ಹ್ಯಾಪಿ ಮ್ಯಾರೀಡ್ ಲೈಫ್ ಪ್ರಜ್ವಲ್ ದೇವರಾಜ್-ರಾಗಿಣಿ

By Harshitha

ಸ್ಯಾಂಡಲ್ ವುಡ್ ನಲ್ಲಿ 'ಸಿಕ್ಸರ್' ಬಾರಿಸಿದ ಪ್ರಜ್ವಲ್ ದೇವರಾಜ್ ಬ್ಯಾಚುಲರ್ ಲೈಫ್ ಗೆ ಬೈ ಬೈ ಹೇಳಿದ್ದಾರೆ. ಡೈನಾಮಿಕ್ ಸ್ಟಾರ್ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ಇವತ್ತು ತಮ್ಮ ಮನದನ್ನೆ ರಾಗಿಣಿ ಚಂದ್ರನ್ ರವರೊಂದಿಗೆ ನವ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದ 'ದಿ ಗ್ರ್ಯಾಂಡ್ ಕೆಸಲ್'ನಲ್ಲಿ ಪ್ರಜ್ವಲ್ ದೇವರಾಜ್-ರಾಗಿಣಿ ಚಂದ್ರನ್ ವಿವಾಹ ಅದ್ದೂರಿಯಾಗಿ ನಡೆಯುತ್ತಿದೆ. ಇಬ್ಬರ ಗಟ್ಟಿಮೇಳಕ್ಕಾಗಿ ಅದ್ದೂರಿ ಮಂಟಪ ಸಿದ್ಧವಾಗಿತ್ತು. [ನವ ಬಾಳಿಗೆ ಕಾಲಿಟ್ಟ ಪ್ರಜ್ವಲ್ ದೇವರಾಜ್-ರಾಗಿಣಿ]

ಇಂದು ಬೆಳಗ್ಗೆ 10.30 ರಿಂದ 12 ಗಂಟೆ ವರೆಗೆ ಇದ್ದ ಶುಭ ಧನುರ್ ಲಗ್ನದಲ್ಲಿ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಚಂದ್ರನ್ ಹಸೆ ಮಣೆ ಏರಿದರು. ಆ ಮೂಲಕ ಇಬ್ಬರ ಸುದೀರ್ಘ ಪ್ರೇಮಕ್ಕೆ ಅಧಿಕೃತ ಮುದ್ರೆ ಬಿದ್ದಂತಾಗಿದೆ. ಮುಂದೆ ಓದಿ....

ಹಸೆ ಮಣೆ ಏರಿದ ಜೋಡಿ

ಹಸೆ ಮಣೆ ಏರಿದ ಜೋಡಿ

ರಾಗಿಣಿ ಚಂದ್ರನ್ ಅಯ್ಯರ್ ಕುಟುಂಬದ ಹುಡುಗಿ. ಪ್ರಜ್ವಲ್ ದೇವರಾಜ್ ಒಕ್ಕಲಿಗ ಹುಡುಗ. ಹೀಗಾಗಿ ಅಯ್ಯರ್ ಮತ್ತು ಒಕ್ಕಲಿಗ ಸಂಪ್ರದಾಯದಂತೆ ಪ್ರಜ್ವಲ್ ದೇವರಾಜ್, ರಾಗಿಣಿ ಚಂದ್ರನ್ ಕೈ ಹಿಡಿದರು. [ಚಿತ್ರಗಳು : ಪ್ರಜ್ವಲ್ ದೇವರಾಜ್ ಮದುವೆ ತಯಾರಿ ಸಂಭ್ರಮ]

ಸಂಭ್ರಮದಲ್ಲಿ ವಧು-ವರ

ಸಂಭ್ರಮದಲ್ಲಿ ವಧು-ವರ

ಹೊಸ ಬಾಳಿಗೆ ಕಾಲಿಟ್ಟ ಖುಷಿಯಲ್ಲಿ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಚಂದ್ರನ್. ['ರೀಲ್' ಹೀರೋ ಪ್ರಜ್ವಲ್ ದೇವರಾಜ್ 'ರಿಯಲ್' ಪ್ರೇಮ್ ಕಹಾನಿ]

ಶಾಸ್ತ್ರೋಕ್ತವಾಗಿ ಮದುವೆ

ಶಾಸ್ತ್ರೋಕ್ತವಾಗಿ ಮದುವೆ

ಸಂಪ್ರದಾಯ ಬದ್ಧವಾಗಿ ವರ ಕಾಶಿ ಯಾತ್ರೆ ಮತ್ತು ವಧು ಗೌರಿ ಪೂಜೆ ಮುಗಿಸಿದ ಬಳಿಕ ಹಸೆ ಮಣೆ ಏರಿದರು. ಗುರು ಹಿರಿಯರ ಸಮ್ಮುಖದಲ್ಲಿ ಪ್ರಜ್ವಲ್ ದೇವರಾಜ್-ರಾಗಿಣಿ ಚಂದ್ರನ್ ಸಪ್ತಪದಿ ತುಳಿದರು.

