ಅಭಿನಯಿಸಿದ ಸಿನಿಮಾ ನೋಡಲು ವೇಷ ಮರೆಸಿಕೊಂಡ ನಟಿ
ಸಿನಿಮಾ ಸ್ಟಾರ್ ಗಳಾದರೇ ಚೆನ್ನಾಗಿರುತ್ತೆ. ಆರಾಮಾಗಿ ಜೀವನ ಕಳೆಯಬಹುದು ಎಂದು ಸಾಕಷ್ಟು ಜನರು ಯೋಚನೆ ಮಾಡಿರುತ್ತಾರೆ. ಆದರೆ ಸ್ಟಾರ್ ಗಳ ಜೀವನದ ಕಷ್ಟ ಅವರಿಗೆ ಮಾತ್ರ ಗೊತ್ತಿರುತ್ತೆ. ಸ್ಟಾರ್ ಗಳು ಸಾಮಾನ್ಯರಂತೆ ಎಂದಿಗೂ ಜೀವನ ನಡೆಸುವುದಕ್ಕೆ ಸಾಧ್ಯವಾಗುವುದಿಲ್ಲ.
ರಸ್ತೆ ಬದಿಯಲ್ಲಿ ಆರಾಮಾಗಿ ನಡೆದು ಹೋಗುವುದಕ್ಕೆ ಸಾಧ್ಯವಾಗುವುದಿಲ್ಲ. ತಾವು ಅಭಿನಯಿಸಿದ ಸಿನಿಮಾದ ಬಗ್ಗೆ ಜನರಿಂದ ಸತ್ಯವಾದ ವಿಮರ್ಶೆ ಪಡೆಯಲು ಸಾಧ್ಯವೇ ಆಗುವುದಿಲ್ಲ. ಯಾಕೆಂದರೆ ಎಲ್ಲಾವುದಕ್ಕೂ ಅವರ ಸ್ಟಾರ್ ಪಟ್ಟ ಅಡ್ಡಿಯಾಗುತ್ತದೆ.
ಇವೆಲ್ಲವುದಕ್ಕೆ ಬ್ರೇಕ್ ಹಾಕಬೇಕು ಅಂತನೇ ಕೆಲ ಸ್ಟಾರ್ ಗಳು ಮಾರುವೇಷ ಧರಿಸಿ ನಮಗಿಷ್ಟವಾದ ಕೆಲಸವನ್ನ ಮಾಡುತ್ತಾರೆ. ಸದ್ಯ ಸ್ಯಾಂಡಲ್ ವುಡ್ ನ 'ನೀರ್ ದೋಸೆ' ಬೆಡಗಿ ಹರಿಪ್ರಿಯಾ ಮಾರುವೇಷ ಹಾಕಿಕೊಂಡಿದ್ದಾರೆ.

ನಟಿ ಹರಿಪ್ರಿಯ ಅಭಿನಯದ ಜೈಸಿಂಹ ಸಿನಿಮಾ ಬಿಡುಗಡೆ ಆಗಿ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನ ಹಲವಾರು ಚಿತ್ರಮಂದಿರದಲ್ಲಿ ಚಿತ್ರ ರಿಲೀಸ್ ಆಗಿದೆ. ಜೈಸಿಂಹ ಸಿನಿಮಾದಲ್ಲಿ ಹರಿಪ್ರಿಯಾ ಕೂಡ ಅಭಿನಯಿಸಿದ್ದು ತಮ್ಮ ಪಾತ್ರಕ್ಕೆ ಹಾಗೂ ಸಿನಿಮಾ ಬಗ್ಗೆ ಅಭಿಮಾನಿಗಳು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನ ತಿಳಿಯಲು ಮಾರುವೇಷದಲ್ಲಿ ಹರಿಪ್ರಿಯಾ ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದಾರೆ.

ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಹರಿಪ್ರಿಯಾ "ಜೈ ಸಿಂಹ ಸಿನಿಮಾ ಬಗ್ಗೆ ಪ್ರೇಕ್ಷಕರ ರೆಸ್ಪಾನ್ಸ್ ಹೇಗಿದೆ ಅನ್ನೋದನ್ನ ತಿಳಿಯಲು ಮಾರುವೇಷ ಹಾಕಿಕೊಂಡು ಲೋಕಲ್ ಥಿಯೇಟರ್ ಗೆ ಬಂದಿದ್ದೇನೆ. ಈ ಹಿಂದೆ ಈ ರೀತಿಯ ಪ್ರಯತ್ನ ಮಾಡಿಲ್ಲ. ಆದರೆ ಖುಷಿ ಎನ್ನಿಸುತ್ತಿದೆ. ಇನ್ನೂ ಮುಂದೆ ಇದೇ ರೀತಿಯಲ್ಲಿ ಬಂದು ಸಿನಿಮಾ ನೋಡಬೇಕೆಂದು ಆಸೆ ಆಗುತ್ತಿದೆ" ಎಂದು ಟ್ವಿಟ್ ಮಾಡಿದ್ದಾರೆ.


Click it and Unblock the Notifications











