ಹರಿಪ್ರಿಯಾ ಇನ್ನು ಮುಂದೆ ಕುಸುಮ ಬಾಲೆ
ನಟಿ ಹರಿಪ್ರಿಯಾ ಕುಸುಮ ಆಗಿ ಬದಲಾಗಿದ್ದಾರೆ. ಆದರೆ ಈ ಬದಲಾವಣೆ ಕೇವಲ ತೆರೆ ಮೇಲೆ ಮಾತ್ರ. ಹೌದು ಹರಿಪ್ರಿಯ ಅಭಿನಯದ ಬೆಲ್ ಬಾಟಂ ಸಿನಿಮಾದ ಚಿತ್ರೀಕರಣ ಹಿಂದಿನಿಂದ ಪ್ರಾರಂಭ ಆಗಿದೆ. ಆರಂಭದಲ್ಲೇ ಜೋಗ್ ಫಾಲ್ಸ್ ನಿಂದ ಚಿತ್ರೀಕರಣವನ್ನ ಶುರು ಮಾಡಿದ್ದಾರೆ ನಿರ್ದೇಶಕ ಜಯತೀರ್ಥ.
ಇದೇ ಮೊದಲ ಬಾರಿಗೆ ರಿಷಬ್ ಶೆಟ್ಟಿ ನಾಯಕನಾಗಿ ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದು ಹರಿಪ್ರಿಯ ರಿಷಬ್ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 80 ರ ದಶಕದಲ್ಲಿ ನಡೆಯುವ ಕಥೆಯನ್ನ ಸಿನಿಮಾವನ್ನಾಗಿ ಮಾಡಿರುವ ನಿರ್ದೇಶಕರು ನಾಯಕ ನಾಯಕಿಗೆ ಅದೇ ಗೆಟಪ್ ನಲ್ಲಿ ಮೇಕ್ ಓವರ್ ಮಾಡಿಸಿದ್ದಾರೆ.
ನಟಿ ಹರಿಪ್ರಿಯಾ ಅವರನ್ನ ಇತ್ತೀಚಿನ ದಿನಗಳಲ್ಲಿ ವಿಭಿನ್ನ ರೀತಿಯ ಕಥೆಗಳು ಮತ್ತು ಪಾತ್ರಗಳು ಹುಡುಕಿಕೊಂಡು ಬರುತ್ತಿದೆ. ಈ ಕಾರಣದಿಂದಾಗಿ ತೆರೆ ಮೇಲೆ ಬೇರೆ ರೀತಿಯ ಪಾತ್ರಗಳಲ್ಲಿ ಹರಿಪ್ರಿಯಾ ಅವರನ್ನು ನೋಡುವ ಅವಕಾಶಗಳು ಅಭಿಮಾನಿಗಳಿಗೆ ಸಿಗುತ್ತಿದೆ.

ಈ ಹಿಂದೆ ಜಯತೀರ್ಥ ಅವರೇ ನಿರ್ದೇಶನ ಮಾಡಿದ್ದ ಬುಲೆಟ್ ಬಸ್ಯಾ ಸಿನಿಮಾದಲ್ಲಿ ಹರಿಪ್ರಿಯಾ ನಾಯಕಿಯಾಗಿ ಅಭಿನಯ ಮಾಡಿದ್ದರು. ಈಗ ಮತ್ತೆ ಅದೇ ಜೋಡಿ ಒಂದಾಗಿದೆ. ಸಿನಿಮಾಗಳನ್ನ ನಿರ್ದೇಶನ ಮಾಡಿ ಸಕ್ಸಸ್ ಕಂಡಿದ್ದ ರಿಷಬ್ ಶೆಟ್ಟಿ ಈ ಚಿತ್ರದ ಮೂಲಕ ನಾಯಕನಾಗಿ ಬಡ್ತಿ ಪಡೆಯುತ್ತಿದ್ದಾರೆ.


Click it and Unblock the Notifications











