Don't Miss!
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- News
ಡಿಕೆಶಿ ಪತ್ನಿ ನನಗೆ ಕಾಂಗ್ರೆಸ್ ತೊರೆಯದಂತೆ ಕೋರಿದ್ದರು: ರಮೇಶ್ ಜಾರಕಿಹೊಳಿ
- Technology
MusicLM :ಗೂಗಲ್ನಿಂದ ಹೊಸ ಟೂಲ್; ಇದು ಪಠ್ಯವನ್ನು ಸಂಗೀತವಾಗಿ ಪರಿವರ್ತಿಸಲಿದೆ!
- Finance
ಅದಾನಿ ಗ್ರೂಪ್ನ 413 ಪುಟಗಳ ಪ್ರತಿಕ್ರಿಯೆ: ಹಿಂಡನ್ಬರ್ಗ್ ಹೇಳುವುದೇನು?
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಸಿಷ್ಠ 'ಸಿಂಹ' ತೋಳಿನಲ್ಲಿ ಕಂದ ಹರಿಪ್ರಿಯಾ: ಎಂಗೇಜ್‌ಮೆಂಟ್ ನಿಜಾನೇ!
ಕಳೆದೊಂದು ವಾರದಿಂದ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಎಂಗೇಜ್‌ಮೆಂಟ್ ಬಗ್ಗೆ ಸಾಕಷ್ಟು ಗುಸುಗುಸು ಕೇಳಿಬರ್ತಿತ್ತು. ಇವತ್ತು ಇಬ್ಬರು ಉಂಗುರ ಬದಲಿಸಿಕೊಂಡಿದ್ದಾರೆ ಎಂದು ವರದಿ ಆಗಿತ್ತು. ಆದರೆ ಈ ಬಗ್ಗೆ ಇಬ್ಬರು ಸ್ಪಷ್ಟನೆ ನೀಡಿರಲಿಲ್ಲ. ಇದೀಗ ಪರೋಕ್ಷವಾಗಿ ತಮ್ಮಿಬ್ಬರ ಪ್ರೀತಿ ಬಗ್ಗೆ ನಟಿ ಹರಿಪ್ರಿಯಾ ಪ್ರತಿಕ್ರಿಯಿಸಿದ್ದಾರೆ.
ನಟಿ ಹರಿಪ್ರಿಯಾ ಮಾಡಿರುವ ಪೋಸ್ಟ್‌ವೊಂದು ಎಲ್ಲರ ಗಮನ ಸೆಳೆಯುತ್ತಿದೆ. ಪುಟಾಣಿ ಕಂದನನ್ನು ಕೈಯಲ್ಲಿ ಹಿಡಿದಿರುವ ಸಿಂಹದ ಫೋಟೊ ಶೇರ್ ಮಾಡಿರುವ ನಟಿ ಹರಿಪ್ರಿಯಾ "ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು..!!" ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ವಸಿಷ್ಠ ಸಿಂಹ ಜೊತೆಗಿನ ರಿಲೇಶನ್‌ಶಿಪ್ ಬಗ್ಗೆ ಸುಳಿವು ನೀಡಿದ್ದಾರೆ. ಕಾಮೆಂಟ್ ಬಾಕ್ಸ್‌ನಲ್ಲಿ ಅಭಿಮಾನಿಗಳು "ಇಷ್ಟು ಹೇಳಿದರೆ ಸಾಕು, ನಮಗೆ ಅರ್ಥವಾಗುತ್ತದೆ" ಎನ್ನುತ್ತಿದ್ದಾರೆ.
ಗುಟ್ಟಾಗಿ
ಉಂಗುರ
ಬದಲಿಸಿಕೊಂಡ್ರಾ
ವಸಿಷ್ಠ
ಸಿಂಹ-
ಹರಿಪ್ರಿಯಾ?
ತೆಲುಗಿನ 'ಎವರು' ಕನ್ನಡ ರೀಮೆಕ್‌ನಲ್ಲಿ ನಟ ವಸಿಷ್ಠ ಹಾಗೂ ನಟಿ ಹರಿಪ್ರಿಯಾ ನಟಿಸುತ್ತಿದ್ದಾರೆ. ಸಿನಿಮಾ ಶೂಟಿಂಗ್ ವೇಳೆ ಇಬ್ಬರು ಪ್ರೀತಿಲಿ ಬಿದ್ದಿದ್ದಾರೆ ಎನ್ನಲಾಗ್ತಿದೆ. ಶೀಘ್ರದಲ್ಲೇ ತಮ್ಮಿಬ್ಬರ ಪ್ರೀತಿ ಸಂಬಂಧವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ತೀರ್ಮಾನಿಸಿದ್ದಾರೆ.

