»   » ಟಾಲಿವುಡ್ ಬಾಲಯ್ಯ ಸಿನಿಮಾದಲ್ಲಿ ನೀರ್ ದೋಸೆ ಬೆಡಗಿ ಹರಿಪ್ರಿಯಾ.!

ಟಾಲಿವುಡ್ ಬಾಲಯ್ಯ ಸಿನಿಮಾದಲ್ಲಿ ನೀರ್ ದೋಸೆ ಬೆಡಗಿ ಹರಿಪ್ರಿಯಾ.!

Posted By:
Subscribe to Filmibeat Kannada

ನಟಿ ಹರಿಪ್ರಿಯಾ ಖಾತೆಯಲ್ಲಿ ಸದ್ಯ ಕನ್ನಡದ ಸಾಕಷ್ಟು ಸಿನಿಮಾಗಳಿವೆ. ಅದರೊಂದಿಗೆ ಈಗ 'ನೀರ್ ದೋಸೆ' ಚೆಲುವೆ ಮತ್ತೆ ಟಾಲಿವುಡ್ ಕಡೆ ಹೋಗಿದ್ದಾರೆ. ನಟ ಬಾಲಯ್ಯ ನಟನೆಯ ಹೊಸ ಚಿತ್ರಕ್ಕೆ ಹರಿಪ್ರಿಯಾ ನಾಯಕಿ ಆಗಿದ್ದಾರೆ.

ಟಾಲಿವುಡ್ ನಟ ಬಾಲಕೃಷ್ಣ ಜೊತೆ ನಟಿಸಲಿದ್ದಾರೆ 'ನೀರ್ ದೋಸೆ' ಹರಿಪ್ರಿಯಾ

ಬಾಲಯ್ಯ ಮತ್ತು ಹರಿಪ್ರಿಯಾ ನಟನೆಯ 'ಜೈಸಿಂಹ' ಸಿನಿಮಾದ ಚಿತ್ರೀಕರಣ ಈಗಾಗಲೇ ಶುರುವಾಗಿದೆ. ಬಾಲಯ್ಯ ಜೊತೆ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಫೋಟೋಗಳನ್ನು ಹರಿಪ್ರಿಯಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Haripriya playing lead opposite Balakrishna

ಜೊತೆಗೆ ''ನಿರ್ದೇಶಕ ಕೆ.ಎಸ್.ರವಿಕುಮಾರ್ ಮತ್ತು ನಟ ಬಾಲಕೃಷ್ಣ ಅವರಿಂದ ಅನೇಕ ವಿಷಯಗಳನ್ನು ಕಲಿತ ಅನುಭವ ಸಿಕ್ಕಿದೆ'' ಎಂದು ಟ್ವೀಟ್ ಮಾಡಿದ್ದಾರೆ.

Haripriya playing lead opposite Balakrishna

'ಜೈ ಸಿಂಹ' ಬಾಲಕೃಷ್ಣ ಅವರ 102ನೇ ಸಿನಿಮಾವಾಗಿದೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ನಯನತಾರ ಮತ್ತು ಹರಿಪ್ರಿಯಾ ಬಾಲಯ್ಯ ಜೊತೆ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಕೆಲ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದ ಹರಿಪ್ರಿಯಾ ಮೂರು ವರ್ಷದ ನಂತರ ಮತ್ತೆ ಟಾಲಿವುಡ್ ಗೆ ಕಾಲಿಟ್ಟಿದ್ದಾರೆ.

English summary
Actress Haripriya playing lead opposite Balakrishna in 'Jai Simha' movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada