟಕೆ ಹುಂಬನೆನಸಿದರೂ ಪ್ರಬುದ್ಧ ನಟನಾಗುವ ಹಾದಿಯಲ್ಲಿರುವುದು ಉತ್ತಮ ಬೆಳವಣಿಗೆ

ರಾಕಿಂಗ್ ಸ್ಟಾರ್ ಯಶ್ ಗೆ ವಿಶ್ ಮಾಡಿ
ರಾಂಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘ ಕೂಡಾ ಹುಟ್ಟಿಕೊಂಡಿದ್ದು ಕೇವಲ ಮಾಸ್ ಹೀರೋ ಎಂದಲ್ಲ. ಯಶ್ ಪ್ರತಿಭೆ ಮೆಚ್ಚಿ ಅಭಿಮಾನಿಗಳು ಪ್ರೀತಿಯಿಂದ ಕಟ್ಟಿದ ಸಂಘ

ರಾಕಿಂಗ್ ಸ್ಟಾರ್ ಯಶ್ ಗೆ ವಿಶ್ ಮಾಡಿ
ಮೊಗ್ಗಿನ ಮನಸು ಅಭಿನಯಕ್ಕೆ ಸಹಾಯಕ ಪಾತ್ರವಾಗಿ ಫಿಲಂ ಫೇರ್ ಪಡೆದ ಯಶ್ ಸಾಧನೆ ದೊಡ್ಡದು. ಪ್ರತಿಭೆ ತಕ್ಕ ಪಾತ್ರ ಸಿಕ್ಕರೆ ಸಾಕು, ನಂ.1 ನಟ ಪಟ್ಟ ಅದೆಲ್ಲ ಗೊತ್ತಿಲ್ಲ ಎನ್ನುತ್ತಾರೆ ಹಸನ್ಮುಖಿ ಯಶ್

ರಾಕಿಂಗ್ ಸ್ಟಾರ್ ಯಶ್ ಗೆ ವಿಶ್ ಮಾಡಿ
ಕಳ್ಳರ ಸಂತೆ, ತಮಸ್ಸು, ಮೊದಲ ಸಲಾ ಹಾಗೂ ಇತ್ತೀಚಿನ ಡ್ರಾಮಾದಲ್ಲಿನ ಅಭಿನಯ ಎಲ್ಲರಿಗೂ ಮೆಚ್ಚುಗೆಯಾಗಿದೆ. ರಾಜಧಾನಿ, ಕಿರಾತಕ, ಲಕ್ಕಿ, ಜಾನು, ಡ್ರಾಮಾ ಹಿಟ್ ಲಿಸ್ಟ್ ನಲ್ಲಿ ಸೇರಿದೆ. 2013ರಲ್ಲಿ ಗೂಗ್ಲಿ, ರಾಜಾ ಹುಲಿ ತೆರೆ ಕಾಣಲಿದೆ.

ರಾಕಿಂಗ್ ಸ್ಟಾರ್ ಯಶ್ ಗೆ ವಿಶ್ ಮಾಡಿ
ಪಡ್ಡೆಗಳ ಆರಾಧ್ಯ ದೈವ ಎನಿಸಿದರೂ ಯಶ್ ಮನೆ ಮಗನಂತೆ ಎಲ್ಲರಿಗೂ ಅಚ್ಚು ಮೆಚ್ಚಾಗುತ್ತದೆ. 2013ರಲ್ಲಿ ಅವರು ಹೆಚ್ಚೆಚ್ಚು ಸ್ವಮೇಕ್ ಚಿತ್ರಗಳಲ್ಲೇ ಅಭಿನಯಿಸಿ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಲಿ ಎಂದು ಒನ್ ಇಂಡಿಯಾ ಕನ್ನಡ ಶುಭ ಹಾರೈಸುತ್ತದೆ.


Click it and Unblock the Notifications











