For Quick Alerts
  ALLOW NOTIFICATIONS  
  For Daily Alerts

  ದುಬೈನಿಂದ ಬರ್ತಾ ಇದ್ದಂತೆ ಕಾಂತಾರಗೆ ಜನ ನುಗ್ತಿರೋದು ನೋಡಿ ಮನವಿ ಇಟ್ಟ ಡಾಲಿ ಧನಂಜಯ

  |

  ಈ ವರ್ಷ ಅತಿ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಕನ್ನಡದ ನಾಯಕ ನಟ ಎಂದರೆ ಅದು ಡಾಲಿ ಧನಂಜಯ್ ಎಂದರೆ ತಪ್ಪಾಗಲಾರದು. ಧನಂಜಯ್ ಅಭಿನಯದ 21 ಅವರ್ಸ್, ಬೈರಾಗಿ, ಮಾನ್ಸೂನ್ ರಾಗ ಹಾಗೂ ತೋತಾಪುರಿ ಚಿತ್ರಗಳು ಈಗಾಗಲೇ ಬಿಡುಗಡೆಗೊಂಡಿದ್ದು, ಹೆಡ್ ಬುಷ್ ಹಾಗೂ 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ' ಮತ್ತು ತಮಿಳಿನ ಚಿತ್ರವೊಂದು ಈ ವರ್ಷ ಬಿಡುಗಡೆಗೆ ರೆಡಿ ಇವೆ.

  ಕಾಂತಾರ ಅಬ್ಬರ: ಎರಡನೇ ಶನಿವಾರದ ಮುಂಬೈ ಬುಕ್ಕಿಂಗ್ಸ್ ಅಸಾಮಾನ್ಯ, ಹಿಂದೆಂದೂ ಕಂಡಿಲ್ಲ!ಕಾಂತಾರ ಅಬ್ಬರ: ಎರಡನೇ ಶನಿವಾರದ ಮುಂಬೈ ಬುಕ್ಕಿಂಗ್ಸ್ ಅಸಾಮಾನ್ಯ, ಹಿಂದೆಂದೂ ಕಂಡಿಲ್ಲ!

  ಈ ಪೈಕಿ ಸದ್ಯ ಹೆಡ್ ಬುಶ್ ಚಿತ್ರ ಬಿಡುಗಡೆಯ ಸನಿಹಕ್ಕೆ ತಲುಪಿದ್ದು, ಇದೇ ತಿಂಗಳ 21ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಹೆಡ್ ಬುಶ್ ಚಿತ್ರದಲ್ಲಿ ಡಾಲಿ ಧನಂಜಯ್ ನಾಯಕನಾಗಿ ಮಾತ್ರವಲ್ಲದೆ ನಿರ್ಮಾಪಕನಾಗಿಯೂ ಸಹ ತನ್ನನ್ನು ತಾನು ತೊಡಗಿಸಿಕೊಂಡಿದ್ದು, ಚಿತ್ರಕ್ಕಾಗಿ ವಿನೂತನ ಪ್ರಚಾರಗಳನ್ನು ಮಾಡುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದಷ್ಟೇ ರಾಜ್ ಕಪ್ ಆಡುವ ಸಲುವಾಗಿ ದುಬೈಗೆ ಹಾರಿದ್ದ ಜಯರಾಜ್ (ಡಾಲಿ ಧನಂಜಯ್) 'ನಾನು ಬರುವವರೆಗೂ ಬೆಂಗಳೂರು ಜೋಪಾನ' ಎಂದು ಸಹಚರರಿಗೆ ಸಲಹೆ ನೀಡುವ ವಿಡಿಯೋ ವೈರಲ್ ಆಗಿತ್ತು.

  ಪ್ರೇಮ್-ಧ್ರುವ ಸರ್ಜಾ ಕಾಂಬಿನೇಷನ್ ಚಿತ್ರದಲ್ಲಿ ಮೋಹನ್ ಲಾಲ್? ಕುತೂಹಲ ಕೆರಳಿಸಿದ ಫೋಟೊಪ್ರೇಮ್-ಧ್ರುವ ಸರ್ಜಾ ಕಾಂಬಿನೇಷನ್ ಚಿತ್ರದಲ್ಲಿ ಮೋಹನ್ ಲಾಲ್? ಕುತೂಹಲ ಕೆರಳಿಸಿದ ಫೋಟೊ

  ಹೀಗೆ ದುಬೈಗೆ ಪ್ರಯಾಣ ಕೈಕೊಂಡಿದ್ದ ಡಾಲಿ ಧನಂಜಯ್ ಇದೀಗ ಭಾರತಕ್ಕೆ ವಾಪಸ್ ಆಗಿದ್ದು, ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಜಯರಾಜ್ ( ಡಾಲಿ ಧನಂಜಯ್ ) ಅವರಿಗೆ ಅಭಿಮಾನಿಗಳಿಂದ ಸ್ವಾಗತವೂ ಸಿಕ್ಕಿದೆ. ಇನ್ನು ಧನಂಜಯ್ ದುಬೈಗೆ ತೆರಳಿದ ನಂತರ ಬಿಡುಗಡೆಗೊಂಡ ಕಾಂತಾರ ಸಿನಿಮಾ ಕುರಿತಾಗಿ ದುಬೈನಿಂದ ವಾಪಸ್ಸಾದ ಧನಂಜಯ್ ವಿಮಾನ ನಿಲ್ದಾಣದಲ್ಲಿಯೇ ಮಾತನಾಡಿದ್ದಾರೆ.

