ಹ್ಯಾಪಿ ಮ್ಯಾರೀಡ್ ಲೈಫ್ ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್

By Harshitha

ಸ್ಯಾಂಡಲ್ ವುಡ್ ನಲ್ಲಿ 'ರಾಜಾಹುಲಿ' ಆಗಿ ಘರ್ಜಿಸಿದ ಯಶ್ ಇಂದು ತಮ್ಮ ಬ್ಯಾಚುಲರ್ ಲೈಫ್ ಗೆ ಬೈ ಬೈ ಹೇಳಿದ್ದಾರೆ. ಇವತ್ತು ತಮ್ಮ ಮನದನ್ನೆ ರಾಧಿಕಾ ಪಂಡಿತ್ ರವರೊಂದಿಗೆ ರಾಕಿಂಗ್ ಸ್ಟಾರ್ ಯಶ್ ನವ ಜೀವನಕ್ಕೆ ಕಾಲಿಟ್ಟಿದ್ದಾರೆ.['ಮಿಸ್ಟರ್ ಅಂಡ್ ಮಿಸಸ್' ಆದ ಯಶ್-ರಾಧಿಕಾ ಪಂಡಿತ್]

ಬೆಂಗಳೂರಿನ ಪ್ರತಿಷ್ಟಿತ ಹೋಟೆಲ್ ದಿ ತಾಜ್ ವೆಸ್ಟ್ ಎಂಡ್ ನಲ್ಲಿ 'ಸ್ಯಾಂಡಲ್ ವುಡ್ ನ ರಾಜಾ ರಾಣಿ' ಯಶ್-ರಾಧಿಕಾ ಪಂಡಿತ್ ರವರ ವಿವಾಹ ಮಹೋತ್ಸವ ಅದ್ಧೂರಿಯಾಗಿ ನಡೆಯಿತು.

ಹಸೆ ಮಣೆ ಏರಿದ ಜೋಡಿ

ಹಸೆ ಮಣೆ ಏರಿದ ಜೋಡಿ

ರಾಧಿಕಾ ಪಂಡಿತ್ ಕೊಂಕಣಿ ಕುಟುಂಬದ ಹುಡುಗಿ. ಯಶ್ ಒಕ್ಕಲಿಗ ಹುಡುಗ. ಹೀಗಾಗಿ ಒಕ್ಕಲಿಗ ಹಾಗೂ ಕೊಂಕಣಿ ಸಂಪ್ರದಾಯದಂತೆ ಯಶ್, ರಾಧಿಕಾ ಪಂಡಿತ್ ರವರ ಕೈ ಹಿಡಿದರು. [ಎಕ್ಸ್ ಕ್ಲೂಸಿವ್ : ನವ ವಧು ರಾಧಿಕಾ ಪಂಡಿತ್ ಗೌರಿ ಪೂಜೆ ವಿಡಿಯೋ]

ಶಾಸ್ತ್ರೋಕ್ತವಾಗಿ ಮದುವೆ

ಶಾಸ್ತ್ರೋಕ್ತವಾಗಿ ಮದುವೆ

ಶಾಸ್ತ್ರ-ಸಂಪ್ರದಾಯ ಬದ್ಧವಾಗಿ ಕಾಶಿ ಯಾತ್ರೆ, ವರ ಪೂಜೆ ನೆರವೇರಿದ ಬಳಿಕ ವರ ಯಶ್ ಮದುವೆ ಮಂಟಪಕ್ಕೆ ಆಗಮಿಸಿದರು. [ಎಕ್ಸ್ ಕ್ಲೂಸಿವ್: ತಾಜ್ ವೆಸ್ಟ್ಎಂಡ್ ನಲ್ಲಿ ಯಶ್-ರಾಧಿಕಾ 'ಧಾರೆ'ಗೆ ಶಿವಾಲಯ ನಿರ್ಮಾಣ]

