ಬಾಯ್ ಫ್ರೆಂಡ್ ಯಾರು? SSLC ಮಾರ್ಕ್ಸ್ ಎಷ್ಟು? ಬಳಸುವ ಸೋಪ್ ಯಾವುದು? ಅಭಿಮಾನಿಗಳ ಪ್ರಶ್ನೆಗೆ ಹರಿಪ್ರಿಯಾ ಉತ್ತರ

ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿಯರಲ್ಲಿ ಹರಿಪ್ರಿಯಾ ಕೂಡ ಒಬ್ಬರು. ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯಲ್ಲೂ ಮಿಂಚಿರುವ ನಟಿ ಹರಿಪ್ರಿಯಾ ಸ್ಯಾಂಡಲ್ ವುಡ್ ನಲ್ಲಿ ಸದ್ಯ ಕೈತುಂಬ ಸಿನಿಮಾಗಳನ್ನು ಇಟ್ಟುಕೊಂಡಿದ್ದಾರೆ. ಬೆಲ್ ಬಾಟಂ ಸಿನಿಮಾ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದ ಹರಿಪ್ರಿಯಾ ಇತ್ತೀಚಿಗೆ ರಿಲೀಸ್ ಆದ ಬಿಚ್ಚುಗತ್ತಿ ಸಿನಿಮಾ ಮೂಲಕ ವಿಭಿನ್ನ ಪಾತ್ರದಲ್ಲಿ ಮಿಂಚಿದ್ದರು.

ಅಂದ್ಹಾಗೆ ಹರಿಪ್ರಿಯಾ ಸದ್ಯ ಎಲ್ಲರಂತೆ ಮನೆಯಲ್ಲಿ ಕಾಲಕಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ವೀಟ್ ಆಗಿರುವ ಹರಿಪ್ರಿಯಾ ಅಭಿಮಾನಿಗಳ ಜೊತೆ ಸಂವಾದ ಮಾಡುತ್ತಿದ್ದಾರೆ. ಇತ್ತೀಚಿಗೆ ಹರಿಪ್ರಿಯಾ ಅಭಿಮಾನಿಗಳಿಗೆ "ಪ್ರಶ್ನೆಗಳನ್ನು ಕೇಳಿ ಉತ್ತರ ನೀಡುತ್ತೇನೆ" ಎಂದು ಹೇಳಿದ್ದರು. ನಟಿಯರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಯಾರಿಗೆ ಇರಲ್ಲ ಹೇಳಿ? ಹರಿಪ್ರಿಯಾ ಹೀಗೆ ಹೇಳುತ್ತಿದ್ದಂತೆ ಅಭಿಮಾನಿಗಳಿಂದ ಪ್ರಶ್ನೆಗಳ ಸುರಿಮಳೆಯೇ ಹರಿದು ಬಂದಿದೆ. ಮುಂದೆ ಓದಿ..

ಅಭಿಮಾನಿಗಳಿಂದ ಹರಿಪ್ರಿಯಾಗೆ ಪ್ರಶ್ನೆ

ಹರಿಪ್ರಿಯಾ ತನ್ನ ಬ್ಲಾಗ್ ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ಅಭಿಮಾನಿಗಳಿಂದ ಸಾಕಷ್ಟು ಕ್ರೇಜಿ ಪ್ರಶ್ನೆಗಳು ಹರಿದು ಬಂದಿದ್ದು, ಕೆಲವು ಆಯ್ದ ಪ್ರಶ್ನೆಗಳಿಗೆ ಹರಿಪ್ರಿಯಾ ಉತ್ತರಿಸಿದ್ದಾರೆ. ಅಭಿಮಾನಿಗಳ ಪ್ರಶ್ನೆಗಳಿಂದ ಹರಿಪ್ರಿಯ ಬಗ್ಗೆ ಗೊತ್ತಿರದ ಒಂದಿಷ್ಟು ಇಂಟ್ರಸ್ಟಿಂಗ್ ಸಂಗತಿಗಳು ಬಹಿರಂಗವಾಗಿದೆ.

SSLC ಮಾರ್ಕ್ಸ್ ಎಷ್ಟು? ನೆಚ್ಚಿನ ಸಬ್ಜೆಕ್ಟ್ ಯಾವುದು?

SSLC ಮಾರ್ಕ್ಸ್ ಎಷ್ಟು? ನೆಚ್ಚಿನ ಸಬ್ಜೆಕ್ಟ್ ಯಾವುದು?

ಹರಿಪ್ರಿಯಾಗೆ ಅಭಿಮಾನಿಯೊಬ್ಬರು ನಿಮ್ಮ 10ನೇ ತರಗತಿ ಪರ್ಸೆಂಟೇಜ್ ಎಷ್ಟು? ಎಂದು ಕೇಳಿದ್ದಾರೆ. ಇದಕ್ಕೆ ಹರಿಪ್ರಿಯಾ ಒಟ್ಟು ಮಾರ್ಕ್ಸ್ "470, 70.20" ಪರ್ಸೆಂಟೇಜ್ ಎಂದು ಉತ್ತರಿಸಿದ್ದಾರೆ. ಇನ್ನೂ ಹರಿಪ್ರಿಯಾ ಇಷ್ಟವಾದ ಸಬ್ಜೆಕ್ಟ್ "ಮ್ಯಾಥಮಿಟಿಕ್ಸ್" ಎಂದು ಹೇಳಿದ್ದಾರೆ.

ಇಂಟಿಮೇಟ್ ದೃಶ್ಯ ಮಾಡುವಾಗ ಏನನಿಸುತ್ತೆ?

ಇಂಟಿಮೇಟ್ ದೃಶ್ಯ ಮಾಡುವಾಗ ಏನನಿಸುತ್ತೆ?

