ಕನ್ನಡದ ಈ ನಟಿಗೆ ಶ್ರೀದೇವಿ ಬಯೋಪಿಕ್ ಮಾಡುವ ಆಸೆಯಂತೆ

ಇತ್ತೀಚಿನ ದಿನಗಳಲ್ಲಿ ಬಯೋಪಿಕ್ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಬಾಲಿವುಡ್ ನಲ್ಲಿ ಹೆಚ್ಚು ಬಯೋಪಿಕ್ ಸಿನಿಮಾಗಳು ತೆರೆಗೆ ಬರುತ್ತಿವೆ. ಬಯೋಪಿಕ್ ವಿಚಾರವಾಗಿ ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚು ಚರ್ಚೆಯಾದ ನಟಿ ಅಂದ್ರೆ ಬಾಲಿವುಡ್ ನ ಖ್ಯಾತ ನಟಿ ದಿವಂಗತ ಶ್ರೀದೇವಿ.

ಹೌದು, ಶ್ರೀದೇವಿ ಜೀವನ ಚರಿತ್ರೆಯನ್ನು ತೆರೆ ಮೇಲೆ ತರಲು ಅನೇಕರು ಹರ ಸಾಹಸ ಪಡುತ್ತಿದ್ದಾರೆ. ಆದ್ರೆ ಸಾಧ್ಯವಾಗುತ್ತಿಲ್ಲ. ಇನ್ನೇನು ಶ್ರೀದೇವಿ ಬಯೋಪಿಕ್ ಸೆಟ್ಟೇರಿತು ಪತಿ ಬೋನಿಕಪೂರ್ ನಿರ್ಮಾಣ ಮಾಡುತ್ತಿದ್ದಾರೆ ಎನ್ನುವಷ್ಟೋತ್ತಿಗೆ ಅದೂ ಅಲ್ಲಿಗೆ ನಿಂತುಹೋಗಿದೆ. ಒಂದು ವೇಳೆ ಶ್ರೀದೇವಿ ಬಯೋಪಿಕ್ ಸೆಟ್ಟೇರಿದ್ರೆ ಶ್ರೀದೇವಿ ಪಾತ್ರದಲ್ಲಿ ಕಾಣಿಸಿಕೊಳ್ಳಲು ಅನೇಕರು ನಟಮಣಿಯರು ಕ್ಯೂನಿಂತಿದ್ದಾರೆ.

ಇದೆ ಸಾಲಿಗೀಗ ಕನ್ನಡ ನಟಿಯೊಬ್ಬರು ಸೇರ್ಪಡೆಯಾಗಿದ್ದಾರೆ. 'ಬೆಲ್ ಬಾಟಂ' ಶತದಿನೋತ್ಸವದ ಸಂಭ್ರಮದಲ್ಲಿರುವ ನಟಿ ಹರಿಪ್ರಿಯಾ ಶ್ರೀದೇವಿ ಬಯೋಪಿಕ್ ನಲ್ಲಿ ಅಭಿನಯಿಸುವ ಆಸೆ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ ಹರಿಪ್ರಿಯಾ ಶ್ರೀದೇವಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಆಸೆ ಇದೆ ಎಂದಿದ್ದಾರೆ.

Haripriya has expressed her desire to play Sridevi biopic

ಇತ್ತೀಚಿಗೆ ರಿಲೀಸ್ ಆದ 'ಡಾಟರ್ ಆಫ್ ಪಾರ್ವತಮ್ಮ' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕ ಹಿನ್ನಲೆಯಲ್ಲಿ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಹರಿಪ್ರಿಯಾ ಫೇಸ್ ಬುಕ್ ಲೈವ್ ಬಂದಿದ್ದರು. ಈ ಸಂದರ್ಭದಲ್ಲಿ ಅಭಿಮಾನಿಯೋಬ್ಬರು ಬಯೋಪಿಕ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಿ ಎಂದು ಹೇಳಿದಕ್ಕೆ ಹರಿಪ್ರಿಯಾ ಶ್ರೀದೇವಿ ಬಯೋಪಿಕ್ ಮಡುವ ಆಸೆಯನ್ನು ಹೊರಹಾಕಿದ್ದಾರೆ.

ಶ್ರೀದೇವಿ ಅವರ ಬಗ್ಗೆ ಚೆನ್ನಾಗಿ ತಿಳಿದುಕೊಂಡವರು ಅವರ ಪಯಣವನ್ನು ಅರ್ಥಮಾಡಿಕೊಂಡವರು ಉತ್ತಮ ಕತೆ ಬರೆದರೆ ಆಗ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಶ್ರೀದೇವಿ ಬಯೋಪಿಕ್ ಮಾಡುವುದಾಗಿ ತೆಲುಗು ನಿರ್ದೇಶಕ ರಾಮ್ ಗೋಪಾಲ್ ವರ್ಮ ಸಹ ಹೇಳಿದ್ದರು. ಕುತೂಹಲ ಮೂಡಿಸಿದೆ ನಟಿ ಶ್ರೀದೇವಿಯ ಬಯೋಪಿಕ್.

More from Filmibeat

English summary
Kannada Actress Haripriya has expressed her desire to play Sridevi biopic. Harperia is currently happy with the 100 days of Bell Batam film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X