ನಟ ಬಿ.ಸಿ ಪಾಟೀಲ್ ಅರೆಸ್ಟ್: ಒಂದೇ ದಿನದಲ್ಲಿ ರಿಲೀಸ್
ಕನ್ನಡ ಚಿತ್ರರಂಗದ ಹಿರಿಯ ನಟ ಕಮ್ ನಿರ್ಮಾಪಕ ಬಿ.ಸಿ ಪಾಟೀಲ್ ಅವರು ಇತ್ತೀಚಿಗೆ ಪೊಲೀಸರಿಂದ ಅರೆಸ್ಟ್ ಆಗಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಬಂದಿದ್ದಾರೆ. ಇದಕ್ಕೆ ಕಾರಣ 'ಹ್ಯಾಪಿ ನ್ಯೂ ಇಯರ್' ಚಿತ್ರ.
ಕನ್ನಡ ಚಿತ್ರರಂಗದ ಹಿರಿಯ ನಟ ಕಮ್ ನಿರ್ಮಾಪಕ ಬಿ.ಸಿ ಪಾಟೀಲ್ ಅವರು ಇತ್ತೀಚಿಗೆ ಪೊಲೀಸರಿಂದ ಅರೆಸ್ಟ್ ಆಗಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಬಂದಿದ್ದಾರೆ.
ಎಲ್ಲರಿಗೂ ಗೊತ್ತಿರುವ ಹಾಗೇ, ಬಿ.ಸಿ ಪಾಟೀಲ್ ಅವರು ಚಿತ್ರರಂಗಕ್ಕೆ ಬರುವ ಮೊದಲು ವೃತ್ತಿಯಲ್ಲಿ ಪೊಲೀಸ್ ಅಧಿಕಾರಿಯಾಗಿದ್ದರು. ಆಗ ಖಾಕಿ ತೊಟ್ಟು ಪರಪ್ಪನ ಅಗ್ರಹಾರಕ್ಕೆ ಕಾರ್ಯ ನಿಮಿತ್ತವಾಗಿ ಹೋಗಿದ್ದು ಉಂಟು. ಆದ್ರೆ, ಈಗ ಖೈದಿಯಾಗಿ ಜೈಲಿಗೆ ಹೋಗಿ ಬಂದಿದ್ದಾರೆ.[ಸ್ಯಾಂಡಲ್ ವುಡ್ ನಲ್ಲಿ ಮತ್ತೆ 'ಕೌರವ'ನ ಆರ್ಭಟ ಶುರು]
ಅಂದ್ಹಾಗೆ, ಈ ಸುದ್ದಿ ಕೇಳಿ ಶಾಕ್ ಆಗ್ಬೇಡಿ. ಬಿ.ಸಿ ಪಾಟೀಲ್ ಅವರು ಜೈಲಿಗೆ ಹೋಗಿದ್ದು ನಿಜ. ಆದ್ರೆ, ಅದು ನಿಜ ಜೀವನದಲ್ಲಿ ಅಲ್ಲ. ತಮ್ಮ ಮಗಳು ಸೃಷ್ಠಿ ಪಾಟೀಲ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ 'ಹ್ಯಾಪಿ ನ್ಯೂ ಇಯರ್' ಚಿತ್ರದ ಶೂಟಿಂಗ್ ನಲ್ಲಿ ಹೋಗಿದ್ದರು ಎಂಬುದು ಈ ಸುದ್ದಿಯ ವಿಶೇಷ. ಮುಂದೆ ಓದಿ.....

ಪರಪ್ಪನ ಅಗ್ರಹಾರದಲ್ಲಿ ಬಿ.ಸಿ ಪಾಟೀಲ್
ಬಿ.ಸಿ ಪಾಟೀಲ್ ಅವರ ಮಗಳು ಸೃಷ್ಠಿ ಪಾಟೀಲ್ ಅಭಿನಯಿಸುತ್ತಿರುವ 'ಹ್ಯಾಪಿ ನ್ಯೂ ಇಯರ್' ಚಿತ್ರದಲ್ಲಿ ಬಿ.ಸಿ ಪಾಟೀಲ್ ಕೂಡ ಪ್ರಮುಖ ಪಾತ್ರವನ್ನ ನಿರ್ವಹಿಸುತ್ತಿದ್ದು, ಶೂಟಿಂಗ್ ನಲ್ಲಿ ಜೈಲಿಗೆ ಹೋಗುವ ಸನ್ನಿವೇಶವನ್ನ ಇತ್ತೀಚಿಗೆ ಚಿತ್ರೀಕರಿಸಲಾಗಿದೆ.['ಈ' ಚೆಲುವೆ ಯಾರೂಂತ ನೀವು ಗುರುತಿಸಿ ಹೇಳಬಲ್ಲಿರಾ?]

ಅರೆಸ್ಟ್ ಆದ ಬಿ.ಸಿ ಪಾಟೀಲ್
ಚಿತ್ರದ ಒಂದು ಅನಿರೀಕ್ಷೀತ ತಿರುವಿನಲ್ಲಿ ಬಿ.ಸಿ ಪಾಟೀಲ್ ರನ್ನ ಅರೆಸ್ಟ್ ಮಾಡಲಾಗುವುದು. ಆಗ ಅವರನ್ನ ಪರಪ್ಪನ ಅಗ್ರಹಾರದ ಜೈಲಿಗೆ ಕರೆತರಲಾಗುತ್ತೆ. ತದ ನಂತರ ಅವರನ್ನ ಜೈಲಿನಿಂದ ಬಿಡುಗಡೆ ಮಾಡಲಾಗುವುದು. ಈ ದೃಶ್ಯಗಳನ್ನ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಚಿತ್ರೀಕರಣ ಮಾಡಲಾಗಿದೆ.

