ಅಭಿಮಾನಿಗಳಿಗೆ ಹೊಸ ಸುದ್ದಿ ಕೊಡ್ತಾರಂತೆ ಹರಿಪ್ರಿಯಾ
Recommended Video

ಚಂದನವನದಲ್ಲಿ ಚಿಕ್ಕಬಳ್ಳಾಪುರದ ಚೆಲ್ವಿ, ಸ್ಯಾಂಡಲ್ ವುಡ್ ಬ್ಯೂಟಿ ಕ್ವೀನ್ ಅಂತಾನೇ ಫೇಮಸ್ ಆಗಿರುವ ನೀರ್ ದೋಸೆ ಬೆಡಗಿ ಹರಿಪ್ರಿಯಾ ಅಭಿಮಾನಿಗಳಿಗೆ ಹೊಸ ಸುದ್ದಿ ಕೊಡ್ತಾರಂತೆ. ಇಂತದೊಂದು ಸುದ್ದಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಹರಿಪ್ರಿಯಾ ಅಂತಹ ಸುದ್ದಿ ಏನು ಹೇಳುತ್ತಾರೆ ಅನ್ನುವುದು ಅಭಿಮಾನಿಗಳ ಮಧ್ಯೆ ಚರ್ಚೆ ಆಗುತ್ತಿದೆ. ನಟಿ ಹರಿಪ್ರಿಯಾ ತಮ್ಮ ಹೊಸ ಲುಕ್ ನಲ್ಲಿರುವ ಎರಡು ಪೋಟೋಗಳನ್ನ ಟ್ವಿಟ್ಟರ್ ನಲ್ಲಿ ಅಪ್ಡೇಟ್ ಮಾಡಿದ್ದಾರೆ. "ಒಂದು ಹೊಸ ವಿಚಾರ ನಿಮಗೆಲ್ಲಾ ಹೇಳಬೇಕು, ಆದರೆ ಈಗಲೇ ಹೇಳುವಂತಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ಕಂಪ್ಲೀಟ್ ಮಾಹಿತಿ ಕೊಡುತ್ತೇನೆ' ಎಂದಿದ್ದಾರೆ.

ಸದ್ಯ ಹರಿಪ್ರಿಯಾ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಬೆಲ್ ಬಾಟಂ, ಕುರುಕ್ಷೇತ್ರ ಚಿತ್ರಗಳಲ್ಲಿ ವಿಭಿನ್ನ ಪಾತ್ರವನ್ನು ನಿರ್ವಹಿಸಿದ್ದಾರೆ. ಮಹಿಳಾ ಪ್ರಧಾನ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇವುಗಳ ಜೊತೆಯಲ್ಲಿ ಲೈಫ್ ಜೊತೆ ಒಂದ್ ಸೆಲ್ಫಿ, ಕಥಾ ಸಂಗಮ, ಸೂಜಿದಾರ ಇನ್ನು ಅನೇಕ ಚಿತ್ರಗಳಲ್ಲಿ ಹರಿಪ್ರಿಯ ಅಭಿನಯವಿದೆ.

ಇಷ್ಟು ಸಿನಿಮಾಗಳಿಗೆ ಅಭಿಮಾನಿಗಳು ಕಾದಿರುವಾಗ ಇವುಗಳ ಮಧ್ಯೆ ಹರಿಪ್ರಿಯಾ ಕೊಡಲಿರುವ ಹೊಸ ಸುದ್ದಿ ಯಾವುದಿರಬಹುದು ಎನ್ನುವುದೇ ಕೌತುಕ, ಅದು ಸಿನಿಮಾಗೆ ಸಂಬಂಧ ಪಟ್ಟಿದೆ ಅಥವಾ ವಯಕ್ತಿಕ ಜೀವನದ ಬಗ್ಗೆ ಏನಾದರು ಸುದ್ದಿ ಹೇಳುತ್ತಾರಾ? ಒಟ್ಟಾರೆ ಇದನ್ನ ಹರಿಪ್ರಿಯಾನೇ ಹೇಳಬೇಕಾಗಿದೆ.


Click it and Unblock the Notifications











