»   » ಡಬ್ಬಲ್ ಖುಷಿ: ಮಂಚು ಮನೋಜ್ ಮ್ಯಾರೇಜ್

ಡಬ್ಬಲ್ ಖುಷಿ: ಮಂಚು ಮನೋಜ್ ಮ್ಯಾರೇಜ್

By ಜೇಮ್ಸ್ ಮಾರ್ಟಿನ್

ತೆಲುಗಿನ ಖ್ಯಾತ ನಟ ಮೋಹನ್ ಬಾಬು ಅವರ ಪುತ್ರ ಮಂಚು ಮನೋಜ್ ಅವರು ತಮ್ಮ ಬಾಲ್ಯದ ಗೆಳತಿಯನ್ನು ಬುಧವಾರ ವರಿಸಿದ್ದಾರೆ.

ಅದ್ದೂರಿಯಾಗಿ ಸಾಂಪ್ರದಾಯಿಕ ವಿಧಿ ವಿಧಾನಗಳಂತೆ ಹೈದರಾಬಾದಿನಲ್ಲಿ ನಡೆದ ಈ ಮದುವೆ ಸಮಾರಂಭದಲ್ಲಿ ನೂತನ ದಂಪತಿ ಮನೋಜ್ ಹಾಗೂ ಪ್ರಣತಿ ರೆಡ್ಡಿ ಅವರನ್ನು ಆಶೀರ್ವದಿಸಲು ರಜನಿಕಾಂತ್, ಪವನ್ ಕಲ್ಯಾಣ್, ಮಹೇಶ್ ಬಾಬು ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಬಂದಿದ್ದರು.

ಮನೋಜ್ ಅವರು ತಮ್ಮ 31ನೇ ಹುಟ್ಟುಹಬ್ಬದ ಸಂಭ್ರಮದ ಜೊತೆಗೆ ಗೆಳತಿಯ ಜೊತೆಗೆ ಹೊಸ ಜೀವನ ಆರಂಭಿಸಿದ್ದು ಡಬ್ಬಲ್ ಖುಷಿ ತಂದಿದೆ.

ಕನ್ನಡ, ತಮಿಳು ಹಾಗೂ ತೆಲುಗು ಚಿತ್ರರಂಗದ ಖ್ಯಾತ ನಟ-ನಟಿಯರು ದಂಪತಿಗೆ ಶುಭ ಕೋರಿದರು. ತೆಲಂಗಾಣ ಸಿಎಂ ಕೆಸಿ ಚಂದ್ರಶೇಖರರಾವ್, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ವೈಎಸ್ಸಾರ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ, ಕರ್ನಾಟಕದ ಗೃಹ ಸಚಿವ ಕೆಜೆ ಜಾರ್ಜ್ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಕೂಡಾ ಆಗಮಿಸಿದ್ದರು.

 

ಮೋಹನ್ ಬಾಬು ಅವರ ಆಪ್ತ ಗೆಳಯರಾದ ಅಂಬರೀಷ್, ರಜನಿಕಾಂತ್ ಮಂಚು ಫ್ಯಾಮಿಲಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಮದುವೆಯ ಕೆಲ ಚಿತ್ರಗಳು ನಿಮಗಾಗಿ ಇಲ್ಲಿದೆ.

ಪ್ರಣತಿ ರೆಡ್ಡಿ ಅವರನ್ನು ವರಿಸಿ ಮನೋಜ್

ಪ್ರಣತಿ ರೆಡ್ಡಿ ಅವರನ್ನು ವರಿಸಿ ಮನೋಜ್

ತೆಲುಗಿನ ಖ್ಯಾತ ನಟ ಮೋಹನ್ ಬಾಬು ಅವರ ಪುತ್ರ ಮಂಚು ಮನೋಜ್ ಅವರು ತಮ್ಮ ಗೆಳತಿ ಪ್ರಣತಿ ರೆಡ್ಡಿ ಅವರನ್ನು ಬುಧವಾರ ವರಿಸಿದ್ದಾರೆ.

