ತಮ್ಮ ಚಿತ್ರದ ನಾಯಕಿಯನ್ನೇ ಜೋಡಿ ಮಾಡಿಕೊಂಡ ನಿರ್ದೇಶಕ
'ಟೋನಿ' ಹಾಗೂ 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರಗಳನ್ನ ನಿರ್ದೇಶನ ಮಾಡಿದ ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವ ಡೈರೆಕ್ಟರ್ ಜಯತೀರ್ಥ ಅವರ ಹೊಸ ಸಿನಿಮಾ ಬೆಲ್ ಬಾಟಂ ಗೆ ನಾಯಕಿ ಆಯ್ಕೆ ಆಗಿದ್ದಾರೆ.
ಬೆಲ್ ಬಾಟಂ ಚಿತ್ರದಲ್ಲಿ ರಿಷಬ್ ಶೆಟ್ಟಿ ನಾಯಕನಾಗಿ ಅಭಿನಯಿಸುತ್ತಿದ್ದು ಅವರ ಜೋಡಿಯಾಗಿ ಹರಿಪ್ರಿಯಾ ಆಕ್ಟ್ ಮಾಡುತ್ತಿದ್ದಾರೆ. ವಿಶೇಷ ಅಂದರೆ ರಿಕ್ಕಿ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಹರಿಪ್ರಿಯ ಅವರನ್ನ ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದ್ದರು. ರಕ್ಷಿತ್ ಹಾಗೂ ಹರಿಪ್ರಿಯ ಅವರಿಗೆ ರಿಷಬ್ ಆಕ್ಷನ್ ಕಟ್ ಹೇಳಿದ್ದರು. ಆದರೆ ಈಗ ಅದೇ ನಿರ್ದೇಶಕನ ಜೊತೆ ಹರಿಪ್ರಿಯ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.
ಈ ಹಿಂದೆ ಚಿತ್ರದ ವಿಭಿನ್ನವಾದ ಪೋಸ್ಟರ್ ಡಿಸೈನ್ ಮಾಡಿ ಟೈಟಲ್ ಕಂಡು ಹಿಡಿಯುವಂತೆ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದ್ದರು ನಿರ್ದೇಶಕರು. ಅದೇ ರೀತಿಯಲ್ಲಿ ಸಿನಿಮಾದ ನಾಯಕಿಯ ಹೆಸರನ್ನು ಹುಡುಕಲು ಅಭಿಮಾನಿಗಳಿಗೆ ಸೂಚಿಸಿದ್ದರು. ಅದರಂತೆ ಈಗ ಚಿತ್ರದ ನಾಯಕಿ ಹರಿಪ್ರಿಯ ಎಂದು ರಿವಿಲ್ ಆಗಿದೆ.

ಜನವರಿ 28ರಂದು ಸಿನಿಮಾದ ಮಹೂರ್ತ ಮಾಡಲು ಚಿತ್ರತಂಡ ಸಿದ್ದತೆಗಳನ್ನ ಮಾಡಿಕೊಂಡಿದೆ. ಬೆಲ್ ಬಾಟಂ ಪತ್ತೇದಾರಿ ಮಾದರಿಯಲ್ಲಿ ಚಿತ್ರದ ಕಥೆ ಸಾಗಲಿದ್ದು ಸಿನಿಮಾದ ಎಲ್ಲಾ ಪಾತ್ರಗಳು 80ರ ಶೈಲಿಯಲ್ಲಿಯೇ ಇರಲಿದೆಯಂತೆ.

ಶಿವಮೊಗ್ಗ, ಸಾಗರ, ರಿಪ್ಪನ್ ಪೇಟೆ ಸುತ್ತಾ ಮುತ್ತಾ ಸಿನಿಮಾದ ಚಿತ್ರೀಕರಣ ಮಾಡಲು ಸಿದ್ದತೆ ಮಾಡಿಕೊಂಡಿದ್ದು ಈ ಹಿಂದೆ ಜಯತೀರ್ಥ ನಿರ್ದೇಶನದ ಬುಲೆಟ್ ಬಸ್ಯಾ ಚಿತ್ರದಲ್ಲಿ ಹರಿಪ್ರಿಯ ಅಭಿನಯಿಸಿದ್ದರು.


Click it and Unblock the Notifications











