ಹೊಸ ವರ್ಷಕ್ಕೆ ಶುಭ ಕೋರಿದ ಸುದೀಪ್, ಪುನೀತ್, ಗಣೇಶ್; ಯಾರ್ಯಾರ ವಿಶ್ ಹೇಗಿದೆ?
2021 ಹೊಸ ವರ್ಷ ಪ್ರಾರಂಭವಾಗಿದೆ. ಹೊಸ ಭರವಸೆ, ಹೊಸ ಹೊಸ ಕನಸುಗಳೊಂದಿಗೆ ಹೊಸ ವರ್ಷವನ್ನು ಇಡೀ ವಿಶ್ವ ಸ್ವಾಗತಿದೆ. ಮನುಕುಲಕ್ಕೆ ದೊಡ್ಡ ಪಾಠ ಹೇಳಿಕೊಟ್ಟ 2020ಗೆ ಧನ್ಯವಾದ ಹೇಳಿ, ಮತ್ತೆ ಅಂತ ವರ್ಷ ಮರುಕಳುಹಿಸದಿರಲಿ ಎಂದು ಪ್ರಾರ್ಥಿಸುತ್ತಾ ಎಲ್ಲರೂ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ.
ಇಂದು ಎಲ್ಲೆಲ್ಲೂ ಹೊಸ ವರ್ಷದ ಶುಭಾಶಯಗಳೇ ಹರಿದಾಡುತ್ತಿದೆ. ಎಲ್ಲರೂ ಹೊಸ ವರ್ಷಕ್ಕೆ ಶುಭಾಶಯಗಳನ್ನು ತಿಳಿಸುತ್ತಾ ಆನಂದಿಸುತ್ತಿದ್ದಾರೆ. ಸ್ಯಾಂಡಲ್ ವುಡ್ ನಟರು ಸಹ ಅಭಿಮಾನಿಗಳಿಗೆ ಹೊಸ ವರ್ಷಕ್ಕೆ ಪ್ರೀತಿಯ ಶುಭಾಶಯಕೋರುತ್ತಿದ್ದಾರೆ. ದರ್ಶನ್, ಸುದೀಪ್, ಪುನೀತ್, ಗಣೇಶ್, ರಕ್ಷಿತ್ ಶೆಟ್ಟಿ ಸೇರಿದಂತೆ ಎಲ್ಲರೂ ಹೊಸ ವರ್ಷಕ್ಕೆ ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡುತ್ತಿದ್ದಾರೆ. ಯಾರ್ಯಾರ ವಿಶ್ ಹೇಗಿದೆ ಎನ್ನುವುದು ಇಲ್ಲಿದೆ ನೋಡಿ...

ಹಾಡಿನ ಮೂಲಕ ವಿಶ್ ಮಾಡಿದ ಪುನೀತ್
'ಈ ನೆಲ.. ಈ ಜನ. ನಿರ್ಮಲ...ರಕ್ಷಣೆಯ ಹೊಣೆ ನಮ್ಮದು.. ನದಿಗಳು ನಮಗೇ ಜೀವ ಜಲ..' ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಹಾಡನ್ನು ಹಾಡಿ ಶೇರ್ ಮಾಡುವ ಮೂಲಕ ಅದ್ಭುತವಾದ ಸಂದೇಶದೊಂದಿಗೆ ಪುನೀತ್ ರಾಜ್ ಕುಮಾರ್ ವಿಭಿನ್ನವಾಗಿ ವಿಶ್ ಮಾಡಿದ್ದಾರೆ. '2020 ನಮ್ಮೆಲರ ಸುತ್ತಮುತ್ತ ನಡೆದ ಘಟನೆ. ಹಾಗೂ ನಾವೆಲ್ಲರು ಅನುಭವಿಸಿದ ತೊಂದರೆಯನ್ನು ಬದಿಗಿಟ್ಟು, ನೆಗೆಟಿವಿಟಿಯನ್ನೆಲ್ಲಾ ಪಕ್ಕಕ್ಕೆ ಇಟ್ಟು, ಈ ವರ್ಷ 2021 ನಾವು ನಮ್ಮ ಕುಟುಂಬದ ಮೇಲೆ, ನಮ್ಮಗಳ ಮೇಲೆ ಹಾಗೂ ಪ್ರಕೃತಿ ಮೇಲೆ ಗಮನವಿಟ್ಟುಕೊಂಡು ನಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡೋಣ. ಈ ವರ್ಷ ನಿಮಗೆ ನಮಗೆ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಭಗವಂತನಲ್ಲಿ ಕೇಳಿಕೊಳ್ಳುತ್ತೇನೆ' ಎಂದು ಹೇಳಿದ್ದಾರೆ.

