Happy Father's Day 2025: ತಂದೆ ಮಗನ ಬಾಂಧವ್ಯ ಸಾರಲು ಬರ್ತಿವೆ ಈ ಕನ್ನಡ ಚಿತ್ರಗಳು

ಪ್ರತಿ ವರ್ಷ ಜೂನ್ ತಿಂಗಳ ಮೂರನೇ ಭಾನುವಾರದಂದು ವಿಶ್ವ ಅಪ್ಪಂದಿರ ದಿನ ಆಚರಿಸಲಾಗುತ್ತದೆ. ತಂದೆಯನ್ನು ಗೌರವಿಸಲು ಮೀಸಲಿಟ್ಟ ದಿನ ಇದು. ತನ್ನ ಮಕ್ಕಳ ಕನಸುಗಳು ಮತ್ತು ಆಸೆಗಳನ್ನು ಬೆಂಬಲಿಸಿ ನನಸು ಮಾಡಲು ತಂದೆ ಯಾವಾಗಲೂ ಶ್ರಮಪಡುತ್ತಾನೆ. ಆತನ ಶ್ರಮಕ್ಕೆ ಎಷ್ಟು ಕೃತಜ್ಞರಾಗಿದ್ದರೂ ಕಮ್ಮಿಯೇ.

ಪ್ರತೀ ಮಗುವಿಗೆ ತನ್ನ ತಂದೆಯೇ ಮೊದಲ ಹೀರೊ. ತಂದೆಯ ಸಾಹಸಗಳನ್ನು ನೋಡಿಯೇ ಮಗು ಬೆಳೆಯುತ್ತದೆ. ಅಪ್ಪ ಗದರಿದಾಗ ನಮ್ಮಪ್ಪನಿಗೆ ಯಾಕೆ ಇಷ್ಟು ಸಿಟ್ಟು ಎಂದು ಮಕ್ಕಳು ಭಾವಿಸುವುದು ಇದೆ. ಅಪ್ಪನ ತ್ಯಾಗ, ತಾಳ್ಮೆ, ಧೈರ್ಯ ಎಲ್ಲವೂ ಮಗುವಿಗೆ ಆದರ್ಶ. ಅಮ್ಮನಿಗೆ ಮಾತ್ರ ದೇವರ ಸ್ಥಾನ ನೀಡಿಬಿಟ್ಟರೆ ಸಾಲದು. ಅಪ್ಪನಿಗೂ ಅದರಲ್ಲಿ ಪಾಲಿದೆ.

Happy Father s Day Chowkidar Son of Harishchandra amp amp Father Celebrate Bond Between Father and Child

ತಂದೆ ಮಕ್ಕಳ ಬಾಂಧವ್ಯ ಸಾರುವ ಸಾಕಷ್ಟು ಸಿನಿಮಾಗಳು ಬಂದು ಹೋಗಿದೆ. ಸಾಕಷ್ಟು ಹಾಡುಗಳು ಇವೆ. ಕನ್ನಡದಲ್ಲಿ ಸದ್ಯ ಕೆಲ ಸಿನಿಮಾಗಳು ತಂದೆ ಮಕ್ಕಳ ಬಾಂಧವ್ಯದ ಸಾರಲು ಬರುತ್ತಿವೆ. ಸಾಯಿಕುಮಾರ್ ನಟನೆಯ 'ಚೌಕಿದಾರ್', 'ಸನ್ ಆಫ್ ಹರಿಶ್ಚಂದ್ರ', ರಂಗಾಯಣ ರಘು, ಪ್ರಣಾಮ್ ದೇವರಾಜ್ ಅಭಿನಯದ 'ಸನ್ ಆಫ್ ಮುತ್ತಣ್ಣ' ಹಾಗೂ ಪ್ರಕಾಶ್ ರಾಜ್ ನಟನೆಯ 'ಫಾದರ್' ಸಿನಿಮಾಗಳು ನಿರೀಕ್ಷೆ ಹುಟ್ಟಾಕ್ಕಿವೆ.

ಫಾದರ್

ಪ್ರಕಾಶ್ ರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ತಂದೆ-ಮಗನಾಗಿ ನಟಿಸಿರುವ 'ಫಾದರ್' ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. ಆರ್‌. ಚಂದ್ರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಒಂದು ಹಾಡು ಹೊರತುಪಡಿಸಿ ಬಹುತೇಕ ಸಿನಿಮಾ ಚಿತ್ರೀಕರಣ ಮುಗಿದೆ. ತಂದೆ-ಮಗನ ಕಥೆ ಆಗಿದ್ದರೂ ಇದು ಬಹಳ ವಿಭಿನ್ನವಾದ ಸಿನಿಮಾ ಎಂದು ಡಾರ್ಲಿಂಗ್ ಕೃಷ್ಣ ಹೇಳಿದ್ದಾರೆ. ರಾಜ್ ಮೋಹನ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಸನ್ ಆಫ್ ಸತ್ಯಹರಿಶ್ಚಂದ್ರ

