ತಂದೆ - ತಾಯಿಯಾಗ್ತಿದ್ದಾರೆ ಸಿಂಹಪ್ರಿಯ? ಸುಳಿವು ಕೊಟ್ಟ ನಟಿ ಹರಿಪ್ರಿಯಾ!

ಚಂದನವನದ ಖ್ಯಾತ ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹ ನಡುವೆ ಪ್ರೀತಿ, ಪ್ರೇಮ ಇದೆ ಅಂತೆ ಎಂದು ಸುದ್ದಿಗಳು ಹರಿದಾಡಲು ಶುರುವಾಗುತ್ತಿದ್ದಂತೆ, ಈ ಜೋಡಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೈ ಕೈ ಹಿಡಿದುಕೊಂಡು ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಆ ಸುದ್ದಿಗಳು ನಿಜ ಎಂಬುದನ್ನು ಪರೋಕ್ಷವಾಗಿ ತಿಳಿಸಿತ್ತು.
ಬಳಿಕ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಇಬ್ಬರೂ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿರುವ ವಿಷಯವನ್ನು ತಿಳಿಸಿ ಆಶ್ಚರ್ಯವನ್ನುಂಟುಮಾಡಿದ್ದರು. ನಂತರ ಜನವರಿ 26ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸರಳವಾಗಿ ವಿವಾಗ ಬಂಧನಕ್ಕೆ ಒಳಗಾಗಿ ಜನವರಿ 28ರಂದು ಅದ್ದೂರಿಯಾಗಿ ರಿಸೆಪ್ಷನ್ ಮಾಡಿಕೊಂಡಿದ್ದರು.
ಹೀಗೆ ವರ್ಷದ ಮೊದಲ ತಿಂಗಳಿನಲ್ಲಿ ಸಪ್ತಪದಿ ತುಳಿದು ಪ್ರೇಮಿಗಳಿಂದ ದಂಪತಿಗಳ ಸ್ಥಾನಕ್ಕೆ ಬಡ್ತಿ ಪಡೆದರು. ಸದ್ಯ ಈ ಜೋಡಿ ತಂದೆ - ತಾಯಿಗಳಾಗುತ್ತಿದ್ದಾರಂತೆ ಎಂಬ ಸುದ್ದಿ ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ದೊಡ್ಡ ಮಟ್ಟದಲ್ಲಿ ಹರಿದಾಡಿತ್ತು. ಆದರೆ ಈ ಕುರಿತು ಹರಿಪ್ರಿಯಾ ಆಗಲಿ ಅಥವಾ ವಸಿಷ್ಠ ಸಿಂಹ ಆಗಲಿ ಎಲ್ಲಿಯೂ ಪ್ರತಿಕ್ರಿಯೆ ನೀಡಿರಲಿಲ್ಲ.
ಆದರೆ ಈಗ ನಟಿ ಹರಿಪ್ರಿಯಾ ಈ ಸುದ್ದಿಗಳ ಬಗ್ಗೆ ವಿಶೇಷವಾಗಿ ಪೋಸ್ಟ್ ಒಂದನ್ನು ಹಂಚಿಕೊಂಡು ಸಿಹಿ ಸುದ್ದಿ ನೀಡುವ ಸುಳಿವು ನೀಡಿದ್ದಾರೆ. ಹೌದು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ವಿಷಯವೇನೆಂದು ತಿಳಿಯಲು ನೀವು ಕುತೂಹಲಕ್ಕೊಳಗಾಗಿದ್ದೀರ ಎಂಬುದು ತಿಳಿದಿದೆ, ನಾನು ವಿಷಯವೇನೆಂದು ಹೇಳುವ ಮುನ್ನ ನೀವು ಅದನ್ನು ಊಹಿಸಲು ಯತ್ನಿಸಿ ಎಂದು ಫೋಟೊವೊಂದನ್ನು ಹಂಚಿಕೊಳ್ಳುವುದರ ಮೂಲಕ ಬರೆದುಕೊಂಡಿದ್ದಾರೆ.

ಮೊಬೈಲ್‌ಗೆ ನೋಟಿಫಿಕೇಶನ್ ಬರುವ ರೀತಿ ಡಿಸೈನ್ ಮಾಡಿರುವ ಫೋಟೊವೊಂದನ್ನು ಹರಿಪ್ರಿಯಾ ಹಂಚಿಕೊಂಡಿದ್ದಾರೆ. ಇದರಲ್ಲಿ ಹೆಸರೇನು ಮೇಡಂ, ಯಾವಾಗ ಅನೌನ್ಸ್ ಮಾಡ್ತೀರ, ಕೇಳಿದ್ದು ನಿಜಾನಾ, ಗುಡ್ ನ್ಯೂಸ್ ಎಂಬ ನೋಟಿಫಿಕೇಶನ್ ಇವೆ. ಇದರ ಜೊತೆಗೆ ಹೊಸ ಜೀವನ, ಹೊಸ ಆಗಮನ, ಹೊಸ ಕರ್ತವ್ಯ, ಆದಷ್ಟು ಬೇಗ ಆಗಮಿಸಲಿದೆ, ಹೊಸ ಆರಂಭ ಎಂಬ ಹ್ಯಾಷ್ ಟ್ಯಾಗ್‌ಗಳನ್ನು ಸಹ ಬರೆದುಕೊಂಡಿರುವ ಹರಿಪ್ರಿಯಾ ಪರೋಕ್ಷವಾಗಿ ಹೊಸ ಸದಸ್ಯನ ಆಗಮನವಾಗಲಿದೆ ಎಂಬ ಸುಳಿವು ನೀಡಿದ್ದಾರೆ.


Click it and Unblock the Notifications











