ರಾಜ್-ವಿಷ್ಣುಗೆ ಯಾಕಿಲ್ಲ ಮೇಣದ ಪ್ರತಿಮೆ: ಮೇಡಮ್ ಟುಸ್ಸಾಡ್ ವಿರುದ್ಧ ಹರಿಪ್ರಿಯಾ ಕಿಡಿ
Recommended Video
ಮೇಡಮ್ ಟುಸ್ಸಾಡ್ ಮ್ಯೂಸಿಯಂನಲ್ಲಿ ಸಿನಿಮಾ ಕಲಾವಿದರಿಗೆ ಮೇಣದ ಪ್ರತಿಮೆ ಮೂಲಕ ಗೌರವ ನೀಡುವ ಸಂಪ್ರದಾಯವಿದೆ. ದೇಶದ ಹಲವು ಪ್ರಮುಖ ನಗರಗಳಲ್ಲಿ ಮೇಡಮ್ ಟುಸ್ಸಾಡ್ ಮ್ಯೂಸಿಯಂ ನಿರ್ಮಿಸಲಾಗಿದ್ದು, ಅನೇಕ ಭಾರತೀಯ ಸಿನಿ ಕಲಾವಿದರ ಮೇಣದ ಪ್ರತಿಮೆ ನಿರ್ಮಿಸಲಾಗಿದೆ.
ಅಮಿತಾಬ್ ಬಚ್ಚನ್, ಶಾರೂಖ್ ಖಾನ್, ಅಮೀರ್ ಖಾನ್, ಕತ್ರಿನಾ ಕೈಫ್, ಕರೀನಾ ಕಪೂರ್, ಕಾಜೋಲ್, ಅನಿಲ್ ಕಪೂರ್, ಮಾಧುರಿ ದೀಕ್ಷಿತ್, ಐಶ್ವರ್ಯ ರೈ, ಹೃತಿಕ್ ರೋಷನ್, ವರುಣ್ ಧವನ್, ದೀಪಿಕಾ ಪಡುಕೋಣೆ, ರಣ್ಬೀರ್ ಕಪೂರ್ ಹೀಗೆ ಹಿರಿಯ ಹಾಗೂ ಕಿರಿಯ ಕಲಾವಿದರ ಮೇಣದ ಪ್ರತಿಮೆಗಳು ಮೇಡಮ್ ಟುಸ್ಸಾಡ್ ಮ್ಯೂಸಿಯಂನಲ್ಲಿದೆ.
ತೆಲುಗಿನ ಮಹೇಶ್ ಬಾಬು, ತಮಿಳು ನಟ ಸತ್ಯರಾಜ್ ಈಗ ಹೊಸದಾಗಿ ಕಾಜಲ್ ಅಗರ್ವಾಲ್ ಮೇಣದ ಪ್ರತಿಮೆ ನಿರ್ಮಿಸಲಾಗಿದೆ. ಹೀಗೆ, ಯಾವುದೇ ಒಂದು ಮಾನದಂಡವಿಲ್ಲದೇ ಇಂದಿನ ಯುವ ಕಲಾವಿದರ ಮೇಣದ ಪ್ರತಿಮೆ ಮಾಡುತ್ತಿರುವ ಮೇಡಮ್ ಟುಸ್ಸಾಡ್ ಕನ್ನಡದವರನ್ನು ಮಾತ್ರ ಏಕೆ ಕಡೆಗಣಿಸಿದೆ?

ಕನ್ನಡ ನಟಿ ಹರಿಪ್ರಿಯಾ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ನಟಿ ''ನಿಜಕ್ಕೂ ಆಯಾ ಇಂಡಸ್ಟ್ರಿಯ ಕಲಾವಿದರ ಮೇಣದ ಪ್ರತಿಮೆ ನೋಡಲು ಖುಷಿಯಾಗುತ್ತೆ. ಆದರೆ, ಇದುವರೆಗೂ ಕನ್ನಡದ ಯಾವೊಬ್ಬ ಕಲಾವಿದನಿಗೂ ಈ ಗೌರವ ಸಿಕ್ಕಿಲ್ಲ ಯಾಕೆ? ಕನ್ನಡದ ಖ್ಯಾತ ಕಲಾವಿದರ ಸಾಧನೆಯನ್ನು ಕಡೆಗಣಿಸಲು ಸಾಧ್ಯವಿಲ್ಲ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
''ಡಾ ರಾಜ್ ಕುಮಾರ್, ಡಾ ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್, ಪಂಡಿರಿಬಾಯಿ, ಜಯಂತ, ಬಿ ಸರೋಜಾ ದೇವಿ, ಕಲ್ಪನಾ, ಮಂಜುಳಾ ಪಟ್ಟಿ ಹೀಗೆ ಬೆಳೆಯುತ್ತಾ ಹೋಗುತ್ತೆ. ಇಂದಿನ ಯುವಕಲಾವಿದರಿಗಿಂತ ಇವರೆಲ್ಲರು ಅದಕ್ಕೆ ಅರ್ಹರು. ನೀವು ನನ್ನ ಮಾತನ್ನು ಒಪ್ಪುತ್ತೀರಾ'' ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಹರಿಪ್ರಿಯಾ ಅವರ ಈ ಅಭಿಪ್ರಾಯಕ್ಕೆ ಕನ್ನಡ ಕಲಾಭಿಮಾನಿಗಳ ಬೆಂಬಲ ಸೂಚಿಸಿದ್ದಾರೆ. ನಿಮ್ಮ ಮಾತು ನೂರಕ್ಕೆ ನೂರರಷ್ಟು ನಿಜ ಎಂದು ಸಪೋರ್ಟ್ ಮಾಡ್ತಿದ್ದಾರೆ.


Click it and Unblock the Notifications