ಸಾಯಿಕುಮಾರ್ ಮಗನ ಪಾತ್ರದಲ್ಲಿ ನಿರೂಪ್ ಭಂಡಾರಿ ನಟಿಸುತ್ತಿರುವ ಸಿನಿಮಾ 'ಸನ್ ಆಫ್ ಸತ್ಯಹರಿಶ್ಚಂದ್ರ'. ಸಚಿನ್ ವಾಲಿ ನಿರ್ದೇಶನದ ಈ ಚಿತ್ರವನ್ನು ಅಂಕಿತ್ ಸಿನಿಮಾಸ್ ಬ್ಯಾನರ್ ನಡಿಯಲ್ಲಿ ಅಂಕಿತ್ ಸೋನಿಗಾರ ನಿರ್ಮಿಸುತ್ತಿದ್ದಾರೆ. ಬೃಂದಾ ಆಚಾರ್ಯ, ಅಂಕಿತಾ ಅಮರ್, ಸ್ವಾತಿ ಗುರುದತ್ ತಾರಾಗಣದಲ್ಲಿದ್ದಾರೆ. 'ರಂಗಿತರಂಗ' ಬಳಿಕ ನಿರೂಪ್ ಹಾಗೂ ಸಾಯಿಕುಮಾರ್ ಜೊತೆಯಾಗಿರುವುದು ಕುತೂಹಲ ಮೂಡಿಸಿದೆ.

Happy Father s Day Chowkidar Son of Harishchandra amp amp Father Celebrate Bond Between Father and Child

ಸನ್ ಆಫ್ ಮುತ್ತಣ್ಣ

ಡೈನಾಮಿಕ್ ಸ್ಟಾರ್ ದೇವರಾಜ್ ಪುತ್ರ ಪ್ರಣಾಮ್ ನಟನೆಯ ಯಾವುದೇ ಸಿನಿಮಾ ಗೆಲ್ಲಲಿಲ್ಲ. ಈ ಬಾರಿ ತಂದೆ- ಮಗನ ಬಾಂಧವ್ಯದ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. 'ಸನ್ ಆಫ್ ಮುತ್ತಣ್ಣ' ಟೈಟಲ್ಲೇ ಸಿನಿಮಾ ಕಥೆ ಹೇಳುತ್ತಿದೆ. ಇನ್ನು ಚಿತ್ರದಲ್ಲಿ ರಂಗಾಯಣ ರಘು ತಂದೆಯಾಗಿ, ಮಗನಾಗಿ ಪ್ರಣಾಮ್ ಕಾಣಿಸಿಕೊಂಡಿದ್ದಾರೆ. ಶ್ರೀಕಾಂತ್ ಹೂಣಸೂರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸುಚೇಂದ್ರ ಪ್ರಸಾದ್, ಸುಧಾ ಬೆಳವಾಡಿ, ಕುಷಿ ರವಿ ತಾರಾಗಣದಲ್ಲಿದ್ದಾರೆ.

ಚೌಕಿದಾರ್

ಅಪ್ಪ ಮಗನ ಬಾಂಧವ್ಯದ ಮತ್ತೊಂದು ಸಿನಿಮಾ 'ಚೌಕಿದಾರ್'. ಇತ್ತೀಚೆಗೆ ಈ ಚಿತ್ರದ 'ಅಪ್ಪ ಆಂಥಮ್' ಸಾಂಗ್ ರಿಲೀಸ್ ಆಗಿ ಸದ್ದು ಮಾಡಿತ್ತು. ಚಿತ್ರದಲ್ಲಿ ಸಾಯಿಕುಮಾರ್ ಹಾಗೂ ಪೃಥ್ವಿ ಅಂಬರ್ ತಂದೆ, ಮಗನಾಗಿ ಮಿಂಚಿದ್ದಾರೆ. ಸಚಿನ್ ಬಸ್ರೂರ್ ಸಂಗೀತದ ಹಾಡಿಗೆ ವಿ, ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ವಿಜಯ್ ಪ್ರಕಾಶ್ ಹಾಡು ಹಾಡಿದ್ದಾರೆ. ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ಚಿತ್ರದಲ್ಲಿ ಧನ್ಯಾ ರಾಮ್‌ಕುಮಾರ್ ನಾಯಕಿಯಾಗಿ ನಟಿಸಿದ್ದಾರೆ. ಸುಧಾರಾಣಿ ಮತ್ತೊಂದು ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಕಲ್ಲಹಳ್ಳಿ ಚಂದ್ರಶೇಖರ್ ಚಿತ್ರಕ್ಕೆ ಹಣ ಹೂಡಿದ್ದಾರೆ.

More from Filmibeat

English summary
This Father’s Day, Kannada cinema pays tribute to the strength and sacrifice of fathers through powerful films
Read more about: saikumar sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X