ಮನೋಜ್ ಕಸಿನ್ ರಿಂದ ವಸ್ತ್ರ ವಿನ್ಯಾಸ

ಮನೋಜ್ ಕಸಿನ್ ರಿಂದ ವಸ್ತ್ರ ವಿನ್ಯಾಸ

ಕಾಂಚೀವರಂ ಸೀರೆಯಲ್ಲಿ ಕಂಗೊಳಿಸುತ್ತಿದ್ದ ಪ್ರಣತಿ ರೆಡ್ಡಿ ಹಾಗೂ ಮನೋಜ್ ಅವರ ವಸ್ತ್ರ ವಿನ್ಯಾಸದ ಜವಾಬ್ದಾರಿಯನ್ನು ವಿನ್ಸೆರಾ ಮಂಚು ಅವರು ವಹಿಸಿಕೊಂಡಿದ್ದರು

ತೆಲುಗು ಸಂಪ್ರದಾಯದಂತೆ ವಿವಾಹ

ತೆಲುಗು ಸಂಪ್ರದಾಯದಂತೆ ವಿವಾಹ

ಮೋಹನ್ ಬಾಬು ಅವರ ಪುತ್ರ ಮನೋಜ್ ಪ್ರೇಮ ವಿವಾಹ ಅದ್ದೂರಿಯಾಗಿ ತೆಲುಗು ಸಂಪ್ರದಾಯದಂತೆ ನಡೆಯಿತು.

ಸುಮಲತಾ ಅಂಬರೀಷ್ ಸಂತಸ
 

ಸುಮಲತಾ ಅಂಬರೀಷ್ ಸಂತಸ

ಮೋಹನ್ ಬಾಬು ಹಾಗೂ ಅಂಬರೀಷ್ ಫ್ಯಾಮಿಲಿ ಫ್ರೆಂಡ್. ಸುಮಲತಾ ಕೂಡಾ ತೆಲುಗು ಚಿತ್ರರಂಗಕ್ಕೆ ತೀರಾ ಹಳಬರು.

ನಿರ್ಮಾಪಕರ ಜೊತೆ ಕುಳಿತ ರಜನಿ

ನಿರ್ಮಾಪಕರ ಜೊತೆ ಕುಳಿತ ರಜನಿ

ವಧುವರರನ್ನು ಆಶೀರ್ವದಿಸಿ ನಿರ್ಮಾಪಕರ ಜೊತೆ ಕುಳಿತ ಸೂಪರ್ ಸ್ಟಾರ್ ರಜನಿಕಾಂತ್.

ನೂತನ ದಂಪತಿ ಫುಲ್ ಮಿಂಚಿಂಗ್

ನೂತನ ದಂಪತಿ ಫುಲ್ ಮಿಂಚಿಂಗ್

ವಧುವಿನ ಹಣೆಗೆ ಕುಂಕುಮ ಇಡುತ್ತಿರುವ ಮನೋಜ್.. ಕನ್ನಡದ ಗೋವಿಂದಾಯ ನಮಃ ಚಿತ್ರದ ರಿಮೇಕ್ ಪೊಟುಗಾಡು ಚಿತ್ರದಲ್ಲಿ ಮನೋಜ್ ನಟಿಸಿ ಯಶಸ್ವಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದು ಬ್ರಹ್ಮ ಹಾಕಿದ ಗಂಟು

ಇದು ಬ್ರಹ್ಮ ಹಾಕಿದ ಗಂಟು

ಇದು ಬ್ರಹ್ಮ ಹಾಕಿದ ಗಂಟು.. ಎಂದೆಂದೂ ಬಿಡಿಸಲಾರದ ನಂಟು, ಜೀರಿಗೆ ಬೆಲ್ಲ ಹಾಕುವುದು, ಲಾಜಾ ಹೋಮ ಹೀಗೆ ಎಲ್ಲಾ ಸಾಂಪ್ರದಾಯಿಕ ವಿಧಾನಗಳಲ್ಲೂ ಮನೋಜ್ ಪ್ರಣತಿ ಖುಷಿಯಿಂದ ಭಾಗವಹಿಸಿದ್ದರು.

ಮಹೇಶ್ ಬಾಬು ದಂಪತಿ

ಮಹೇಶ್ ಬಾಬು ದಂಪತಿ

ಪತ್ನಿ ನಮ್ರತಾ ಶಿರೋಢ್ಕರ್ ಜೊತೆಗೆ ಆಗಮಿಸಿದ್ದ ಮಹೇಶ್ ಬಾಬು ಅವರು ವಧುವರರಿಗೆ ಶುಭ ಕೋರಿದರು.

ತಮಿಳು ಸೂಪರ್ ಸ್ಟಾರ್ ಸೂರ್ಯ

ತಮಿಳು ಸೂಪರ್ ಸ್ಟಾರ್ ಸೂರ್ಯ

ತಮಿಳು ಸೂಪರ್ ಸ್ಟಾರ್ ಸೂರ್ಯ ಅವರು ದಂಪತಿ ಜೊತೆ ಫೋಟೋ

ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು

ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು

ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಮನೋಜ್-ಪ್ರಣತಿಗೆ ಶುಭ ಹಾರೈಸಿದರು.

