ಚಳಿಗಾಲದಲ್ಲಿ ಹರಿಪ್ರಿಯಾಗೆ ಅಮ್ಮ ನೀಡಿದ ವಿಶೇಷ ಉಡುಗೊರೆ
Recommended Video
ಬೇಸಿಗೆಕಾಲ, ಮಳೆಗಾಲ, ಚಳಿಗಾಲಕ್ಕೆ ತಕ್ಕಂತೆ ಉಡುಪುಗಳನ್ನು ಬಳಸುವುದು ಮನುಷ್ಯನ ಸಹಜಗುಣ. ಅದರಲ್ಲೂ ಚಳಿಗಾಲದಲ್ಲಿ ಚಳಿಯನ್ನು ನಿಯಂತ್ರಿಸುವಂತಹ ಹೊದಿಕೆ, ಕಂಬಳಿಗಳನ್ನು ಬಳಸಲಾಗುತ್ತೆ. ಕೆಲವರು ಮಾರುಕಟ್ಟೆಯಲ್ಲಿ ಖರೀದಿಸಿದರೆ, ಮತ್ತೆ ಕೆಲವರು ತಾವೇ ಕೈಯಾರೆ ಸಿದ್ಧಪಡಿಸುವ ಉದಾಹರಣೆಗಳು ಉಂಟು.
ಕನ್ನಡ ನಟಿ ಹರಿಪ್ರಿಯಾ ಅವರ ತಾಯಿ ತಮ್ಮ ಮಗಳಿಗಾಗಿ ವಿಶೇಷವಾದ ಕಂಬಳಿಯೊಂದನ್ನು ತಯಾರಿಸಿದ್ದಾರೆ. ಮತ್ಸ್ಯಕನ್ಯೆ ರೀತಿ ಕಲರ್ ಫುಲ್ ಆಗಿರುವ ಹೊದಿಕೆಯನ್ನು ಕೈಯಾರೆ ಸಿದ್ದ ಮಾಡಿದ್ದಾರೆ. ಚಳಿಯನ್ನು ನಿಯಂತ್ರಿಸಲು, ಚಳಿಗಾಲಕ್ಕೆ ಸೂಕ್ತವಾಗುವಂತೆ ಹೊದಿಕೆ ಇದಾಗಿದೆ ಎಂದು ಸ್ವತಃ ಹರಿಪ್ರಿಯಾ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
''ಹೆಚ್ಚು ಶ್ರಮ ಮತ್ತು ಸಮಯ ತೆಗೆದುಕೊಂಡು ನನಗಾಗಿ ಇದನ್ನು ಅಮ್ಮ ತಯಾರಿಸಿದ್ದಾರೆ. ಅಮ್ಮನಿಗೆ ಧನ್ಯವಾದ. ಯಾವುದು ಉತ್ತಮ ಎಂದು ಅಮ್ಮನಿಗೆ ತಿಳಿದಿದೆ ಹಾಗೂ ಅಮ್ಮನೇ ಅತ್ಯುತ್ತಮ'' ಎಂದು ಖುಷಿ ಹಂಚಿಕೊಂಡಿದ್ದಾರೆ ಹರಿಪ್ರಿಯಾ.

ಸ್ವತಃ ಹರಿಪ್ರಿಯಾ ಅವರೇ ಹೇಳಿಕೊಂಡಿರುವ ಪ್ರಕಾರ, ತಾವು ಅಮ್ಮನ ಮುದ್ದು ಮಗಳು. ಹರಿಪ್ರಿಯಾ ಕುರಿತು ಅವರ ತಾಯಿ ಹೆಚ್ಚು ಗಮನ ಹರಿಸುತ್ತಾರೆ ಎನ್ನುವುದು ಇಡೀ ಇಂಡಸ್ಟ್ರಿಗೆ ಗೊತ್ತಿದೆ. ಊಟ, ನಿದ್ದೆ, ಬಟ್ಟೆ, ಸಿನಿಮಾ, ಶೂಟಿಂಗ್ ಎಲ್ಲದರಲ್ಲೂ ತಾಯಿಯ ಪಾತ್ರವಿದೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಸದ್ಯ ಐತಿಹಾಸಿಕ ಚಿತ್ರ 'ಬಿಚ್ಚುಗತ್ತಿ'ಯಲ್ಲಿ ನಟಿಸುತ್ತಿದ್ದಾರೆ. ಬರಗೂರು ರಾಮಚಂದ್ರಪ್ಪ ನಿರ್ದೇಶನದ 'ಅಮೃತಮತಿ' ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ತಮಿಳಿನ 'ಕಪಲ್' ಸಿನಿಮಾದ ಕನ್ನಡ ರೀಮೇಕ್ ನಲ್ಲೂ ಹರಿಪ್ರಿಯಾ ಬಣ್ಣ ಹಚ್ಚುತ್ತಿದ್ದಾರೆ.


Click it and Unblock the Notifications











