ಲಿಪ್ ಲಾಕ್ ಬಗ್ಗೆ ಸತ್ಯ ಬಿಚ್ಚಿಟ್ಟ ನಟಿ ಹರಿಪ್ರಿಯಾ
Recommended Video

ಕನ್ನಡದ ಪ್ರತಿಭಾನ್ವಿತ ನಟಿ ಹರಿಪ್ರಿಯಾ. ನಂಬರ್ ನಂ ರೇಸ್ ನಲ್ಲಿ ನಾನಿಲ್ಲ ಅಂತ ಹೇಳುತ್ತಲೇ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೆ ಟಾಲಿವುಡ್ , ಕಾಲಿವುಡ್ ,ಮಾಲಿವುಡ್ ನಲ್ಲಿ ಅಭಿನಯಿಸಿ ಪಂಚಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಗಾಸಿಪ್ ಸದ್ದು ಗದ್ದಲಕ್ಕೆ ಸಿಲುಕಿಕೊಳ್ಳದ ಹರಿಪ್ರಿಯಾ ತಾನಾಯ್ತು ತನ್ನ ಕೆಲಸವಾಯ್ತು ಎನ್ನುವ ಕಲಾವಿದೆ. ಆದರೆ ಹರಿಪ್ರಿಯಾ ಅಭಿನಯದ ಸಿನಿಮಾಗಳು ಮಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಸದ್ದು ಮಾಡುತ್ತವೆ.
ಈ ವರ್ಷವಂತೂ ಹರಿಪ್ರಿಯಾ ಕೈನಲ್ಲಿ ಸಾಕಷ್ಟು ಸಿನಿಮಾಗಳಿದ್ದು ಬಿಗ್ ಸ್ಟಾರ್ ಗಳ ಜೊತೆಯಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡಿದ್ದಾರೆ. ಅದರ ಜೊತೆಯಲ್ಲಿ ನೆಗೆಟಿವ್ ಶೇಡ್ ನಲ್ಲೂ ಹರಿಪ್ರಿಯಾ ಕಾಣಿಸಿಕೊಂಡಿದ್ದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ. ಇದೇ ಸಂದರ್ಭದಲ್ಲಿ ಹರಿಪ್ರಿಯಾ ತಾವು ಚಿತ್ರದಲ್ಲಿ ಲಿಪ್ ಲಾಕ್ ಮಾಡಿದ ವಿಚಾರದ ಬಗ್ಗೆ ಸತ್ಯ ಬಿಟ್ಟುಕೊಟ್ಟಿದ್ದಾರೆ. ಇಷ್ಟು ವರ್ಷಗಳ ನಂತರ ಹರಿಪ್ರಿಯ ಲಿಪ್ ಲಾಕ್ ಬಗ್ಗೆ ಮಾತನಾಡಿದ್ದು ಯಾಕೆ? ಯಾವ ಸಂದರ್ಭದಲ್ಲಿ ಮಾತನಾಡಿದ್ರು? ಇವೆಲ್ಲವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

16ನೇ ವಯಸ್ಸಿನಲ್ಲಿ ಲಿಪ್ ಲಾಕ್ ಮಾಡಿದ ನಟಿ
ನಟಿ ಹರಿಪ್ರಿಯ ಚಿತ್ರರಂಗಕ್ಕೆ ಕಾಲಿಟ್ಟು 11 ವರ್ಷಗಳು ಕಳೆದು ಹೋಗಿವೆ. ಸಾಕಷ್ಟು ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ನಟಿ ಮೊದಲ ಚಿತ್ರದಲ್ಲೇ ಲಿಪ್ ಲಾಕ್ ಮಾಡಿದ್ದರು. ಲಿಪ್ ಲಾಕ್ ಮಾಡಿದ ಕಾರಣವನ್ನ ಹರಿಪ್ರಿಯಾ ಈಗ ಬಿಚ್ಚಿಟ್ಟಿದ್ದಾರೆ.