ಕಂಗೊಳಿಸಿದ ವಧು ರಾಧಿಕಾ ಪಂಡಿತ್

ಕಂಗೊಳಿಸಿದ ವಧು ರಾಧಿಕಾ ಪಂಡಿತ್

ಗೋಲ್ಡನ್ ಹಾಗೂ ಕೆಂಪು ಬಣ್ಣ ಮಿಶ್ರಿತ ಸೀರೆಯನ್ನು ತೊಟ್ಟು ಮದುವೆ ಮಂಟಪಕ್ಕೆ ಬಂದರು ರಾಧಿಕಾ ಪಂಡಿತ್. [ಮೆಹಂದಿ ಸಮಾರಂಭದಲ್ಲಿ ಕುಣಿದು ಕುಪ್ಪಳಿಸಿದ ರಾಧಿಕಾ-ಯಶ್]

ರೇಶ್ಮೆ ಶಲ್ಯ, ಪೇಟ ತೊಟ್ಟಿದ್ದ ಯಶ್

ರೇಶ್ಮೆ ಶಲ್ಯ, ಪೇಟ ತೊಟ್ಟಿದ್ದ ಯಶ್

ಹಸಿರು, ಕ್ರೀಮ್ ಮತ್ತು ಗೋಲ್ಡನ್ ಬಣ್ಣ ಮಿಶ್ರಿತ ರೇಶ್ಮೆ ಶಲ್ಯ, ಪೇಟ ತೊಟ್ಟಿದ್ದರು ಯಶ್.

ಗೌರಿ ಪೂಜೆ ಸಲ್ಲಿಸಿದ ರಾಧಿಕಾ ಪಂಡಿತ್

ಗೌರಿ ಪೂಜೆ ಸಲ್ಲಿಸಿದ ರಾಧಿಕಾ ಪಂಡಿತ್

ಮದುವೆ ಮಂಟಪ ಏರುವ ಮುನ್ನ ಅಪ್ಪಟ ಕೊಂಕಣಿ ಸಂಪ್ರದಾಯದಲ್ಲಿ ವಧು ರಾಧಿಕಾ ಪಂಡಿತ್ ಗೌರಿ ಪೂಜೆ ಸಲ್ಲಿಸಿದರು.

ತಾಳಿ ಪೂಜೆ

ತಾಳಿ ಪೂಜೆ

ಗೌರಿ ಪೂಜೆ ಸಲ್ಲಿಸುವ ವೇಳೆ ತಾಳಿ ಪೂಜೆ ಕೂಡ ನಡೆಯಿತು.

ಅಪ್ಪ-ಅಮ್ಮನ ಜೊತೆ ರಾಧಿಕಾ ಪಂಡಿತ್

ಅಪ್ಪ-ಅಮ್ಮನ ಜೊತೆ ರಾಧಿಕಾ ಪಂಡಿತ್

ಮದುವೆ ಮಂಟಪಕ್ಕೆ ಹೋಗುವ ಮುನ್ನ ಅಪ್ಪ ಕೃಷ್ಣ ಪ್ರಸಾದ್ ಹಾಗೂ ಅಮ್ಮ ಮಂಗಳ ಪಂಡಿತ್ ಜೊತೆ ವಧು ರಾಧಿಕಾ ಪಂಡಿತ್ ಮಿರಿ ಮಿರಿ ಮಿಂಚಿದ್ದು ಹೀಗೆ....

