ಮದುವೆ ಗುಸು ಗುಸು ಬೆನ್ನಲ್ಲೇ ಏರ್‌ಪೋರ್ಟ್‌ನಲ್ಲಿ ಕಂಡ ಹರಿಪ್ರಿಯಾ-ವಸಿಷ್ಠ ಸಿಂಹ!

By ಫಿಲ್ಮಿಬೀಟ್ ಡೆಸ್ಕ್

ಇದು ಗಾಳಿ ಸುದ್ದಿನೋ.. ಇಲ್ಲಾ ನಿಜನೋ ಅನ್ನುವಷ್ಟು ಅಭಿಮಾನಿಗಳು ಕನ್ಫ್ಯೂಸ್ ಆಗಿದ್ದರು. ಇದುವರೆಗೂ ನಟಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಇಬ್ಬರೂ ತಮ್ಮ ಪ್ರೀತಿಯ ಸುಳಿವನ್ನು ಬಿಟ್ಟುಕೊಟ್ಟಿರಲಿಲ್ಲ.

ಆದ್ರೀಗ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಇಬ್ಬರ ಲವ್ ಮ್ಯಾಟರ್ ರಹಸ್ಯವಾಗೇನೂ ಉಳಿದಿಲ್ಲ. ಇವರಿಬ್ಬರ ಲವ್ ಮ್ಯಾಟರ್ ಬಗ್ಗೆ ಇನ್ನೂ ಗೊಂದಲದಲ್ಲಿ ಇರೋ ಅಭಿಮಾನಿಗಳಿಗೆ ಈಗ ಸಾಕ್ಷಿನೂ ಸಿಕ್ಕಿದೆ.

ಸ್ಯಾಂಡಲ್‌ವುಡ್ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಇಬ್ಬರೂ ಮದುವೆ ಆಗಲಿದ್ದಾರೆ ಅನ್ನೋ ಮ್ಯಾಟರ್ ಹರಿದಾಡುತ್ತಿತ್ತು. ಅದಕ್ಕೆ ಸರಿಯಾಗಿ ಇಬ್ಬರೂ ಏರ್‌ಪೋರ್ಟ್‌ನಲ್ಲಿ ಜೊತೆಯಾಗಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಹರಿಪ್ರಿಯಾ-ವಸಿಷ್ಠ ಲವ್‌ ಸ್ಟೋರಿ ಕನ್ಫರ್ಮ್?

ಹರಿಪ್ರಿಯಾ-ವಸಿಷ್ಠ ಲವ್‌ ಸ್ಟೋರಿ ಕನ್ಫರ್ಮ್?

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಲವ್‌ ಸ್ಟೋರಿ ರಿವೀಲ್ ಆಗಿದೆ. ಕಂಚಿನ ಕಂಠದ ವಸಿಷ್ಠ ಸಿಂಹ ಹಾಗೂ ನೀರ್‌ದೋಸೆ ಬೆಡಗಿ ಹರಿಪ್ರಿಯಾ ಇಬ್ಬರೂ ಪ್ರೀತಿ ಮೂಡಿನಲ್ಲಿದ್ದಾರೆ. ಕೆಲವು ದಿನಗಳಿಂದ ಕನ್ನಡ ಚಿತ್ರರಂಗದಲ್ಲಿ ಈ ಜೋಡಿ ಪ್ರೇಮ್ ಕಹಾನಿ ಬಗ್ಗೆನೇ ಗುಸುಗುಸು ಶುರುವಾಗಿದೆ. ಆದರೆ, ಇದೂವರೆಗೂ ಈ ಜೋಡಿ ಮುಕ್ತವಾಗಿ ತಮ್ಮ ಪ್ರೀತಿಯ ಬಗ್ಗೆ ಮಾತಾಡಿಲ್ಲ. ಎಲ್ಲೆಡೆ ಈ ಸುದ್ದಿ ವೈರಲ್ ಆಗಿದ್ದರೂ, ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ತಮ್ಮ ಮ್ಯಾಟರ್ ಅನ್ನು ಮಾತ್ರ ಕನ್ಫರ್ಮ್ ಮಾಡಿಲ್ಲ.

