twitter
    For Quick Alerts
    ALLOW NOTIFICATIONS  
    For Daily Alerts

    ಅಭಿಮಾನಿಗಳಿಗೆ ಹೊಸ ಸುದ್ದಿ ಕೊಡ್ತಾರಂತೆ ಹರಿಪ್ರಿಯಾ

    By Pavithra
    |

    Recommended Video

    ಸಿಹಿ ಸುದ್ದಿ ಕೊಡ್ತಾರಂತೆ ನೀರ್ ದೋಸೆ ಬೆಡಗಿ ಹರಿಪ್ರಿಯ | Filmibeat Kannada

    ಚಂದನವನದಲ್ಲಿ ಚಿಕ್ಕಬಳ್ಳಾಪುರದ ಚೆಲ್ವಿ, ಸ್ಯಾಂಡಲ್ ವುಡ್ ಬ್ಯೂಟಿ ಕ್ವೀನ್ ಅಂತಾನೇ ಫೇಮಸ್ ಆಗಿರುವ ನೀರ್ ದೋಸೆ ಬೆಡಗಿ ಹರಿಪ್ರಿಯಾ ಅಭಿಮಾನಿಗಳಿಗೆ ಹೊಸ ಸುದ್ದಿ ಕೊಡ್ತಾರಂತೆ. ಇಂತದೊಂದು ಸುದ್ದಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

    ಹರಿಪ್ರಿಯಾ ಅಂತಹ ಸುದ್ದಿ ಏನು ಹೇಳುತ್ತಾರೆ ಅನ್ನುವುದು ಅಭಿಮಾನಿಗಳ ಮಧ್ಯೆ ಚರ್ಚೆ ಆಗುತ್ತಿದೆ. ನಟಿ ಹರಿಪ್ರಿಯಾ ತಮ್ಮ ಹೊಸ ಲುಕ್ ನಲ್ಲಿರುವ ಎರಡು ಪೋಟೋಗಳನ್ನ ಟ್ವಿಟ್ಟರ್ ನಲ್ಲಿ ಅಪ್ಡೇಟ್ ಮಾಡಿದ್ದಾರೆ. "ಒಂದು ಹೊಸ ವಿಚಾರ ನಿಮಗೆಲ್ಲಾ ಹೇಳಬೇಕು, ಆದರೆ ಈಗಲೇ ಹೇಳುವಂತಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ಕಂಪ್ಲೀಟ್ ಮಾಹಿತಿ ಕೊಡುತ್ತೇನೆ' ಎಂದಿದ್ದಾರೆ.

    Haripriya giving new news to her fans

    ಚುಕ್ಕಿ ರಂಗೋಲಿ ಬಿಡಿಸಿದ ಚಿಕ್ಕಬಳ್ಳಾಪುರದ ಚೆಲ್ವಿ ಹರಿಪ್ರಿಯಾಚುಕ್ಕಿ ರಂಗೋಲಿ ಬಿಡಿಸಿದ ಚಿಕ್ಕಬಳ್ಳಾಪುರದ ಚೆಲ್ವಿ ಹರಿಪ್ರಿಯಾ

    ಸದ್ಯ ಹರಿಪ್ರಿಯಾ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಬೆಲ್ ಬಾಟಂ, ಕುರುಕ್ಷೇತ್ರ ಚಿತ್ರಗಳಲ್ಲಿ ವಿಭಿನ್ನ ಪಾತ್ರವನ್ನು ನಿರ್ವಹಿಸಿದ್ದಾರೆ. ಮಹಿಳಾ ಪ್ರಧಾನ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇವುಗಳ ಜೊತೆಯಲ್ಲಿ ಲೈಫ್ ಜೊತೆ ಒಂದ್ ಸೆಲ್ಫಿ, ಕಥಾ ಸಂಗಮ, ಸೂಜಿದಾರ ಇನ್ನು ಅನೇಕ ಚಿತ್ರಗಳಲ್ಲಿ ಹರಿಪ್ರಿಯ ಅಭಿನಯವಿದೆ.

    Haripriya giving new news to her fans

    ಇಷ್ಟು ಸಿನಿಮಾಗಳಿಗೆ ಅಭಿಮಾನಿಗಳು ಕಾದಿರುವಾಗ ಇವುಗಳ ಮಧ್ಯೆ ಹರಿಪ್ರಿಯಾ ಕೊಡಲಿರುವ ಹೊಸ ಸುದ್ದಿ ಯಾವುದಿರಬಹುದು ಎನ್ನುವುದೇ ಕೌತುಕ, ಅದು ಸಿನಿಮಾಗೆ ಸಂಬಂಧ ಪಟ್ಟಿದೆ ಅಥವಾ ವಯಕ್ತಿಕ ಜೀವನದ ಬಗ್ಗೆ ಏನಾದರು ಸುದ್ದಿ ಹೇಳುತ್ತಾರಾ? ಒಟ್ಟಾರೆ ಇದನ್ನ ಹರಿಪ್ರಿಯಾನೇ ಹೇಳಬೇಕಾಗಿದೆ.

    ಮಹಿಳಾ ಪ್ರಧಾನ ಥ್ರಿಲ್ಲರ್ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ನಟಿ ಹರಿಪ್ರಿಯಾಮಹಿಳಾ ಪ್ರಧಾನ ಥ್ರಿಲ್ಲರ್ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ನಟಿ ಹರಿಪ್ರಿಯಾ

    English summary
    Kannada actress Haripriya giving new news to her fans, she uploaded photos on Twitter account about it. noe Haripriya busy with lots of kannada movies.
    Thursday, April 19, 2018, 17:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X