Exclusive: ಲೈಂಗಿಕ ಕಿರುಕುಳ ಆರೋಪ ಪ್ರಕರಣ; ನಟ ಚರಿತ್ ಬಾಳಪ್ಪ ಆರೋಪಗಳಿಗೆ ಸಂತ್ರಸ್ತ ಯುವತಿ ತಿರುಗೇಟು

ಕಿರುತೆರೆ ನಟ ಚರಿತ್ ಬಾಳಪ್ಪ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನವಾಗಿದ್ದರು. ಇದೀಗ ಜಾಮೀನು ಪಡೆದು ಹೊರಬಂದಿದ್ದಾರೆ. ಕನ್ನಡದ 'ಮುದ್ದುಲಕ್ಷ್ಮಿ' ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ಚರಿತ್ ನಟಿಸಿದ್ದಾರೆ. ತೆಲುಗು ಕಿರುತೆರೆಯಲ್ಲಿ ಕೂಡ ಗುರ್ತಿಸಿಕೊಂಡಿದ್ದಾರೆ. ತನ್ನೊಟ್ಟಿಗೆ ರಿಲೇಷನ್‌ಶಿಪ್‌ನಲ್ಲಿದ್ದ ಯುವತಿಗೆ ಕಿರುಕುಳ ನೀಡಿದ್ದ ಆರೋಪ ಕೇಳಿಬಂದಿತ್ತು.

ಯುವತಿ ನೀಡಿದ ದೂರಿನ ಅನ್ವಯ ಆರ್‌ಆರ್‌ ನಗರ ಪೊಲೀಸರು ಚರಿತ್ ಬಾಳಪ್ಪನನ್ನು ವಶಕ್ಕೆ ಪಡೆದಿದ್ದರು. 18 ದಿನಗಳ ಕಾಲ ಜೈಲಿನಲ್ಲಿದ್ದ ಚರಿತ್ ಇದೀಗ ಹೊರ ಬಂದು ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಆ ಯುವತಿ ಮಾಡಿರುವ ಆರೋಪಗಳೆಲ್ಲಾ ಸುಳ್ಳು. ಹಣಕ್ಕಾಗಿ ಆ ಯುವತಿ ನನ್ನ ವಿರುದ್ಧ ಮಾಡಿರುವ ಸಂಚು. ನಾವಿಬ್ಬರು ಪ್ರೀತಿಸುತ್ತಿದ್ದದ್ದು ನಿಜ. ನಾನು ಆಕೆಗೆ ಹಣ ಕೊಟ್ಟಿದ್ದೆ. ಅದನ್ನು ತಿರುಗಿ ಕೊಡಲು ಸತಾಯಿಸಿದ್ದಳು. ಬಳಿಕ ನನ್ನ ಮಾಜಿ ಪತ್ನಿ ಜೊತೆ ಸೇರಿ ಇಲ್ಲಸಲ್ಲದ ಆರೋಪ ಮಾಡಿದ್ದಳು. ನಾನು ಕಾನೂನು ಹೋರಾಟ ನಡೆಸುತ್ತೇನೆ ಎಂದು ಫಿಲ್ಮಿಬೀಟ್ ಸಂದರ್ಶನದಲ್ಲಿ ಚರಿತ್ ತಿಳಿಸಿದ್ದಾರೆ.