  ಕಾಂತಾರ ಚಿತ್ರಕ್ಕೆ ಜನ ನುಗ್ತಿರೋದು ಕಂಡು ಸಂತಸ ವ್ಯಕ್ತಪಡಿಸಿದ ಧನಂಜಯ್

  ಕಾಂತಾರ ಚಿತ್ರಕ್ಕೆ ಜನ ನುಗ್ತಿರೋದು ಕಂಡು ಸಂತಸ ವ್ಯಕ್ತಪಡಿಸಿದ ಧನಂಜಯ್

  ಬೆಂಗಳೂರು ತಲುಪಿದ ಡಾಲಿ ಧನಂಜಯ್ ಅವರನ್ನು ಕೆಲ ಯೂಟ್ಯೂಬ್ ಚಾನೆಲ್‌ಗಳು ವಿಮಾನ ನಿಲ್ದಾಣದಲ್ಲಿಯೇ ಸಂದರ್ಶಿಸಿವೆ. ಈ ಸಂದರ್ಭದಲ್ಲಿ ತಾನು ದುಬೈಗೆ ತೆರಳಿದ ನಂತರ ಬಿಡುಗಡೆಗೊಂಡ ಕಾಂತಾರ ಚಿತ್ರದ ಬಗ್ಗೆ ಪ್ರಶ್ನೆ ಎದುರಾದಾಗ ಪ್ರತಿಕ್ರಿಯಿಸಿದ ಧನಂಜಯ್ 'ಚಿತ್ರದ ಸಾಮರ್ಥ್ಯ ಚಿತ್ರವನ್ನು ಗೆಲ್ಲಿಸಿದೆ, ಕಾಂತಾರ ಚಿತ್ರಕ್ಕೆ ಜನ ನುಗ್ಗುವುದನ್ನು ನೋಡಿದರೆ ತುಂಬಾ ಖುಷಿಯಾಗ್ತಿದೆ' ಎಂದು ಸಂತಸ ವ್ಯಕ್ತಪಡಿಸಿದರು.

  ಬರ್ತಾ ಇದ್ದಂಗೆ ಕಾಂತಾರ ನೋಡ್ತೇನೆ

  ಬರ್ತಾ ಇದ್ದಂಗೆ ಕಾಂತಾರ ನೋಡ್ತೇನೆ

  ಮಾತು ಮುಂದುವರೆಸಿದ ಡಾಲಿ ಧನಂಜಯ್ ಇಲ್ಲಿಯವರೆಗೂ ಚಿತ್ರ ವೀಕ್ಷಿಸಲು ಇರಲಿಲ್ಲ ಇದೀಗ ಬರ್ತಾ ಇದ್ದಂಗೆ ಕಾಂತಾರ, ಗುರು ಶಿಷ್ಯರು ಹಾಗೂ ತೋತಾಪುರಿ ಈ 3 ಚಿತ್ರವನ್ನು ಸಹ ವೀಕ್ಷಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.

  ಧನಂಜಯ್ ಮನವಿ

  ಧನಂಜಯ್ ಮನವಿ

  ಇನ್ನು ಕನ್ನಡ ಸಿನಿ ಪ್ರೇಕ್ಷಕರು ಕಾಂತಾರ ಚಿತ್ರವನ್ನು ಯಾವ ರೀತಿ ಪ್ರೋತ್ಸಾಹಿಸಿ ಮೆಚ್ಚಿಕೊಂಡಿದ್ದಾರೋ ಅದೇ ರೀತಿಯ ಪ್ರೋತ್ಸಾಹವನ್ನು ತಮ್ಮ ನಿರ್ಮಾಣದ ಹಾಗೂ ನಟನೆಯ ಮುಂದಿನ ಹೆಡ್ ಬುಶ್ ಚಿತ್ರಕ್ಕೂ ನೀಡಲಿ ಎಂದು ಧನಂಜಯ್ ಇದೇ ವೇಳೆ ಮನವಿ ಮಾಡಿಕೊಂಡಿದ್ದಾರೆ.. ಸದ್ಯ ಹೆಡ್ ಬುಶ್ ಚಿತ್ರದ ಹಬೀಬಿ ಹಾಡು ಬಿಡುಗಡೆಯಾಗಿದ್ದು, ದಿನವೊಂದರಲ್ಲಿ ಒಂದು ಮಿಲಿಯನ್‌ಗಿಂತಲೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ ಹಾಗೂ ಈ ಹಾಡಿಗೆ ಸ್ವತಃ ಡಾಲಿ ಧನಂಜಯ್ ಸಾಹಿತ್ಯ ಬರೆದಿದ್ದಾರೆ.

  English summary
  Happy to see that much of crowd for Kantara movie says Daali Dhananjaya
  Saturday, October 8, 2022, 9:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X