ಮೊದಲ ಚಿತ್ರದಲ್ಲೇ ಕೆಟ್ಟ ಅನುಭವ
ಹರಿಪ್ರಿಯಾ ಮೊದಲಿಗೆ ಅಭಿನಯಿಸಿದ್ದು ತುಳು ಸಿನಿಮಾದಲ್ಲಿ ನಂತರ ಕನ್ನಡ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು ಸಿನಿಮಾದ ಹಾಡಿನ ದೃಶ್ಯಕ್ಕಾಗಿ ನಿರ್ದೇಶಕರು ಲಿಪ್ ಲಾಕ್ ಮಾಡಬೇಕಾಗಿ ತಿಳಿಸಿದ್ದರಂತೆ. ಆಗ ಹರಿಪ್ರಿಯಾ ಅವರ ವಯಸ್ಸು 16 . ಲಿಪ್ ಲಾಕ್ ಮಾಡಲು ನಿರಾಕರಿಸಿ ನಂತರ ನಿರ್ದೇಶಕರ ಒತ್ತಾಯದಿಂದ ಆ ದೃಶ್ಯದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರಂತೆ.

ಆ ಸಿನಿಮಾ ನಿರ್ದೇಶಕರು ಯಾರು?
ಹರಿಪ್ರಿಯಾ ಅವರಿಗೆ ಸಿನಿಮಾದಲ್ಲಿ ಲಿಪ್ ಲಾಕ್ ಮಾಡಲು ಒತ್ತಾಯ ಮಾಡಿದ ಆ ನಿರ್ದೇಶಕ ಯಾರು ಅನ್ನುವುದನ್ನ ಹೇಳಿಲ್ಲ. ಅಷ್ಟೇ ಅಲ್ಲದೇ ಯಾವ ಚಿತ್ರದಲ್ಲಿ ಈ ರೀತಿಯ ಅನುಭವ ಆಗಿದ್ದು ಎನ್ನುವುದನ್ನೂ ಬಿಟ್ಟಿಕೊಟ್ಟಿಲ್ಲ.

ಹಲವಾರು ವಿಚಾರ ಬಿಚ್ಚಿಟ್ಟ ಹರಿಪ್ರಿಯ
ಆರ್ ಜೆ ಮಯೂರ್ ರಾಘವೇಂದ್ರ ನಡೆಸಿಕೊಡುವ ಸಿನಿಮಾ ಸೂತ್ರ ಕಾರ್ಯಕ್ರಮದಲ್ಲಿ ನಟಿ ಹರಿಪ್ರಿಯಾ ಭಾಗಿ ಆಗಿದ್ದರು. ಈ ಸಂದರ್ಭದಲ್ಲಿ ತಮ್ಮ ಮೊದಲ ಸಿನಿಮಾ ಹಾಗೂ 11 ವರ್ಷದ ಜರ್ನಿ ಬಗ್ಗೆ ಸಾಕಷ್ಟು ವಿಚಾರಗಳನ್ನ ಬಿಚ್ಚಿಟ್ಟಿದ್ದಾರೆ.

ಹರಿಪ್ರಿಯಾ ಅಲ್ಲ ಶೃತಿ
ಹರಿಪ್ರಿಯಾ ಅವರ ನಿಜವಾದ ಹೆಸರು ಶೃತಿ ಅನ್ನುವ ವಿಚಾರ ಅದೆಷ್ಟೋ ಜನರಿಗೆ ತಿಳಿದಿಲ್ಲ. ಇದನ್ನೂ ಹರಿಪ್ರಿಯಾ ಸಿನಿಮಾ ಸೂತ್ರ ಶೋ ನಲ್ಲಿ ಹೇಳಿಕೊಂಡಿದ್ದಾರೆ. ಹಾಗೆಯೇ ನೀರ್ ದೋಸೆ ಅಂತಹ ಚಿತ್ರದಲ್ಲಿ ಮತ್ತೆ ಅಭಿನಯಿಸಲ್ಲ ಆದರೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದಿದ್ದಾರೆ.


Click it and Unblock the Notifications