Harassment case Lady Hits back on TV actor charith balappa allegations

ಚರಿತ್ ಬಾಳಪ್ಪ ಆರೋಪಗಳಿಗೆ ಸಂತ್ರಸ್ತ ಯುವತಿ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆ ಆಕೆ ಮಾತನಾಡಿದ್ದಾರೆ. ಚರಿತ್ ಹೆಣ್ಣುಬಾಕ, ಆತ ಪ್ರಕರಣದ ದಿಕ್ಕು ತಪ್ಪಿಸಲು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾನೆ. ಆತ ನನಗೆ ಮಾತ್ರವಲ್ಲ, ಸಾಕಷ್ಟು ಯುವತಿಯರಿಗೆ ಇದೇ ರೀತಿ ಕಿರುಕುಳ ನೀಡಿದ್ದಾನೆ. ನಾನು ದೂರಿನಲ್ಲಿ ತಿಳಿಸಿರುವುದು ಎಲ್ಲವೂ ನಿಜ. ನನ್ನ ಆರೋಪಕ್ಕೆ ಸಾಕ್ಷ್ಯಾಧಾರಗಳು ಇವೆ ಎಂದು ತಿಳಿಸಿದ್ದಾರೆ.

"ಜೈಲಿನಿಂದ ಹೊರ ಬಂದು ಚರಿತ್ ಉಲ್ಟಾ ಮಾತನಾಡುತ್ತಿದ್ದಾನೆ. ನನ್ನನ್ನು ಸೇರಿದಂತೆ ಇಬ್ಬರು ಯುವತಿಯರ ಹೆಸರನ್ನು ಮಾಧ್ಯಮಗಳ ಮುಂದೆ ಹೇಳಿದ್ದಾನೆ. ಈ ಸಂಬಂಧ ಎನ್‌ಸಿಆರ್ ಮಾಡಿಸಿದ್ದೇನೆ. ಆತ ಬೇಲ್ ಪಡೆದು ಹೊರಬಂದಿರುವುದು ಅಷ್ಟೇ. ನಮ್ಮ ಆರೋಪಗಳನ್ನು ತನಗೇ ಬೇಕಾದಂತೆ ತಿರುಚಿ ಹೇಳಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ" ಎಂದು ಸಂತ್ರಸ್ತ ಯುವತಿ ಬೇಸರ ಹೊರ ಹಾಕಿದ್ದಾರೆ.

"ನಾವು ಹನಿಟ್ರ್ಯಾಪ್ ಮಾಡಿದ್ದೀವಿ ಅಂತೆಲ್ಲಾ ಚರಿತ್ ಈಗ ಹೇಳುತ್ತಿದ್ದಾನೆ. ನಾವಿಬ್ಬರು 10 ತಿಂಗಳ ಕಾಲ ರಿಲೇಷನ್‌ಶಿಪ್‌ನಲ್ಲಿದ್ದೆವು. ಸಾಕಷ್ಟು ಬಾರಿ ನನ್ನ ಮೇಲೆ ಹಲ್ಲೆ ಮಾಡಿದ್ದ. ಕೊನೆಯದಾಗಿ ಹಲ್ಲೆ ಮಾಡಿದಾಗ ಎರಡು ತಿಂಗಳು ಆತನ ಜೊತೆ ಮಾತನಾಡಲಿಲ್ಲ. ಅದೇ ಸಮಯದಲ್ಲಿ ನನ್ನ ತಂಗಿ ಮದುವೆಗೆ ಹಣದ ಅವಶ್ಯಕತೆಯಿದೆ ಎಂದು 1 ಲಕ್ಷ ರೂ. ಅಕೌಂಟ್‌ಗೆ ಹಾಕಿದ್ದ. ಆ ಮೂಲಕ ಪ್ಯಾಚ್‌ಅಪ್ ಮಾಡಿಕೊಳ್ಳುವ, ಸಿಂಪಥಿ ಗಿಟ್ಟಿಸುವ ಪ್ರಯತ್ನ ಮಾಡಿದ್ದ" ಎಂದು ಸ್ಪಷ್ಟನೆ ನೀಡಿದ್ದಾರೆ.