ಸೆಕೆಂಡ್ ಹಾಫ್ ಕಂಪ್ಲೀಟ್
ಟಿ.ಎಸ್ ನಾಗಭರಣ ಅವರ ಮಗ ಪನ್ನಗಾಭರಣ 'ಹ್ಯಾಪಿ ನ್ಯೂ ಇಯರ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಸೌಮ್ಯ ಫಿಲ್ಮ್ಸ್ ಲಾಂಛನ'ದಲ್ಲಿ ಮೂಡಿ ಬರುತ್ತಿರುವ ಈ ಚಿತ್ರವನ್ನ ವನಜ ಪಾಟೀಲ್ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ, ಭರದಿಂದ ಶೂಟಿಂಗ್ ಮಾಡುತ್ತಿರುವ 'ಹ್ಯಾಪಿ ನ್ಯೂ ಇಯರ್' ಬೆಂಗಳೂರಿನಲ್ಲಿ ಎರಡನೇ ಹಂತದ ಚಿತ್ರೀಕರಣವನ್ನು ಸಂಪೂರ್ಣಗೊಳಿಸಿದೆ.[ಪನ್ನಗಾಭರಣರ 'ಹ್ಯಾಪಿ ನ್ಯೂ ಇಯರ್' ಸೆಕೆಂಡ್ ಹಾಫ್ ಕಂಪ್ಲೀಟ್]

ಕಥಾಹಂದರ
ನಿರ್ದೇಶಕ ಪನ್ನಗಾಭರಣರ ಪ್ರಕಾರ ಜೀವನ ಎಂಬುದು ಒಂದು ನಿರಂತರ ಪಯಣ. ಬದುಕಿನ ಪ್ರತಿ ಕ್ಷಣವೂ ನಮ್ಮ ಜೀವನದ ಗತಿಯನ್ನು ನಿರ್ಧರಿಸುತ್ತದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಮುಖವಾಡ ಧರಿಸಿ ಬದುಕುವುದೇ ಹೆಚ್ಚು. ಈ ಚಿತ್ರ ಕೂಡ ಇದೇ ಕಥಾಹಂದರವನ್ನು ಹೊಂದಿದ್ದು, ಅಂತಹ ಐದು ವ್ಯಕ್ತಿಗಳ ಚಿತ್ರಣವನ್ನು ಇಲ್ಲಿ ತೋರಿಸಲಾಗುತ್ತಿದೆಯಂತೆ.

ದಿಗಂತ್ ಗೆ ಜೋಡಿಯಾದ ಸೃಷ್ಟಿ
'ಹ್ಯಾಪಿ ನ್ಯೂ ಇಯರ್' ಚಿತ್ರದಲ್ಲಿ ನಟ ದೂದ್ ಪೇಡಾ ದಿಗಂತ್ ಅವರ ಜೊತೆ ಸೃಷ್ಟಿ ಪಾಟೀಲ್ ಅವರು ಡ್ಯುಯೆಟ್ ಹಾಡಲಿದ್ದಾರೆ. ಮೊದಲ ಚಿತ್ರದಲ್ಲಿಯೇ ಸ್ಟಾರ್ ನಟನ ಜೊತೆ ನಟಿಸುವ ಅವಕಾಶ ಸಿಕ್ಕಿದ್ದಕ್ಕೆ ಸೃಷ್ಟಿ ಫುಲ್ ಖುಷ್ ಆಗಿದ್ದಾರೆ.

ದೊಡ್ಡ ತಾರಬಳಗ
'ಹ್ಯಾಪಿ ನ್ಯೂ ಇಯರ್' ಚಿತ್ರದಲ್ಲಿ ಸ್ಯಾಂಡಲ್ ವುಡ್ ನ ಸ್ಟಾರ್ ನಟರೆಲ್ಲ ಅಭಿನಯಿಸುತ್ತಿದ್ದು, ನಟ ವಿಜಯ ರಾಘವೇಂದ್ರ, ಧನಂಜಯ್, ಸಾಯಿಕುಮಾರ್, ಶ್ರುತಿ ಹರಿಹರನ್, ಸೋನು ಗೌಡ, ಸುಧಾರಾಣಿ, ಮಾಳವಿಕಾ ಅವಿನಾಶ್, ರಾಕ್ ಲೈನ್ ವೆಂಕಟೇಶ್, ಕಡ್ಡಿಪುಡಿ ಚಂದ್ರು, ತಬಲಾ ನಾಣಿ, ರಾಜು ತಾಳಿಕೋಟೆ, ಸೇರಿದಂತೆ ಹಲವು ಕಲಾವಿದರು ಬಿ.ಸಿ ಪಾಟೀಲ್ ಅವರ ಮಗಳ ಚಿತ್ರಕ್ಕೆ ಸಾಥ್ ಕೊಡುತ್ತಿದ್ದಾರೆ.


Click it and Unblock the Notifications