2020 ದೊಡ್ಡ ಪಾಠ ಕಲಿಸಿದ ವರ್ಷ- ಸುದೀಪ್
'2020 ನಾವು ಬದುಕುಳಿದ ವರ್ಷ. ಮತ್ತು ನಮಗೆ ದೊಡ್ಡ ಪಾಠ ಕಲಿಸಿದ ವರ್ಷ. ಕಾಲ ನಮಗೆ ಏನು ಕೊಟ್ಟಿದೆಯೋ ಅದರ ಬೆಲೆಯನ್ನು ನಮಗೆ ತಿಳಿಸಿಕೊಟ್ಟ ವರ್ಷ. ಈ ಎಲ್ಲಾ ಪಾಠಗಳು 2021ಅನ್ನು ಉತ್ತಮ ವರ್ಷವನ್ನಾಗಿ ಮಾಡಲಿದೆ. ಕಷ್ಟಕಾಲವನ್ನು ಒಪ್ಪಿಕೊಂಡು ಉತ್ತಮ ಕೆಲಸಗಳನ್ನು ಮಾಡಿ. 2021 ಹೊಸ ವರ್ಷಕ್ಕೆ ಶುಭಾಶಯಗಳು'

'ಹೊಸ' ಪದದಲ್ಲೇ ಹೊಸತೊಂದು ಆರಂಭವಿದೆ- ಗಣೇಶ್
"ಹೊಸ" ಎನ್ನುವ ಪದದಲ್ಲೇ ಹೊಸತೊಂದು ಆರಂಭವಿದೆ, ಹೊಸತೊಂದು ಕಲ್ಪನೆಯಿದೆ, ಹೊಸತೊಂದು ಉತ್ಸಾಹವಿದೆ, ಹೊಸತೊಂದು ಭರವಸೆಯಿದೆ. ಹಾಗಾಗಿ ಈ ಹೊಸ ವರ್ಷ ನಿಮಗೆಲ್ಲಾ ಹೊಸ ಬದುಕೊಂದನ್ನು ಹೊತ್ತು ತರಲಿ ಎಂದು ಆಶಿಸುತ್ತಾ, ನಾಡಿನ ಸಮಸ್ತ ಜನತೆಗೆ ಹಾಗೂ ನನ್ನ ಪ್ರೀತಿಯ ಅಭಿಮಾನಿ ಬಳಗಕ್ಕೆ ಹೊಸ ವರ್ಷದ ವಿಶೇಷ ಶುಭಾಶಯಗಳು ಎಂದು ಗೋಲ್ಡನ್ ಸ್ಟಾರ್ ಗಣೇಶ್ ಶುಭಕೋರಿದ್ದಾರೆ.
Recommended Video

ರಕ್ಷಿತ್ ಶೆಟ್ಟಿ ಮತ್ತು ಧನಂಜಯ್
ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಹ ಅಭಿಮಾನಿಗಳಿಗೆ ಸಿಂಪಲ್ ಆಗಿ ಹೊಸ ವರ್ಷಕ್ಕೆ ವಿಶ್ ಮಾಡುತ್ತಿದ್ದಾರೆ. ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಶೀತಲ್ ಜೊತೆ ಹೊಸ ವರ್ಷ ಆಚರಣೆ ಮಾಡಿರುವ ರಕ್ಷಿತ್, ಫೋಟೋ ಶೇರ್ ಮಾಡುವ ಮೂಲಕ ವಿಶ್ ಮಾಡಿದ್ದಾರೆ. ಇನ್ನು ನಟ ಧನಂಜಯ್ ವಿಶ್ ಮಾಡಿ, ತೊಲಗಲಿ ದುಃಖ, ತೊಲಗಲಿ ಮತ್ಸರ, ಪ್ರೇಮಕ್ಕೆ ಮೀಸಲು ನವ ಸಂವತ್ಸರ' ಎಂದು ಹೇಳಿದ್ದಾರೆ.


Click it and Unblock the Notifications