ವೈಎಸ್ಸಾರ್ ಜಗನ್ ರೆಡ್ಡಿಗೆ ಭರ್ಜರಿ ಸ್ವಾಗತ

ವೈಎಸ್ಸಾರ್ ಜಗನ್ ರೆಡ್ಡಿಗೆ ಭರ್ಜರಿ ಸ್ವಾಗತ

ವೈಎಸ್ಸಾರ್ ಜಗನ್ ರೆಡ್ಡಿಗೆ ಭರ್ಜರಿ ಸ್ವಾಗತ ಸಿಕ್ಕಿದ್ದು ವಿಶೇಷವಾಗಿತ್ತು. ಜಗನ್ ಕಾಲಿಗೆ ಬಿದ್ದು ದಂಪತಿ ಆಶೀರ್ವಾದ ಪಡೆದುಕೊಂಡರು

ತೆಲಂಗಾಣ ಸಿಎಂ ಕೆಸಿಆರ್

ತೆಲಂಗಾಣ ಸಿಎಂ ಕೆಸಿಆರ್

ತೆಲಂಗಾಣ ಸಿಎಂ ಕೆಸಿಆರ್ ಅವರು ಮೋಹನ್ ಬಾಬು ಅವರ ಜೊತೆ ಫೋಟೋ

ನಟಿ ಜಯಸುಧಾ

ನಟಿ ಜಯಸುಧಾ

ಕನ್ನಡದಲ್ಲೂ ಕೆಲ ಚಿತ್ರಗಳಲ್ಲಿ ನಟಿಸಿರುವ ತೆಲುಗಿನ ಹಿರಿಯ ನಟಿ ಜಯಸುಧಾ ಅವರು ದಂಪತಿಗಳನ್ನು ಆಶೀರ್ವದಿಸಿದರು.

ಹಾಸ್ಯ ನಟ ಆಲಿ

ಹಾಸ್ಯ ನಟ ಆಲಿ

ಹಾಸ್ಯ ನಟ ಆಲಿ ಅವರು ಮನೋಜ್-ಪ್ರಣತಿಗೆ ಶುಭ ಹಾರೈಸಿದರು.

ಪವನ್ ಕಲ್ಯಾಣ್ ಲುಕ್ ನೋಡಿ

ಪವನ್ ಕಲ್ಯಾಣ್ ಲುಕ್ ನೋಡಿ

ಮೋಹನ್ ಬಾಬು ಫ್ಯಾಮಿಲಿ ಜೋತೆ ಪವನ್ ಕಲ್ಯಾಣ್ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಹೀಗೆ

ಬಾಹುಬಲಿ ಪ್ರಭಾಸ್ ಆಗಮನ

ಬಾಹುಬಲಿ ಪ್ರಭಾಸ್ ಆಗಮನ

'ಬಾಹುಬಲಿ' ಚಿತ್ರದ ನಾಯಕ 'ರೆಬೆಲ್' ಪ್ರಭಾಸ್ ಅವರು ಮಂಚು ಮನೋಜ್ ಜೊತೆ

ಮೋಹನ್ ಬಾಬು ಜೊತೆ ಪ್ರಭಾಸ್

ಮೋಹನ್ ಬಾಬು ಜೊತೆ ಪ್ರಭಾಸ್

ಮೋಹನ್ ಬಾಬು ಜೊತೆ ಪ್ರಭಾಸ್ ಸಂತದ ಕ್ಷಣಗಳು... ಮಂಚು ಮನೋಜ್, ಮಂಚು ವಿಷ್ಣು, ಮಂಚು ಲಕ್ಷ್ಮಿ ಮೂವರು ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಚಿತ್ರರಂಗದ ಅನೇಕ ಗಣ್ಯರು ಹಾಗೂ ಮೋಹನ್ ಬಾಬು ಹಳೆ ಗೆಳಯ ಗೆಳತಿಯರು ಮದುವೆಗೆ ಆಗಮಿಸಿ ಸಂಭ್ರಮಿಸಿದರು.

ಬಾಲಕೃಷ್ಣ ಜೊತೆ ನೂತನ ದಂಪತಿ

ಬಾಲಕೃಷ್ಣ ಜೊತೆ ನೂತನ ದಂಪತಿ

ಎನ್ಟಿಆರ್ ಕುಟುಂಬದ ವತಿಯಿಂದ ಬಾಲಕೃಷ್ಣ ಅವರು ಆಗಮಿಸಿ ಮನೋಜ್-ಪ್ರಣತಿಗೆ ಶುಭ ಹಾರೈಸಿದರು.

English summary
Manchu Manoj and Pranathi Reddy entered the wedlock in an auspicious muhurtam in a grand wedding ceremony at Hyderabad. They were basking in the glow of successful love-relationship-marriage
Please Wait while comments are loading...

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more