ಮೈ ತುಂಬ ಮೂಡಿದೆ ದರ್ಶನ್ ಚಿತ್ರ : ಯಾರಿ ಡಿ ಬಾಸ್ ಭಕ್ತ ?
Recommended Video

ನಟ ದರ್ಶನ್ ಈ ವಿಷಯದಲ್ಲಿ ನಿಜಕ್ಕೂ ಅದೃಷ್ಟ ಮಾಡಿದ್ದಾರೆ. ಅಭಿಮಾನಿಗಳು ದರ್ಶನ್ ರನ್ನು ಆರಾಧಿಸುವುದು ನೋಡುತ್ತಿದ್ದರೆ, ಭಕ್ತರು ದೇವರನ್ನು ಪೂಜಿಸುವ ಹಾಗಿದೆ. ಈ ಮಟ್ಟಿನ ಅಭಿಮಾನ ಎಲ್ಲರಿಗೂ ಸಿಗುವುದಿಲ್ಲ.
ಸ್ಟಾರ್ ನಟರ ಚಿತ್ರವನ್ನು ಅವರ ಅಭಿಮಾನಿಗಳು ಟ್ಯಾಟೂ ಹಾಕಿಸಿಕೊಳ್ಳುವುದನ್ನು ನೀವು ನೋಡಿರಬಹುದು. ಆದರೆ, ದರ್ಶನ್ ಅವರ ಅಭಿಮಾನಿಯೊಬ್ಬ ತನ್ನ ಅಭಿಮಾನವನ್ನು ಪ್ರದರ್ಶನ ಮಾಡಿರುವ ರೀತಿ ಆಶ್ಚರ್ಯ ಮೂಡಿಸುವಂತೆ ಇದೆ.
ಡಿ ಬಾಸ್ ಅಪ್ಪಟ್ಟ ಭಕ್ತ ಆತನ ಬೆನ್ನ ಮೇಲೆ ದರ್ಶನ್ ಅವರ ದೊಡ್ಡ ಟ್ಯಾಟೂ ಹಾಕಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾನೆ. ಆತನ ಅಭಿಮಾನ ನೋಡಿ ನಟ ಅಭಿಷೇಕ್ ಅಂಬರೀಶ್ ಕೂಡ ಅಚ್ಚರಿ ಪಟ್ಟಿದ್ದಾರೆ.
ಅಂದಹಾಗೆ, ದರ್ಶನ್ ಅವರ ಈ ಅಭಿಮಾನಿಯ ಕೆಲ ವಿವರ ಮುಂದೆ ಓದಿ...

ಆನಂದ ರಾಮ್ ಎಂಬ ಅಭಿಮಾನಿ
ದರ್ಶನ್ ಅವರ ಟ್ಯೂಟೂ ಮೂಲಕ ಅಭಿಮಾನ ತೋರಿದ ಈ ಅಭಿಮಾನಿಯ ಹೆಸರು ಆನಂದ ರಾಮ್. ಆನಂದ್ 'ಕರುನಾಡ ಕುಲದೀಪ ದರ್ಶನ್ ತೂಗುದೀಪ ಅಭಿಮಾನಿ' ಸಂಘದ ಅಧ್ಯಕ್ಷರಾಗಿದ್ದಾರೆ. ಈ ಸಂಘದ ಮೂಲಕ ಆನಂದ್ ದರ್ಶನ್ ಅಭಿಮಾನಿಗಳೊಂದಿಗೆ ಮೆಚ್ಚಿನ ನಟನಿಗಾಗಿ ಕೆಲಸಗಳನ್ನು ಮಾಡುತ್ತಾರೆ.