"ಅದೇ ದಿನ ರಾತ್ರಿ ಚರಿತ್ ಬೇರೆ ಹುಡುಗಿ ಜೊತೆ ಇರುವ ವಿಷಯ ಗೊತ್ತಾಗಿ ನಾನು ಪ್ರಶ್ನಿಸಿದ್ದಕ್ಕೆ ತಿರುಗಿಬಿದ್ದಿದ್ದ. ನೀನು ಬಿಕಾರಿ, ನಿನಗೆ ಹಣ ಕೊಟ್ಟಿದ್ದೆ ತಪ್ಪು. ಈಗಲೇ ನನ್ನ ಹಣ ವಾಪಸ್ ಕೊಡು. ಇಲ್ಲದಿದ್ದರೆ ನಿನ್ನ ತಂಗಿ ಸಂಸಾರ ಹಾಳು ಮಾಡುತ್ತೀನಿ ಎಂದು ಬೆದಿರಿಕೆ ಹಾಕಿದ್ದ. ಅದಕ್ಕೆ ಸಂಬಂಧಿಸಿದ ದಾಖಲೆಗಳು ನನ್ನ ಬಳಿಯಿದೆ ಎಂದು" ಆಕೆ ತಿಳಿಸಿದ್ದಾರೆ.

ಚರಿತ್ ಸಾಕಷ್ಟು ಯುವತಿಯರ ಜೊತೆ ರಿಲೇಷನ್‌ಶಿಪ್ ನಾಟಕ ಮಾಡಿ ಮೋಸ ಮಾಡಿದ್ದಾನೆ. ನನ್ನೊಟ್ಟಿಗೆ ರಿಲೇಷನ್‌ಶಿಪ್‌ನಲ್ಲಿ ಇದ್ದಾಗಲೇ ಬೇರೆ ಯುವತಿಯರಿಗೆ ಕೆಟ್ಟದಾಗಿ ಮೆಸೇಜ್ ಮಾಡುತ್ತಿದ್ದ ಎಂದು ಸಂತ್ರಸ್ತ ಯುವತಿ ಹೇಳಿದ್ದಾರೆ. "ಅವಾಚ್ಯ ಪದಗಳನ್ನು ಬಳಸಿ ನನ್ನನ್ನು ನಿಂದನೆ ಮಾಡುತ್ತಿದ್ದ. ಎರಡು ದಿನಗಳ ಅಂತರದಲ್ಲಿ ಕೊಟ್ಟಿದ್ದ ಹಣ ವಾಪಸ್ ಕೇಳಿ ಕೆಟ್ಟ ಪದಗಳನ್ನು ಬಳಸಿದ್ದ. ನನ್ನ ಜೊತೆ ರಿಲೇಷನ್‌ಶಿಪ್‌ನಲ್ಲಿ ಇರುವಾಗಲೇ 8 ಯುವತಿಯರ ಜೊತೆ ಅವನು ಸಿಕ್ಕಿ ಹಾಕಿಕೊಂಡಿದ್ದ. ಅದಕ್ಕೆ ಸಂಬಂಧಿಸಿದ ಮೆಸೇಜ್ ಚಾಟ್ ದಾಖಲೆ ನನ್ನ ಬಳಿಯಿದೆ" ಎಂದಿದ್ದಾರೆ.

"ಹೆಣ್ಣು ಮಕ್ಕಳು ಅಂದ್ರೆ ಅವನಿಗೆ ಕಾಲು ಕಸಕ್ಕೆ ಸಮ. ಕಲಾವಿದರ ವಾಟ್ಸಾಪ್ ಗ್ರೂಪ್‌ಗೆ ನನ್ನ ಫೋಟೊ ಹಾಕಿ ಈಕೆ ಫ್ರಾಡ್ ಅಂತೆಲ್ಲಾ ಮೆಸೇಜ್ ಮಾಡಿದ್ದ. ನಮ್ಮ ಮ್ಯಾನೇಜರ್ ಬಳಿಯೂ ದೂರು ನೀಡಿದ್ದಾನೆ. ನಮ್ಮಿಬ್ಬರ ಮಾತುಕತೆ ಆಡಿಯೋ ತಿರುಚಿ ಲೀಕ್ ಮಾಡುತ್ತೇನೆ ಎಂದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ನನಗೆ ಹೊಡೆದಿದ್ದಾನೆ, ತಂದೆ-ತಾಯಿ ಬಗ್ಗೆ ಕೆಟ್ಟ ಕೆಟ್ಟದಾಗಿ ಮಾತನಾಡಿದ್ದಾನೆ" ಎಂದು ಸಂತ್ರಸ್ತ ಯುವತಿ ವಿವರಿಸಿದ್ದಾರೆ.

