For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ ಸಿಂಡ್ರೆಲಾಗೆ ಬರ್ತ್ ಡೇ ಸಂಭ್ರಮ

  By ಜೀವನರಸಿಕ
  |

  ಕನ್ನಡದ ಹ್ಯಾಟ್ರಿಕ್ ಹೀರೋಯಿನ್ ರಾಧಿಕಾ ಪಂಡಿತ್ ಗೆ ಇವತ್ತು ಬರ್ತಡೇ ಸಂಭ್ರಮ. ಮೊದಲ ಸಿನಿಮಾಗೇ ಸ್ಟೇಟ್ ಅವಾರ್ಡ್ ಪಡ್ಕೊಂಡ ಈ ಸ್ವೀಟ್ ಸ್ವೀಟ್ ಬ್ಯೂಟಿಗೆ ಎಷ್ಟನೇ ಹುಟ್ಟುಹಬ್ಬದ ಸಂಭ್ರಮ ಅಂತ ನಾವ್ ಹೇಳೋದಿಲ್ಲ. ಯಾಕಂದ್ರೆ ಹುಡ್ಗೀರ ವಯಸ್ಸನ್ನ ಕೇಳ್ಬಾರ್ದಂತೆ. ಹೇಳಲೂ ಬಾರ್ದಂತೆ.

  ಉತ್ತರ ಕನ್ನಡ ಮೂಲದ ಈ ಚೆಲುವೆ ಧಾರಾವಾಹಿಯ ಮೂಲಕ ಕನ್ನಡ ಚಿತ್ರರಂಗದಲ್ಲಿ ಮೋಡಿ ಮಾಡಿದರು. ಚೆಲುವೆ ರಾಧಿಕಾ ಪಂಡಿತ್ ಸಿನಿಮಾಗಿಂತ ಅಥವಾ ಅಭಿನಯಕ್ಕಿಂತ ಬೇರೇ ಏನನ್ನೂ ಮಾಡದ ಚೆಲುವೆ. [ನಟಿ ರಾಧಿಕಾ ಪಂಡಿತ್ ಸಕ್ಸಸ್ ಗುಟ್ಟೇನು ಗೊತ್ತಾ?]

  ಅಭಿನಯಕ್ಕೆ ನಿಂತರೆ ಪಾತ್ರದೊಳಗೆ ಕಳೆದುಹೋಗುವ ರಾಧಿಕಾ ಪಂಡಿತ್ ಅಬಿನಯಕ್ಕೇನೇ ಸತತ ಮೂರು ರಾಜ್ಯ ಪ್ರಶಸ್ತಿಗಳು ಸಂದಿವೆ. ಈ ಚೆಲುವೆಯ ಹುಟ್ಟುಹಬ್ಬಕ್ಕೆ ನಾವೂ ವಿಶ್ ಮಾಡೋಣ, ಈ ರಾಧೆಯ ಸಿನಿಜೀವನದ ಸ್ಪೆಷಲ್ ಝಲಕ್ ಗಳನ್ನ ನೋಡ್ತಾ ಹೋಗೋಣ.

  ಜೋಧಾ ಅಕ್ಬರ್ ತರಹದ ಸಿನಿಮಾದಲ್ಲಿ ನಟಿಸೋ ಕನಸು

  ಜೋಧಾ ಅಕ್ಬರ್ ತರಹದ ಸಿನಿಮಾದಲ್ಲಿ ನಟಿಸೋ ಕನಸು

  ರಾಧಿಕಾ ಪಂಡಿತ್ ಗೆ 'ಜೋಧಾ ಅಕ್ಬರ್' ತರಹದ ಸಿನಿಮಾದಲ್ಲಿ ನಟಿಸೋ ಕನಸು. ಅದು ಯಾವಾಗ ನೆರವೇರುತ್ತದೋ ಕಾದುನೋಡಬೇಕು.

