»   » ಅಲ್ಲಿ ದರ್ಶನ್ ಫ್ಯಾನ್, ಇಲ್ಲಿ ಕಿಚ್ಚನ ಫ್ಯಾನ್: ಇವರು ಪಕ್ಕಾ ಅಭಿಮಾನಿಗಳು

ಅಲ್ಲಿ ದರ್ಶನ್ ಫ್ಯಾನ್, ಇಲ್ಲಿ ಕಿಚ್ಚನ ಫ್ಯಾನ್: ಇವರು ಪಕ್ಕಾ ಅಭಿಮಾನಿಗಳು

Posted By:
Subscribe to Filmibeat Kannada

ಅಭಿಮಾನಿಗಳು ತಮ್ಮ ನೆಚ್ಚಿನ ನಟರನ್ನು ಸಿನಿಮಾದಿಂದ ಆಚೆಗೂ ತುಂಬಾ ಪ್ರೀತಿಸುತ್ತಾರೆ. ಇತ್ತೀಚೆಗಷ್ಟೆ ನಟ ದರ್ಶನ್ ಅವರ ಅಭಿಮಾನಿ ಮೈ ತುಂಬ ಟ್ಯಾಟೂ ಹಾಕಿಸಿಕೊಂಡು ಎಲ್ಲರ ಗಮನ ಸೆಳೆದಿದ್ದರು. ಈಗ ಸುದೀಪ್ ಅಭಿಮಾನಿ ಸಹ ಅದೇ ರೀತಿಯ ಅಭಿಮಾನ ಮೆರೆದಿದ್ದಾರೆ.

'ಅನಾಥೆ' ಎಂದವಳ ಮೇಲೆ ಸುದೀಪ್ ಅಭಿಮಾನಿ 'ಆರ್ಯ'ನಿಂದ ಅತ್ಯಾಚಾರ.!

ಸುದೀಪ್ ಅವರ ನಟನೆಯ ಸಿನಿಮಾಗಳ ಹೆಸರನ್ನು ಮೈ ಮೇಲೆ ಟ್ಯಾಟೂ ಹಾಕಿಸಿಕೊಂಡಿರುವ ಈ ಅಭಿಮಾನಿಯ ಹೆಸರು ರಮೇಶ್. ಬೆಳಗಾವಿ ಜಿಲ್ಲೆಯವರಾದ ರಮೇಶ್, ಕಿಚ್ಚ ಸುದೀಪ್ ಅವರ ದೊಡ್ಡ ಅಭಿಮಾನಿಯಾಗಿದ್ದಾರೆ. ಸಿನಿಮಾಗಳ ಹೆಸರು ಮಾತ್ರವಲ್ಲದೆ ಸುದೀಪ್ ಅವರ ಇಡೀ ಕುಟುಂಬದ ಹೆಸರನ್ನು ಕೂಡ ಈ ಅಭಿಮಾನಿ ಹಚ್ಚೆ ಹಾಕಿಸಿಕೊಂಡಿದ್ದಾರೆ.

'ಡಿ ಬಾಸ್' ಭಕ್ತನ ಈ ಅಭಿಮಾನಕ್ಕೆ ಏನು ಹೇಳಬೇಕು?

Hardcore Fan of Sudeep Gets Tattooed

ಇಂತಹ ಅಭಿಮಾನಿಯನ್ನು ಕಂಡ ಕಿಚ್ಚ ಅವರ ಕೋರಿಕೆಯನ್ನು ಈಡೇರಿಸುವುದಕ್ಕೆ ಮುಂದಾಗಿದ್ದಾರೆ. 'ನಿಮ್ಮನ್ನೂ ಒಮ್ಮೆ ಭೇಟಿಯಾಗಬೇಕು ಅಣ್ಣ' ಅಂತ ಕೇಳಿರುವ ಅಭಿಮಾನಿಯ ಮಾತಿಗೆ ಕಿಚ್ಚ ಒಪ್ಪಿಕೊಂಡಿದ್ದಾರೆ. 'ಖಂಡಿತ ನಿಮ್ಮನೂ ನಾನು ಭೇಟಿಯಾಗುತ್ತೇನೆ.' ಎಂದು ಅಭಿಮಾನಿಗೆ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.

English summary
kichcha sudeep's Crazy Fan gets tattooed Sudeep movies name on his Body.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada