»   » ಅರ್ಜುನ್ ಜನ್ಯ ಟ್ಯಾಟೂ ಹಾಕಿಸಿಕೊಂಡ ಅಪ್ಪಟ್ಟ ಅಭಿಮಾನಿ ಇವರು!

ಅರ್ಜುನ್ ಜನ್ಯ ಟ್ಯಾಟೂ ಹಾಕಿಸಿಕೊಂಡ ಅಪ್ಪಟ್ಟ ಅಭಿಮಾನಿ ಇವರು!

Posted By:
Subscribe to Filmibeat Kannada

ಸಾಮಾನ್ಯವಾಗಿ ಸ್ಟಾರ್ ನಟರ ಟ್ಯಾಟೂಗಳನ್ನು ಅವರ ಅಭಿಮಾನಿಗಳು ಕೈ ಮೇಲೆ ಹಾಕಿಸಿಕೊಳ್ಳುತ್ತಾರೆ. ಆದರೆ ಇದೀಗ ಸಂಗೀತ ನಿರ್ದೇಶಕ, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರ ಅಭಿಮಾನಿಯೊಬ್ಬರು ಹಚ್ಚೆ ಹಾಕಿಸಿಕೊಂಡು ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಜನ ಮೆಚ್ಚಿದ 'ಅರ್ಜುನ್ ಜನ್ಯ'ಗೆ ಫಿಲ್ಮಿಬೀಟ್ ಕಡೆಯಿಂದ ಪ್ರೀತಿಯ ಸನ್ಮಾನ

ಅರ್ಜುನ್ ಜನ್ಯ ಅವರ ಈ ಅಭಿಮಾನಿಯ ಹೆಸರು ಸೋನಿ. ಅರ್ಜುನ್ ಜನ್ಯ ಮ್ಯೂಸಿಕ್ ಗೆ ದೊಡ್ಡ ಫ್ಯಾನ್ ಆಗಿದ್ದ ಇವರು ಕಳೆದ ಎಂಟು ವರ್ಷಗಳಿಂದ ಅವರ ಒಡನಾಟದಲ್ಲಿ ಇದ್ದಾರೆ. ಅಲ್ಲದೆ ಸದ್ಯ ಸೋನಿ ಅವರು ಅರ್ಜುನ್ ಜನ್ಯ ಅವರ ಅಭಿಮಾನಿ ಸಂಘದ ಅಧ್ಯಕ್ಷ ಕೂಡ ಆಗಿದ್ದಾರೆ.

Hardcore fan of Arjun Janya gets tattooed

ಪ್ರತಿ ವರ್ಷ ಅರ್ಜುನ್ ಜನ್ಯ ಅವರ ಹುಟ್ಟುಹಬ್ಬಕ್ಕೆ ತಮ್ಮ 'ಅಖಿಲ ಭಾರತ ಅರ್ಜುನ್ ಜನ್ಯ ಫ್ಯಾನ್ಸ್ ಚಾರಿಟಿ ಕ್ಲಬ್' ವತಿಯಿಂದ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ. ಹೀರೋಗಳ ಅಭಿಮಾನಿಗಳಂತೆ ಒಬ್ಬ ಮ್ಯೂಸಿಕ್ ಡೈರೆಕ್ಟರ್ ಅಭಿಮಾನಿ ಸಹ ಟ್ಯಾಟೂ ಹಾಕಿಸಿಕೊಂಡು ತಮ್ಮ ಅಭಿಮಾನವನ್ನು ತೋರಿಸಿದ್ದಾರೆ.

ಅರ್ಜುನ್ ಜನ್ಯ ನೋವಿನಲ್ಲಿ ಹುಟ್ಟಿತ್ತಂತೆ 'ಅಪ್ಪಾ ಐ ಲವ್ ಯೂ' ಹಾಡು!

English summary
Kannada Music Director Arjun Janya's Crazy Fan gets tattooed Arjun Janya's face on his hand.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada