ಮೇ 5 ಕ್ಕೆ ಸ್ಯಾಂಡಲ್ ವುಡ್ ನಲ್ಲಿ 'ಹ್ಯಾಪಿ ನ್ಯೂ ಇಯರ್'
ಹೆಸರಾಂತ ನಿರ್ದೇಶಕ ಟಿ.ಎಸ್.ನಾಗಾಭರಣ ಪುತ್ರ ಪನ್ನಗಾಭರಣ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ 'ಹ್ಯಾಪಿ ನ್ಯೂ ಇಯರ್' ಮೇ 5 ಕ್ಕೆ ತೆರೆಗೆ ಬರುತ್ತಿದೆ.
ಸೌಮ್ಯ ಫಿಲ್ಮ್ಸ್ ಲಾಂಛನದಲ್ಲಿ ಮೂಡಿ ಬಂದಿರುವ 'ಹ್ಯಾಪಿ ನ್ಯೂ ಇಯರ್' ಚಿತ್ರಕ್ಕೆ ವನಜ ಪಾಟೀಲ್ ಬಂಡವಾಳ ಹೂಡಿದ್ದಾರೆ. ಈಗಾಗಲೇ ಪಾರ್ಟಿ ಆಂಥೆಂ, ಸಿನಿಮಾದ ಮೇಕಿಂಗ್ ವಿಡಿಯೋಗಳನ್ನು ಬಿಡುಗಡೆ ಮಾಡಿರುವ ಚಿತ್ರತಂಡ 'ಹ್ಯಾಪಿ ನ್ಯೂ ಇಯರ್' ಬಗ್ಗೆ ಹಲವು ಕುತೂಹಲಗಳನ್ನು ಹುಟ್ಟಿಸಿದೆ.

ಹಲವು ವರ್ಷಗಳ ನಂತರ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಆಗಿರುವ ಬಿ.ಸಿ.ಪಾಟೀಲ್ 'ಹ್ಯಾಪಿ ನ್ಯೂ ಇಯರ್'ನಲ್ಲಿ ರೌಡಿ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಡೈಲಾಂಗ್ ಕಿಂಗ್ ಸಾಯಿಕುಮಾರ್ ಸಹ ಬಣ್ಣ ಹಚ್ಚಿದ್ದಾರೆ. ಚಿತ್ರದ ಬಹುದೊಡ್ಡ ವಿಶೇಷ ಅಂದ್ರೆ ಬಹುದೊಡ್ಡ ತಾರಾಬಳಗವೇ ಇದ್ದು ವಿಜಯ ರಾಘವೇಂದ್ರ, ದೂದ್ ಪೇಡಾ ದಿಗಂತ್, ಧನಂಜಯ್, ಸುಧಾರಾಣಿ, ಶ್ರುತಿ ಹರಿಹರನ್, ಸೋನುಗೌಡ, ಸೃಷ್ಟಿ ಪಾಟೀಲ್, ಮಾಳವಿಕಾ ಅವಿನಾಶ್, ಕಡ್ಡಿ ಪುಡಿ ಚಂದ್ರು, ತಬಲಾ ನಾಣಿ, ರಾಜು ತಾಳಿಕೋಟೆ, ರಾಜಶ್ರೀ ಪೊನ್ನಪ್ಪ, ಮಾರ್ಗರೀಟ ಮುಂತಾದವರು ಅಭಿನಯಿಸಿದ್ದಾರೆ.
ಐವರು ವಿಭಿನ್ನ ವ್ಯಕ್ತಿಗಳ ಕಥಾ ಸಂಗಮ ಹೊಂದಿರುವ ಈ ಚಿತ್ರಕ್ಕೆ ರಘು ದೀಕ್ಷಿತ್ ಸಂಗೀತ ಸಂಯೋಜನೆ, ಶ್ರೀಶ ಕೂದುವಳ್ಳಿ ಛಾಯಾಗ್ರಹಣ ನಿರ್ವಹಣೆ ಮಾಡಿದ್ದಾರೆ. ಚಿತ್ರಕ್ಕೆ ಸಿಂಪಲ್ ಸುನಿ, ಪ್ರತಿಭಾ ನಂದಕುಮಾರ್, ಸತ್ಯ ಪ್ರಕಾಶ್, ಆದಿ ಶಂಕರ್ ಹಾಗೂ ಅವಿನಾಶ್ ಬಲೆಕ್ಕಳ ಸಂಭಾಷಣೆ ಬರೆದಿದ್ದಾರೆ.


Click it and Unblock the Notifications