ರಾಗಿಣಿ ಚಂದ್ರನ್ ಕುರಿತು....

ರಾಗಿಣಿ ಚಂದ್ರನ್ ಕುರಿತು....

ರಾಗಿಣಿ ಚಂದ್ರನ್ ಹುಟ್ಟಿ ಬೆಳೆದದ್ದೆಲ್ಲಾ ಬೆಂಗಳೂರಿನಲ್ಲಿ. ಖ್ಯಾತ ನೃತ್ಯಗಾರ್ತಿ ಶ್ರೀಮತಿ.ನಿರುಪಮ ರಾಜೇಂದ್ರ ಮತ್ತು ಶ್ರೀ.ರಾಜೇಂದ್ರ ರವರ ಅಭಿನವ ಡ್ಯಾನ್ಸ್ ಕಂಪನಿಯಲ್ಲಿ ರಾಗಿಣಿ ಚಂದ್ರನ್ ಕಥಕ್ ಡ್ಯಾನ್ಸರ್ ಆಗಿದ್ದಾರೆ. ವಿಶ್ವದಾದ್ಯಂತ ಕಥಕ್ ನೃತ್ಯ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಕೆಲ ವರ್ಷಗಳ ಹಿಂದೆಯಷ್ಟೆ ಮಾಡೆಲಿಂಗ್ ಲೋಕಕ್ಕೆ ಅಡಿಯಿಟ್ಟ ರಾಗಿಣಿ ಚಂದ್ರನ್ Khazana Jewellers, GRT Jewellers, 3M Nexcare, Colortree, Lulu International Mall ಗಾಗಿ ಟಿವಿ ಜಾಹೀರಾತು ಮತ್ತು ಪ್ರಿಂಟ್ ಆಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. [ಪ್ರಜ್ವಲ್ ದೇವರಾಜ್ ಮನದನ್ನೆ ರಾಗಿಣಿ ಚಂದ್ರನ್ ಕುರಿತು...]

ಪ್ರಜ್ವಲ್ ಪರಿಚಯ ಆಗಿದ್ದು ಹೇಗೆ?

ಪ್ರಜ್ವಲ್ ಪರಿಚಯ ಆಗಿದ್ದು ಹೇಗೆ?

ಇಮ್ರಾನ್ ಸರ್ದಾರಿಯಾ ಡ್ಯಾನ್ಸ್ ಕ್ಲಾಸ್ ನಲ್ಲಿ ಫ್ರೀ ಸ್ಟೈಲ್ ನೃತ್ಯ ಕಲಿಯುತ್ತಿರುವಾಗ ಪ್ರಜ್ವಲ್ ದೇವರಾಜ್ ಗೆ ರಾಗಿಣಿ ಚಂದ್ರನ್ ಪರಿಚಯವಾಯ್ತು. ಆಗ ಪ್ರಜ್ವಲ್ 9ನೇ ಕ್ಲಾಸ್ ನಲ್ಲಿದ್ದರು. ರಾಗಿಣಿ ಚಂದ್ರನ್ 6ನೇ ಕ್ಲಾಸ್ ನಲ್ಲಿದ್ದರು. ಅಂದಿನಿಂದಲೇ ರಾಗಿಣಿ ಚಂದ್ರನ್ ಮತ್ತು ಪ್ರಜ್ವಲ್ ದೇವರಾಜ್ ಕ್ಲೋಸ್ ಫ್ರೆಂಡ್ಸ್. ಇಬ್ಬರಿಗೂ ಕಾಮನ್ ಫ್ರೆಂಡ್ಸ್ ಹೆಚ್ಚು. ಒಂದೇ ಫ್ರೆಂಡ್ಸ್ ಗ್ರೂಪ್ ನಲ್ಲಿರುವ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿ ಇಂದು ಸತಿ-ಪತಿ ಆಗಿದ್ದಾರೆ. ಹ್ಯಾಪಿ ಮ್ಯಾರೀಡ್ ಲೈಫ್ ಪ್ರಜ್ವಲ್-ರಾಗಿಣಿ.

More from Filmibeat

English summary
Kannada Actor Prajwal Devaraj has tied knot with his long-time girlfriend Ragini Chandran today (October 25th) in Palace Grounds, Bengaluru. Happy married life to the couple.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X