ದರ್ಶನ್ ಹುಟ್ಟುಹಬ್ಬದ ಉಡುಗೊರೆ
ಆನಂದ ರಾಮ್ ಅವರು ಟ್ಯಾಟೂ ಹಾಕಿಸಿಕೊಂಡಿರುವುದು ದರ್ಶನ್ ಹುಟ್ಟುಹಬ್ಬದ ಉಡುಗೊರೆಗಾಗಿ. ಇದೇ ಫೆಬ್ರವರಿ 16 ರಂದು ದರ್ಶನ್ ತಮ್ಮ ಜನ್ಮದಿನ ಆಚರಣೆ ಮಾಡುತ್ತಿದ್ದು, ಅದಕ್ಕೆ ಆನಂದ್ ಈ ಉಡುಗೊರೆ ನೀಡಿದ್ದಾರೆ. ಅವರ ಟ್ಯಾಟೂ 1.5 ಫೀಟ್ ಉದ್ದ 1.5 ಫೀಟ್ ಅಗಲ ಇದೆ. 'ಯಜಮಾನ್ರು' ಎಂಬ ಅಡಿ ಬರಹ ಹೊಂದಿದೆ. ಬೀಡಿ ಸೇರುತ್ತಿರುವ ದರ್ಶನ್ ಚಿತ್ರದ ದರ್ಶನ್ ಟ್ಯಾಟೂ ಸೋಷಿಯಲ್ ಮೀಡಿಯಾದಲ್ಲಿಯೂ ಹರಿದಾಡುತ್ತಿದೆ.

ಅಭಿಮಾನಿಯಿಂದ ಅಭಿಮಾನಿಗೆ
ವಿಶೇಷ ಅಂದರೆ, ಟ್ಯಾಟೂ ಹಾಕಿಸಿಕೊಂಡ ಆನಂದ್ ಮಾತ್ರ ದರ್ಶನ್ ಅಭಿಮಾನಿಯಲ್ಲ. ಟ್ಯಾಟೂ ಹಾಕಿರುವ ಶಿವರಾಜ್ ಕೂಡ ದರ್ಶನ್ ಫ್ಯಾನ್. ದರ್ಶನ್ ಅಭಿಮಾನಿಯಿಂದ ಇನ್ನೊಬ್ಬ ಅಭಿಮಾನಿಗೆ ಈ ಟ್ಯಾಟೂ ಹಾಕಲಾಗಿದೆ. ಈ ಟ್ಯಾಟೂ ನೋಡಿ ನಟ ಅಭಿಷೇಕ್ ಅಂಬರೀಶ್ ಕೂಡ ಅಚ್ಚರಿ ಪಟ್ಟಿದ್ದಾರೆ.

ಎಲ್ಲರೂ ದರ್ಶನ್ ಅಭಿಮಾನಿಗಳು
ಆನಂದ್ ರಾಮ್ ಮಾತ್ರವಲ್ಲ ದರ್ಶನ್ ಅವರ ಸಾಕಷ್ಟು ಅಭಿಮಾನಿ ಅವರ ಟ್ಯಾಟೂವನ್ನು ಹಾಕಿಸಿಕೊಂಡಿದ್ದಾರೆ. ದರ್ಶನ್ ಅವರ ಎಲ್ಲ ಸಿನಿಮಾದ ಹೆಸರನ್ನು ತನ್ನ ಬೆನ್ನ ಮೇಲೆ ಒಬ್ಬ ಅಭಿಮಾನಿ ಬರೆಸಿಕೊಂಡಿದ್ದ. ದರ್ಶನ್ ಅವರ ತಾಯಿಯ ಚಿತ್ರವನ್ನು ಇನ್ನೊಬ್ಬ ಅಭಿಮಾನಿ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದ. 'ಸಂಗೊಳ್ಳಿ ರಾಯಣ್ಣ', 'ಕುರುಕ್ಷೇತ್ರ' ಹೀಗೆ ಅನೇಕ ಚಿತ್ರಗಳ ದರ್ಶನ್ ಟ್ಯಾಟೂ ಅಭಿಮಾನಿಗಳ ಕೈನಲ್ಲಿ ಮೂಡಿವೆ.


Click it and Unblock the Notifications