ಇಂಟಿಮೇಟ್ ದೃಶ್ಯ ಮಾಡುವಾಗ ಏನನಿಸುತ್ತೆ? ಆ ದೃಶ್ಯಗಳನ್ನು ನೋಡಿ ನಿಮ್ಮ ಕುಟುಂಬ ಕೋಪ ಮಾಡಿಕೊಂಡಿದ್ದಾರಾ? ಎಂದು ಮತ್ತೊಬ್ಬ ಅಭಿಮಾನಿ ಕೇಳಿದ್ದಾರೆ. ಇದಕ್ಕೆ ಹರಿಪ್ರಿಯಾ, "ನಾನು ಮತ್ತು ತಾಯಿ ಇಬ್ಬರು ಕಥೆಯನ್ನು ಕೇಳುತ್ತೇವೆ. ಶೂಟಿಂಗ್ ಪ್ರಾರಂಭವಾಗುವ ಮೊದಲೆ ಕುಟುಂಬಕ್ಕೆ ಕಥೆ ಗೊತ್ತಿರುತ್ತೆ. ನಾನು ಅಂತಹ ಇಂಟಿಮೇಟ್ ದೃಶ್ಯಗಳನ್ನು ಮಾಡಿಲ್ಲ. ಕಥೆಗೆ ಅಗತ್ಯವಿದ್ದರೆ ಮಾಡುತ್ತೇನೆ. ಆದರೆ ಎಲ್ಲದಕ್ಕೂ ಒಂದು ಮಿತಿಯನ್ನು ಕಾಯ್ದುಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.

ಹರಿಪ್ರಿಯಾ ಹೈಟ್ ಎಷ್ಟು, ಅವರ ಬಳಸುವ ಸೋಪ್ ಯಾವುದು?

ಹರಿಪ್ರಿಯಾ ಹೈಟ್ ಎಷ್ಟು, ಅವರ ಬಳಸುವ ಸೋಪ್ ಯಾವುದು?

ಅಭಿಮಾನಿಗಳು ಸಾಕಷ್ಟು ಕ್ರೇಜಿ ಪ್ರಶ್ನೆಗಳನ್ನು ಹರಿಪ್ರಿಯಾ ಅವರಿಗೆ ಕೇಳಿದ್ದಾರೆ. ನಿಮ್ಮ ಹೈಟ್ ಎಷ್ಟು? ಎನ್ನುವ ಪ್ರಶ್ನೆಗೆ, "5.7"ಎಂದು ಉತ್ತರಿಸಿದ್ದಾರೆ. ಇನ್ನೂ ಹರಿಪ್ರಿಯಾ ಬಳಸುವ ಸೋಪ್ ಯಾವುದು ಗೊತ್ತಾ? ಹರಿಪ್ರಿಯಾ ಮೆಡಿಮಿಕ್ಸ್ ಸೋಪ್ ಅನ್ನು ಬಳಸುತ್ತಾರಂತೆ.

ಹರಿಪ್ರಿಯಾ ಕ್ರಶ್ ಯಾರು? ಬಾಯ್ ಫ್ರೆಂಡ್ ಇದ್ದಾರಾ?

ಹರಿಪ್ರಿಯಾ ಕ್ರಶ್ ಯಾರು? ಬಾಯ್ ಫ್ರೆಂಡ್ ಇದ್ದಾರಾ?

ನಟಿಮಣಿಯರಿಗೆ ಸಹಜವಾಗಿ ಕೇಳಿ ಬರುವ ಪ್ರಶ್ನೆಗಳಿವು. ಬಾಯ್ ಫ್ರೆಂಡ್ ಇದ್ದಾರಾ, ಕ್ರಶ್ ಯಾರು ಎಂದು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದಾರೆ. ಇದಕ್ಕೆ ಹರಿಪ್ರಿಯಾ ಜಾಣತನದಿಂದ ಉತ್ತರ ನೀಡಿದ್ದಾರೆ. "ನಾನು 12 ವರ್ಷಗಳಿಂದ ನನ್ನ ಕೆಲಸದೊಂದಿಗೆ ಪ್ರೀತಿಯಲ್ಲಿದ್ದೇನೆ" ಎಂದು ಉತ್ತರಿಸಿದ್ದಾರೆ.

ಸಹಜ ಸೌಂದರ್ಯದ ರಹಸ್ಯವೇನು?

ಸಹಜ ಸೌಂದರ್ಯದ ರಹಸ್ಯವೇನು?

ಹರಿಪ್ರಿಯಾ ಸಹಜ ಸೌಂದರ್ಯದ ರಹಸ್ಯವೇನು? ಲಾಕ್ ಡೌನ್ ನಂತರ ಹರಿಪ್ರಿಯಾ ಎಲ್ಲಿಗೆ ಹೋಗುತ್ತಾರೆ? ಎಂದು ಒಬ್ಬರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಹರಿಪ್ರಿಯಾ ಸಹಜ ಸೌಂದರ್ಯಕ್ಕೆ "ಸಾಕಷ್ಟು ಸಕರಾತ್ಮಕತೆ" ಕಾರಣ ಎಂದು ಹೇಳಿದ್ದಾರೆ. ಇನ್ನೂ "ನಾವೆಲ್ಲರು ಮನೆಯಲ್ಲಿಯೆ ಇರಲು ಅಭ್ಯಾಸ ಮಾಡಿಕೊಳ್ಳುವುದು. ಹೊರಗೆ ಹೋಗಬೇಕು ಅಂತ ಅನಿಸುವುದಿಲ್ಲ" ಎಂದು ಹೇಳಿದ್ದಾರೆ.

More from Filmibeat

English summary
Actress Haripriya answered to fans Questions in social media. She reveals her interesting things.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X