ದೇವಸ್ಥಾನದ ಮದುವೆ ಮಂಟಪ

ದೇವಸ್ಥಾನದ ಮದುವೆ ಮಂಟಪ

ಪ್ರಕೃತಿ ಸಾಕ್ಷಿಯಾಗಿ, ಶಿವ-ಪಾರ್ವತಿ ಸಮ್ಮುಖದಲ್ಲಿ ಮದುವೆ ಆಗಬೇಕೆಂಬುದು ಯಶ್ ಹಾಗೂ ರಾಧಿಕಾ ಪಂಡಿತ್ ಆಸೆ ಆಗಿತ್ತು. ಅದರಂತೆ ರಾಧಿಕಾ ಪಂಡಿತ್ ಹಾಗೂ ಯಶ್ ವಿವಾಹಕ್ಕೋಸ್ಕರ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಐತಿಹಾಸಿಕ ಸೋಮನಾಥೇಶ್ವರ ದೇವಸ್ಥಾನದ ಸೆಟ್ ನಿರ್ಮಾಣವಾಗಿತ್ತು. ಒಂದು ಸಾವಿರಕ್ಕೂ ಹೆಚ್ಚು ತಾವರೆ ಹೂ, ಸೇವಂತಿ ಹೂ, ನಂದಿ ಬಟ್ಟಲು ಹೂ, ಮೈಸೂರು ಮಲ್ಲಿಗೆ ಹೂ, ಸುಗಂಧ ರಾಜ ಹೂಗಳಿಂದ ಮದುವೆ ಮಂಟಪ ಅಲಂಕಾರಗೊಂಡಿತ್ತು.

ಮಾಂಗಲ್ಯಧಾರಣೆ ಮಾಡಿದ ಯಶ್

ಮಾಂಗಲ್ಯಧಾರಣೆ ಮಾಡಿದ ಯಶ್

ಇಂದು ಮಧ್ಯಾಹ್ನ 11.30 ರಿಂದ 12.30 ರವರೆಗೆ ಇದ್ದ ಶುಭ ಅಭಿಜಿತ್ ಲಗ್ನದಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಹಸೆಮಣೆ ಏರಿದರು. 12.30ರ ಸುಮಾರಿಗೆ ರಾಧಿಕಾ ಪಂಡಿತ್ ರವರ ಕೊರಳಿಗೆ ಯಶ್ ಮಾಂಗಲ್ಯಧಾರಣೆ ಮಾಡಿದರು.

ನವ ಜೋಡಿಗೆ ರಾಘವೇಂದ್ರ ರಾಜ್ ಕುಮಾರ್ ಶುಭ ಹಾರೈಕೆ

ನವ ಜೋಡಿಗೆ ರಾಘವೇಂದ್ರ ರಾಜ್ ಕುಮಾರ್ ಶುಭ ಹಾರೈಕೆ

ನವ ಜೋಡಿ ಯಶ್-ರಾಧಿಕಾ ಪಂಡಿತ್ ಗೆ ರಾಘವೇಂದ್ರ ರಾಜ್ ಕುಮಾರ್ ದಂಪತಿ ಶುಭ ಹಾರೈಸಿದ್ದಾರೆ.

ಸತಿ-ಪತಿಗಳಾದ ಸ್ಟಾರ್ ನಟ-ನಟಿ

ಸತಿ-ಪತಿಗಳಾದ ಸ್ಟಾರ್ ನಟ-ನಟಿ

ಅದ್ಧೂರಿಯಾಗಿ, ಅಷ್ಟೇ ಶಾಸ್ತ್ರೋಕ್ತವಾಗಿ ರಾಧಿಕಾ ಪಂಡಿತ್-ಯಶ್ ಮದುವೆ ನಡೆಯಿತು. ಸ್ಯಾಂಡಲ್ ವುಡ್ ನ ರಾಜಾ ರಾಣಿ ಸತಿ-ಪತಿಗಳಾದರು. ನವ ಜೀವನಕ್ಕೆ ಕಾಲಿಟ್ಟಿರುವ ಯಶ್-ರಾಧಿಕಾ ಪಂಡಿತ್ ರವರಿಗೆ ನೀವೂ 'ಹ್ಯಾಪಿ ಮ್ಯಾರೀಡ್ ಲೈಫ್' ಅಂತ ವಿಶ್ ಮಾಡಿ...

More from Filmibeat

English summary
Kannada Actor Yash has tied knot with his long-time girl firend Kannada Actress Radhika Pandit today (December 9th) in Taj West End Hotel Bengaluru. Happy married life to the couple.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X