  ರಾಧಿಕಾ ಪಂಡಿತ್ ರೆಸಲ್ಯೂಷನ್

  ರಾಧಿಕಾ ಪಂಡಿತ್ ರೆಸಲ್ಯೂಷನ್

  ರಾಧಿಕಾ ಪಂಡಿತ್ ರೆಸೊಲ್ಯೂಷನ್ ಮತ್ತಷ್ಟು ಹಾರ್ಡ್ ವರ್ಕ್ ಮಾಡಬೇಕು, ಒಳ್ಳೇ ಸಿನಿಮಾದಲ್ಲಿ ನಟಿಸಬೇಕು ಅನ್ನೋದು.

  ಸ್ಯಾಂಡಲ್ ವುಡ್ ಸಿಂಡ್ರೆಲಾದ ಇನ್ನೊಂದು ಮಾತು

  ಸ್ಯಾಂಡಲ್ ವುಡ್ ಸಿಂಡ್ರೆಲಾದ ಇನ್ನೊಂದು ಮಾತು

  ಹತ್ತು ಸಿನಿಮಾ ಮಾಡಿದ್ರೆ ಐದು ನೆನಪಲ್ಲಿ ಉಳೀಬೇಕು. ನೂರು ಸಿನಿಮಾ ಮಾಡಿ ಒಂದೂ ಚೆನ್ನಾಗಿಲ್ಲದಿದ್ರೆ ಹೇಗೆ ಅಂತಾರೆ ಈ ಸಿಂಡ್ರೆಲಾ.

  ಟೈಂ ಸಿಕ್ರೆ ಫ್ಯಾಮಿಲಿಯವ್ರ ಜೊತೆ ಕಾಲ ಕಳೀತಾರೆ

  ಟೈಂ ಸಿಕ್ರೆ ಫ್ಯಾಮಿಲಿಯವ್ರ ಜೊತೆ ಕಾಲ ಕಳೀತಾರೆ

  ರಾಧಿಕಾ ಫ್ಯಾಮಿಲಿಯನ್ನ ತುಂಬಾ ಇಷ್ಟಪಡ್ತಾರೆ. ಟೈಂ ಸಿಕ್ರೆ ಫ್ಯಾಮಿಲಿಯವ್ರ ಜೊತೆ ಕಾಲ ಕಳೀತಾರೆ.

  ರಾಧಿಕಾ ಈ ವರ್ಷ ಫುಲ್ ಬಿಜಿ

  ರಾಧಿಕಾ ಈ ವರ್ಷ ಫುಲ್ ಬಿಜಿ

  ಎಂದೆಂದಿಗೂ ಶೂಟಿಂಗ್ ನಡೀತಿದೆ. ಬಹದ್ದೂರ್ ಕೊನೇ ಹಂತದಲ್ಲಿದೆ. ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಶುರುವಾಗ್ತಿದೆ.

  ಲಕ್ಕಿ ಹೀರೋಯಿನ್ ಅಂತಾನೇ ಫೇಮಸ್

  ಲಕ್ಕಿ ಹೀರೋಯಿನ್ ಅಂತಾನೇ ಫೇಮಸ್

  ಮೊದಲ ಸಿನಿಮಾ 'ಮೊಗ್ಗಿನ ಮನಸ್ಸಿ'ಗೇ ಸ್ಟೇಟ್ ಅವಾರ್ಡ್ ಪಡೆದ ಟ್ಯಾಲೆಂಟೆಡ್ ಚೆಲುವೆ, ಹೊಸಬರಿಗೆ ಲಕ್ಕಿ ಹೀರೋಯಿನ್ ಅಂತಾನೇ ರಾಧಿಕಾ ಪಂಡಿತ್ ಫೇಮಸ್.

  English summary
  Sandalwood Cinderella Radhika Pandit celebrating her birthday on 7th March, wish on her birthday. Radhika belongs to one of the Konkani Speaking Community of Saraswat Brahmin at Shirali near Uttara Kannada District. Radhika Pandit completed her high school education at Cluny Convent High School and Mount Carmel College and currently resides near Devaiah Park, Bangalore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X