ವಂಡರ್ ಲಾ ವೇವ್ ರೈಡ್ & ಡ್ರಾಪ್ ಲೂಪ್ ಗೆ ಚಾಲನೆ ನೀಡಿದ ನಟಿ ಹರಿಪ್ರಿಯ
Recommended Video
ದೇಶದ ಖ್ಯಾತ ಅಮ್ಯೂಸ್ ಮೆಂಟ್ ಪಾರ್ಕ್ ಎಂಬ ಹೆಗ್ಗಳಿಕೆ ಪಡೆದಿರುವ ಬಿಡದಿಯ ವಂಡರ್ ಲಾ ಪಾರ್ಕ್ ನಲ್ಲಿ ಮೋಜು ಪ್ರಿಯರಿಗೆ ಅದ್ಭುತ ಥ್ರೀಲ್ ನೀಡುವ ನಿಟ್ಟಿನಲ್ಲಿ ಹೊಸದಾಗಿ ಎರಡು ರೈಡ್ ಗಳನ್ನ ಆರಂಭಿಸಲಾಗಿದೆ.
ಕನ್ನಡದ ಖ್ಯಾತ ನಟಿ ಹರಿಪ್ರಿಯಾ ಆ ಎರಡು ಹೊಸ ರೈಡ್ ಗಳನ್ನ ಇಂದು ಉದ್ಘಾಟನೆ ಮಾಡಿದರು. 360 ಡಿಗ್ರಿಯಲ್ಲಿ ತಿರುಗುವ ವೇವ್ ರೈಡರ್ ಹಾಗೂ ಅದ್ಭುತ ಥ್ರಿಲ್ ನೀಡುವ ಡ್ರಾಪ್ ಲೂಪ್ ವಾಟರ್ ರೈಡ್ ಎಂಬ ಎರಡು ಹೊಚ್ಚ ಹೊಸ ಗೇಮ್ ಗಳನ್ನ ಹರಿಪ್ರಿಯಾ ಉದ್ಘಾಟನೆ ಮಾಡಿ, ವೇವ್ ರೈಡ್ ರ್ ಗೇಮ್ ನ್ನ ಸ್ವತಃ ಹರಿಪ್ರಿಯಾ ಹಾಡಿ ಎಂಜಾಯ್ ಮಾಡಿದರು.

ಈ ವೇಳೆ ನಟಿ ಹರಿಪ್ರಿಯಾ ಅವರಿಗೆ ವಂಡರ್ ಲಾ ಎಂಡಿ ಅರುಣ್ ಚಿಟ್ಟಿಲಪಲ್ಲಿ ಉಪಸ್ಥಿತರಿದ್ರು. ಬಳಿಕ ಮಾತನಾಡಿದ ನಟಿ ಹರಿಪ್ರಿಯಾ 'ವಂಡರ್ ಲಾ ಒಂದು ಅದ್ಭುತ ಪ್ರವಾಸಿತಾಣ, ಒಂದು ದಿನ ಕಾಲ ಕಳೆಯಲು ವಂಡರ್ ಲಾ ಉತ್ತಮ ಜಾಗವೆನಿಸಿದೆ. ಇಲ್ಲಿರುವ 66 ಗೇಮ್ ಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಇಲ್ಲಿ ಅತ್ಯಂತ ವಿಶಿಷ್ಠವಾದ ರೈಡ್ ಗಳಿವೆ ಅಷ್ಟೆ ಸುರಕ್ಷತೆಯನ್ನ ಹೊಂದಿವೆ' ಎಂದು ಹೇಳಿದರು.
ಇನ್ನು ವಂಡರ್ ಲಾ ಎಂಡಿ ಅರುಣ್ ಮಾತನಾಡಿ ನಾವು ಇಂದು ನೂತನ ಎರಡು ರೈಡ್ ಗಳನ್ನ ಆರಂಭಿಸಿದ್ದೇವೆ ಈ ಎರಡು ರೈಡ್ ಗಳು ವಿದೇಶದಿಂದ ತರಿಸಿದ್ದಾಗಿದೆ, ಈ ಎರಡು ಹೊಚ್ಚ ಹೊಸ ರೈಡ್ ಗಳು ಅಧ್ಬುತ ಹಾಗೂ ಫ್ಯಾಮಿಲಿ ರೈಡ್ ಗಳಾಗಿವೆ ಅಂತಾ ಹೇಳಿದರು.


Click it and Unblock the Notifications











