»   » ‘ಡಿ ಬಾಸ್’ ಭಕ್ತನ ಈ ಅಭಿಮಾನಕ್ಕೆ ಏನು ಹೇಳಬೇಕು?

‘ಡಿ ಬಾಸ್’ ಭಕ್ತನ ಈ ಅಭಿಮಾನಕ್ಕೆ ಏನು ಹೇಳಬೇಕು?

Posted By:
Subscribe to Filmibeat Kannada

ಸ್ಟಾರ್ ನಟರಿಗೆ ಸಾವಿರಾರೂ ಜನ ಅಭಿಮಾನಿಗಳು ಇರುತ್ತಾರೆ. ಅದರಲ್ಲಿ ಕೆಲ ಅಭಿಮಾನಿಗಳಂತು ತಮ್ಮ ನೆಚ್ಚಿನ ನಟರಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಇಲ್ಲೊಬ್ಬ ದರ್ಶನ್ ಅಭಿಮಾನಿ, ತಮ್ಮ ಮೈ ತುಂಬ ಟ್ಯಾಟೂ ಹಾಕಿಸಿಕೊಂಡು ''ನಾನು ಸಾಮಾನ್ಯ ಫ್ಯಾನ್'' ಅಂತು ಖಂಡಿತ ಅಲ್ಲ ಎಂದು ಸಾಬೀತು ಪಡಿಸಿದ್ದಾರೆ.

ದರ್ಶನ್ 51ನೇ ಚಿತ್ರದ ನಿರ್ಮಾಪಕರು ನಾವೇ, ಗೊಂದಲ ಬೇಡ ಎಂದ ಬಿ.ಸುರೇಶ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆ ಮಾಡಿರುವ 35ಕ್ಕೂ ಹೆಚ್ಚು ಸಿನಿಮಾದ ಹೆಸರುನ್ನು ಈತ ತನ್ನ ಬೆನ್ನಿನ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ಇಷ್ಟದ ನಟನ ಹೆಸರು ಅಥವಾ ಯಾವದಾದರೂ ಒಂದು ಸಿನಿಮಾದ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವುದನ್ನು ನೋಡಿರುತ್ತೇವೆ. ಆದರೆ, ಈ ಅಭಿಮಾನಿ ಅಷ್ಟೊಂದು ಸಿನಿಮಾದ ಹೆಸರನ್ನು ಹಾಕಿಸಿಕೊಂಡು ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ.

Hardcore Fan of Darshan Gets Tattooed

'ಸ್ವಾಮಿ', 'ದತ್ತ', 'ಅಯ್ಯ' ಸಿನಿಮಾದಿಂದ ಹಿಡಿದು ಇತ್ತೀಚಿನ 'ಅಂಬರೀಶ' ಚಿತ್ರದ ವರೆಗೆ ಅನೇಕ ಸಿನಿಮಾದ ಹೆಸರುಗಳು ಈ ಅಭಿಮಾನಿಯ ಮೈ ಮೇಲೆ ಟ್ಯಾಟೂ ವಾಗಿದೆ. ಈ ಅಭಿಮಾನಿಯ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ದರ್ಶನ್ ಅಭಿಮಾನಿಗಳಂತು ಇಂತಹ ಅಭಿಮಾನಿ ನೋಡಿ ಮುಖ ವಿಸ್ಮಿತರಾಗಿದ್ದಾರೆ.

English summary
Challenging Star Darshan's Crazy Fan Gets Tattooed Darshan Movies Name on his Body.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada