twitter
    For Quick Alerts
    ALLOW NOTIFICATIONS  
    For Daily Alerts

    ಈ ಚಿತ್ರ ನನ್ನ ಜೀವನದ ಮೈಲುಗಲ್ಲಾಗುತ್ತದೆ ಎಂದಿದ್ದರು ಚಿರು, ಆದರೆ ಅದಕ್ಕೆ ಅವಕಾಶವೇ ಸಿಗಲಿಲ್ಲ

    |

    ಚಿರಂಜೀವಿ ಸರ್ಜಾ ಕಡಿಮೆ ಅವಧಿಯಲ್ಲಿಯೇ ಸಾಲು ಸಾಲು ಸಿನಿಮಾಗಳನ್ನು ಮಾಡಿದ್ದರು. ಅವರ ನಟನೆಯ ಇನ್ನೂ ಕೆಲವು ಸಿನಿಮಾಗಳು ಸಿದ್ಧವಾಗುತ್ತಿದ್ದವು. ಹಾಗೆಯೇ ಹೊಸ ಸಿನಿಮಾಗಳ ಮಾತುಕತೆಗಳೂ ನಡೆದಿದ್ದವು. ಆದರೆ ಚಿರಂಜೀವಿ ನೆನಪನ್ನಷ್ಟೇ ಉಳಿಸಿ ಹೋಗಿದ್ದಾರೆ. ಅವರು ನಿರ್ಮಾಪಕರು ಮತ್ತು ನಿರ್ದೇಶಕರ ಸ್ನೇಹಿ ಆಗಿದ್ದರು. ಸ್ನೇಹದ ಕಾರಣದಿಂದಲೇ ಅವರು ಸಿನಿಮಾ ಒಪ್ಪಿಕೊಳ್ಳುತ್ತಿದ್ದರು. ಆದರೆ ಅವರಿಗೆ ಬಹುದೊಡ್ಡ ಹಿಟ್ ಎಂಬುದು ಸಿಕ್ಕಿರಲಿಲ್ಲ.

    Recommended Video

    ಚಿರಂಜೀವಿ ಸಾವಿಗೆ ಕಾರಣ ಏನಿರಬಹುದು | Doctor about Chiranjeevi Sarja

    ಆದರೆ ಐದಾರು ವರ್ಷಗಳ ಹಿಂದೆಯೇ ಅವರಿಗೆ ಸಿಕ್ಕಿದ್ದ ಕಥೆಯೊಂದನ್ನು ಬಹಳ ಮೆಚ್ಚಿಕೊಂಡಿದ್ದರು. ಆ ಚಿತ್ರವನ್ನು ಮಾಡಲೇಬೇಕು ಎಂದು ಉತ್ಸುಕರಾಗಿದ್ದರು. ಈ ಚಿತ್ರ ತಮ್ಮ ವೃತ್ತಿ ಬದುಕನ್ನು ಬದಲಿಸಲಿದೆ ಎಂದು ನಿರೀಕ್ಷಿಸಿದ್ದರು. 'ಅಲೆಮಾರಿ' ಖ್ಯಾತಿಯ ಹರಿ ಸಂತೋಷ್ ಈ ಸಿನಿಮಾ ಮಾಡಲು ಬಯಸಿದ್ದರು. ಆದರೆ ಕಾರಣಾಂತರಗಳಿಂದ ಅದು ಸೆಟ್ಟೇರಲೇ ಇಲ್ಲ. ಆಗಲೇ ಆ ಚಿತ್ರಕ್ಕೆ ಹಾಡೊಂದನ್ನು ಬರೆದಿದ್ದ ಸಂತೋಷ್, ಅದನ್ನು ಟ್ರೇಲರ್ ರೂಪದಲ್ಲಿ ಸಿದ್ಧಪಡಿಸಿದ್ದರು. ಈಗ ಚಿರಂಜೀವಿ ಅಗಲಿಕೆಯ ನೋವಲ್ಲಿ ಆ ಹಾಡನ್ನು ಅವರು ಹಂಚಿಕೊಂಡಿದ್ದಾರೆ. ಮುಂದೆ ಓದಿ...

    ಹಲವು ವರ್ಷಗಳ ಒಡನಾಟ

    ಹಲವು ವರ್ಷಗಳ ಒಡನಾಟ

    ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ನೋವು ಎಲ್ಲರಿಗೂ ಇದೆ. ಅದರಲ್ಲಿ ನಾವೂ ಒಬ್ಬರು. ನಮ್ಮ ಅವರ ಒಡನಾಟ ತುಂಬಾ ವರ್ಷಗಳಿಂದ ಇತ್ತು. ಅವರಂತಹ ಸಿಹಿಯಾದ ಮತ್ತು ಪ್ರಾಮಾಣಿಕ ವ್ಯಕ್ತಿಯನ್ನು ನಾನು ನೋಡಿಯೇ ಇಲ್ಲ. ನನ್ನನ್ನು ಸಹೋದರನಂತೆ ತುಂಬಾ ಪ್ರೋತ್ಸಾಹ ನೀಡುತ್ತಿದ್ದರು ಎಂದಿದ್ದಾರೆ ಸಂತೋಷ್.

    ಚಿರು ಸರ್ಜಾ ನಿಧನಕ್ಕೆ ನಟಿ ಶ್ರುತಿ ಹರಿಹರನ್ ಸಂತಾಪಚಿರು ಸರ್ಜಾ ನಿಧನಕ್ಕೆ ನಟಿ ಶ್ರುತಿ ಹರಿಹರನ್ ಸಂತಾಪ

    ಮೈಲುಗಲ್ಲಿನ ಸಿನಿಮಾ

    ಮೈಲುಗಲ್ಲಿನ ಸಿನಿಮಾ

    ಅವರಿಗೆ ಆಗಾಗ ಕಥೆಗಳನ್ನು ಹೇಳುತ್ತಾ ಚರ್ಚಿಸುತ್ತಿದ್ದೆವು. ಸಿನಿಮಾ ಮಾಡದೇ ಇದ್ದರೂ ಅವರೊಂದಿಗೆ ಬಾಂಧವ್ಯ ಚೆನ್ನಾಗಿತ್ತು. ಈ ಒಡನಾಟಕ್ಕೆ ಅವರ ಫ್ಯಾಮಿಲಿ ಒಳ್ಳೆಯ ಅವಕಾಶ ನೀಡಿತ್ತು. ಐದು ವರ್ಷದ ಹಿಂದೆ 'ದೊಡ್ಡೋರು' ಎಂಬ ಸಿನಿಮಾ ಮಾಡಲು ಹೋಗಿದ್ದೆವು. ಗೆಳೆಯ ಚೇತನ್ ಸಂಭಾಷಣೆ ಬರೆದಿದ್ದರು. ಅವರಿಗೆ ರೀಡಿಂಗ್‌ಗೆ ನೀಡಿದಾಗ 'ನನ್ನ ಜೀವನದಲ್ಲಿ ಇದು ಮೈಲುಗಲ್ಲಿನ ಸಿನಿಮಾವಾಗುತ್ತದೆ' ಎಂದಿದ್ದರು ಎಂದು ಸಂತು ನೆನಪಿಸಿಕೊಂಡರು.

    ಪೊಲಿಟಿಕಲ್ ರೌಡಿಸಂ ಚಿತ್ರ

    ಪೊಲಿಟಿಕಲ್ ರೌಡಿಸಂ ಚಿತ್ರ

    ಅವರು ನನ್ನನ್ನು ಮಗನೇ ಎಂದು ಕರೆಯುತ್ತಿದ್ದರು. ಪೊಲಿಟಿಕಲ್ ರೌಡಿಸಂ ಕಥೆಯ ಸಿನಿಮಾ ಅದು. ಆ ಸಿನಿಮಾ ಮಾಡಲೇಬೇಕು ಎಂದುಕೊಂಡಿದ್ದೆವು. ದೊಡ್ಡ ಬಜೆಟ್ ಸಿನಿಮಾ. ಅದಕ್ಕೆ ನಿರ್ಮಾಪಕರು ಸಿಗುವುದು ಕಷ್ಟವಾಯಿತು. ತುಂಬಾ ಅದರ ಪ್ರಕ್ರಿಯೆ ತುಂಬಾ ವರ್ಷ ನಡೆಯಿತು. ಅನೇಕ ನಿರ್ಮಾಪಕರಿಗೆ ಕಥೆ ವಿವರಿಸಿದ್ದೆವು. ಗಟ್ಟಿಯಾದ ಕಥೆಯಾದರೂ ದೊಡ್ಡ ಬಜೆಟ್ ಬೇಡುವುದರಿಂದ ಹಾಗೆಯೇ ಉಳಿದಿತ್ತು ಎಂದು ತಿಳಿಸಿದ್ದಾರೆ.

    ಚಿರಂಜೀವಿ & ಅರ್ಜುನ್ ಫ್ಯಾಮಿಲಿಯ ಚಿತ್ರರಂಗದ ನಂಟುಚಿರಂಜೀವಿ & ಅರ್ಜುನ್ ಫ್ಯಾಮಿಲಿಯ ಚಿತ್ರರಂಗದ ನಂಟು

    ಚಿರಂಜೀವಿಗೆ ಇಷ್ಟವಾಗಿತ್ತು

    ಚಿರಂಜೀವಿಗೆ ಇಷ್ಟವಾಗಿತ್ತು

    ನಿರ್ಮಾಪಕರಿಗೆ ತೋರಿಸಲೆಂದೇ ಈ ಚಿತ್ರಕ್ಕಾಗಿ ಹಾಡೊಂದನ್ನು ಸಿದ್ಧಪಡಿಸಿದ್ದೆವು. ವಿಜು ಎಂಬುವವರು ಕಂಪೋಸ್ ಮಾಡಿದ್ದರು. ಚಂದನ್ ಶೆಟ್ಟಿ ಹಾಡಿದ್ದರು. ನಾನು ಸಾಹಿತ್ಯ ಬರೆದಿದ್ದೆ. ಚಿರಂಜೀವಿ ಸರ್ಜಾ ಅವರ ಚಿತ್ರಗಳದ್ದೇ ದೃಶ್ಯಗಳನ್ನು ಬಳಸಿ ಟ್ರೇಲರ್ ಸಾಂಗ್ ಮಾಡಿದ್ದೆವು. ಅದು ಚಿರಂಜೀವಿ ಅವರಿಗೆ ಬಹಳ ಇಷ್ಟವಾಗಿತ್ತು. ಎಲ್ಲರಿಗೂ ಅದನ್ನು ತೋರಿಸುತ್ತಿದ್ದರು ಎಂದು ಸಂತು ವಿವರಿಸಿದ್ದಾರೆ.

    English summary
    Director Hari Santhosh said he and Chiranjeevi Sarja was supposed to do political rowdism movie Doddoru. He dedicated a trailer song for him.
    Wednesday, June 10, 2020, 9:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X