ಏರ್‌ಪೋರ್ಟ್‌ನಲ್ಲಿ ಹರಿಪ್ರಿಯಾ-ವಸಿಷ್ಠ

ಏರ್‌ಪೋರ್ಟ್‌ನಲ್ಲಿ ಹರಿಪ್ರಿಯಾ-ವಸಿಷ್ಠ

ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಇಬ್ಬರ ಲವ್ ಮ್ಯಾಟರ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಈ ಬೆನ್ನಲ್ಲೇ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಜೋಡಿ ಕಾಣಿಸಿಕೊಂಡಿದೆ. ಏರ್‌ಪೋರ್ಟ್‌ನಲ್ಲಿ ಮಾಸ್ಕ್ ಧರಿಸಿಕೊಂಡು ಕೈ ಕೈ ಹಿಡಿದುಕೊಂಡು ಸಾಗುತ್ತಿರುವ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇಬ್ಬರ ಪ್ರೇಮ್ ಕಹಾನಿ ಕನ್ಫರ್ಮ್ ಎಂದು ನೆಟ್ಟಿಗರು ಹೇಳುತ್ತಿದೆ.

ಹರಿಪ್ರಿಯಾ-ವಸಿಷ್ಠ ಸಿಂಹ ದುಬೈ ಪ್ರವಾಸ

ಹರಿಪ್ರಿಯಾ-ವಸಿಷ್ಠ ಸಿಂಹ ದುಬೈ ಪ್ರವಾಸ

ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಇಬ್ಬರೂ ಈಗಾಗಲೇ ಮದುವೆಗೆ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಡಿಸೆಂಬರ್ ಕೊನೆಯಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಳ್ಳಬಹುದು ಎಂಬ ಗುಸುಗುಸು ಕೂಡ ಕೇಳಿ ಬರುತ್ತಿದೆ. ನಿಶ್ಚಿತಾರ್ಥಕ್ಕೆ ಈ ಜೋಡಿ ರೆಡಿಯಾಗುತ್ತಿದ್ದು, ಅದಕ್ಕೆ ದುಬೈನಲ್ಲಿ ಶಾಪಿಂಗ್ ಮಾಡಿ ಬಂದಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಆ ವೇಳೆ ಏರ್‌ಪೋರ್ಟ್‌ನಲ್ಲಿ ತೆಗೆದ ಫೋಟೊಗಳು ಅಂತಾನೂ ಚರ್ಚೆಯಾಗುತ್ತಿದೆ.

ಸಿನಿಮಾಗಳಲ್ಲಿ ಈ ಜೋಡಿ ಸಿಕ್ಕಾಪಟ್ಟೆ ಬ್ಯುಸಿ

ಸಿನಿಮಾಗಳಲ್ಲಿ ಈ ಜೋಡಿ ಸಿಕ್ಕಾಪಟ್ಟೆ ಬ್ಯುಸಿ

ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಸ್ಯಾಂಡಲ್‌ವುಡ್‌ನ ಬಹುಬೇಡಿಕೆ ಸ್ಟಾರ್‌ಗಳು. ಈಗಾಗಲೇ ಹರಿಪ್ರಿಯಾ ಕೈಯಲ್ಲಿ ನಾಲ್ಕೈದು ಸಿನಿಮಾಗಳಿವೆ. ಅವುಗಳಲ್ಲಿ 'ಬೆಲ್‌ ಬಾಟಂ 2' ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಆದರೆ, ಇನ್ನೂ ಈ ಸಿನಿಮಾ ಸೆಟ್ಟೇರಿಲ್ಲ. ವಸಿಷ್ಠ ಸಿಂಹ ಕೈಯಲ್ಲೂ 'ಕಾಲಚಕ್ರ' ಹಾಗೂ 'ಪಂಟ' ಸಿನಿಮಾಗಳಿವೆ. ಹೀಗಾಗಿ ಈಗಲೇ ಮದುವೆ ಆಗುತ್ತಾರಾ? ಅಥವಾ ಕೇವಲ ಎಂಗೇಜ್ಮೆಂಟ್ ಮಾಡಿಕೊಳ್ಳುತ್ತಾರಾ? ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.

More from Filmibeat

English summary
Haripriya And Vasishta Simha Together Seen In Bengaluru International Airport, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X