"ಆತ ದೊಡ್ಡ ಕಾಮಿ*. ಕುಡಿದು ಯುವತಿಯರಿಗೆ ಮೆಸೇಜ್ ಮಾಡಿ ಬೇಡಿಕೆ ಇಡುತ್ತಿದ್ದ. ನಾನು ಬಹಳ ಸೆನ್ಸಿಟಿವ್. ಇಂತಹ ವಿಚಾರ ಹೊರಗೆ ಬಂದರೆ ನಾನು ಹೆದರಿ ಕೇಸ್ ವಾಪಸ್ ತಗೋತ್ತೀನಿ ಅಂತ ಹೀಗೆಲ್ಲಾ ಉಲ್ಟಾ ಮಾತನಾಡುತ್ತಿದ್ದಾನೆ. ತಂಗಿ ಮದುವೆ ಮುಗಿದ ಕೆಲವೇ ದಿನಗಳಲ್ಲಿ ಹಣ ಸಂಪೂರ್ಣವಾಗಿ ವಾಪಸ್ ಕೊಟ್ಟಿದ್ದೇನೆ. ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದ. ನಾನು ಹೊಡೆದು ನಿನಗೆ ಏನಾದರೂ ಆದರೆ ನಾಲ್ಕು ದಿನ ಜೈಲಿನಲ್ಲಿ ಇದ್ದು ಬರ್ತೀನಿ ಅಷ್ಟೇ, ಬೇರೆ ಏನೂ ಆಗುವುದಿಲ್ಲ ಎನ್ನುತ್ತಿದ್ದ" ಎಂದು ಚರಿತ್ ಬಗ್ಗೆ ಯುವತಿ ಮಾತನಾಡಿದ್ದಾರೆ.

"ಬಹಳ ಎಮೊಷನಲ್ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಅವನನ್ನು ಬಹಳ ಇಷ್ಟಪಟ್ಟಿದ್ದೆ. ಮದುವೆ ಆಗಲು ಆಸೆಪಟ್ಟಿದ್ದೆ. ಅವನ ಮೇಲೆ ಫೋಕ್ಸೊ ಕೇಸ್ ಕೂಡ ಆಗಿತ್ತು. ಆಗ ಕೂಡ ಹಣ ಕೇಳಿ ಜಗಳ ಮಾಡಿದ್ದ. ಅಷ್ಟು ಇಷ್ಟಪಟ್ಟಿದ್ದವನನ್ನು ನಾನೇ ಜೈಲಿಗೆ ಕಳುಹಿಸುತ್ತೇನೆ ಅಂದ್ರೆ ಯೋಚಿಸಿ, ನನಗೆ ಎಷ್ಟು ನೋವು ಕೊಟ್ಟಿದ್ದಾನೆ ಎಂದು ಯುವತಿ ಹೇಳಿದ್ದಾರೆ. ನಾನು ಆತನ ಮಾಜಿ ಪತ್ನಿ ಜೊತೆ ಸೇರಿ ಸಂಚು ಮಾಡುತ್ತಿದ್ದೀನಿ ಎನ್ನುವುದೆಲ್ಲಾ ಸುಳ್ಳು" ಎಂದು ಸಂತ್ರಸ್ತ ಯುವತಿ ಫಿಲ್ಮಿಬೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.

More from Filmibeat

English summary
TV actor Charith balappa released on bail, lady shocking allegations on him, she responds to Filmibeat kannada;
Read more about: filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X