ಧನುರ್ಮಾಸ ಕಳೆದ ಮೇಲೆ ಕಲ್ಯಾಣ
ವಸಿಷ್ಠ ಹಾಗೂ ಹರಿಪ್ರಿಯಾ ಈ ಹಿಂದೆ ಒಟ್ಟಿಗೆ ಯಾವುದೇ ಸಿನಿಮಾದಲ್ಲಿ ನಟಿಸಿರಲಿಲ್ಲ. ಇದೇ ಮೊದಲ ಬಾರಿಗೆ ಇನ್ನು ಹೆಸರಿಡದ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಶೂಟಿಂಗ್ ವೇಳೆ ಇಬ್ಬರ ನಡುವೆ ಆತ್ಮೀಯತೆ ಬೆಳೆದು ಪ್ರೀತಿಗೆ ತಿರುಗಿತ್ತು. ಧನುರ್ಮಾಸ ಹತ್ತಿರವಾಗುತ್ತಿರುವ ಕಾರಣಕ್ಕೆ ಅದಕ್ಕೂ ಮುನ್ನ ಸರಳವಾಗಿ ಹರಿಪ್ರಿಯಾ ಮನೆಯಲ್ಲಿ ಎಂಗೇಜ್‌ಮೆಂಟ್ ನಡೆದಿದೆ. ಧನುರ್ಮಾಸ ಮುಗಿದ ಮೇಲೆ ಜೋಡಿ ಹಸೆಮಣೆ ಏರಲಿದೆ.

ಹರಿಪ್ರಿಯಾ ಜೊತೆ ವಸಿಷ್ಠ ಶಾಪಿಂಗ್
ಇತ್ತೀಚೆಗೆ ನಟಿ ಹರಿಪ್ರಿಯಾ ಮೂಗು ಚುಚ್ಚಿಸಿಕೊಳ್ಳುವ ವೇಳೆ ಕಣ್ಣೀರು ಹಾಕಿದ್ದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವೇಳೆ ನಟ ವಸಿಷ್ಠ ಸಿಂಹ ಕೂಡ ಹರಿಪ್ರಿಯಾ ಜೊತೆಗಿದ್ದರು. ಆದರೆ ಯಾರಿಗೂ ಈ ಬಗ್ಗೆ ಅನುಮಾನ ಬಂದಿರಲಿಲ್ಲ. ನಂತರ ಇಬ್ಬರು ಡೇಟಿಂಗ್ ನಡೆಸುತ್ತಿರುವ ಬಗ್ಗೆ ಗುಸುಗುಸು ಕೇಳಿಬಂದಿತ್ತು. ಇದೇ ವೇಳೆ ಏರ್‌ಪೋರ್ಟ್‌ನಲ್ಲಿ ಜೋಡಿ ಒಟ್ಟಿಗೆ ಕೈ ಕೈ ಹಿಡಿದು ಕಾಣಿಸಿಕೊಂಡಿತ್ತು.

ಪಾರ್ಟ್‌ನರ್ ಪಾರ್ಟ್‌ನರ್ ಎನ್ನುತ್ತಿದ್ದ ಜೋಡಿ
ಇತ್ತೀಚೆಗೆ ನಡೆದ ಫ್ಯಾನ್ಸ್ ಕ್ರಿಕೆಟ್ ಲೀಗ್ ವೇಳೆ ನಟ ವಸಿಷ್ಠ ಸಿಂಗ ನೇತೃತ್ವದ ತಂಡಕ್ಕೆ ನಟಿ ಹರಿಪ್ರಿಯಾ ಶುಭ ಹಾರೈಸಿದ್ದರು. ಆಗಲೂ ಯಾರಿಗೂ ಅನುಮಾನ ಬಂದಿರಲಿಲ್ಲ. ಇನ್ನು ಇಬ್ಬರು ಡ್ಯಾನ್ಸ್ ಮಾಡಿ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದರು. ಇಬ್ಬರು ಒಬ್ಬರನ್ನೊಬ್ಬರು ಪಾರ್ಟ್‌ನರ್ ಎಂದು ಕರೆಯುತ್ತಿದ್ದರು. ವಸಿಷ್ಠ ಸಿಂಹ ಹುಟ್ಟುಹಬ್ಬಕ್ಕೆ ಸ್ಪೆಷಲ್ ಆಗಿ ಹರಿಪ್ರಿಯಾ ಶುಭ ಕೋರಿದ್ದರು. ಅದೇ ರೀತಿ ಹರಿಪ್ರಿಯಾ ಬರ್ತ್‌ಡೇಗೆ ವಸಿಷ್ಠ ವಿಶ್ ಮಾಡಿದ್ದರು.

ಶೀಘ್ರದಲ್ಲೇ ವಸಿಷ್ಠ- ಪ್ರಿಯಾ ಸಿನಿಮಾ ರಿಲೀಸ್
ಸ್ಪಾನಿಷ್‌ನ 'ದಿ ಇನ್‌ವಿಸಿಬಲ್ ಗೋಸ್ಟ್' ಚಿತ್ರದಿಂದ ಪ್ರೇರಣೆಗೊಂಡು ಮಾಡಿದ್ದ ತೆಲುಗಿನ 'ಎವರು' ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೇ ಚಿತ್ರವನ್ನು ಕನ್ನಡದಲ್ಲಿ ಕಟ್ಟಿಕೊಡಲಾಗುತ್ತಿದೆ. ಅಶೋಕ್ ತೇಜಾ ನಿರ್ದೇಶನದ ಈ ಚಿತ್ರದಲ್ಲಿ ದಿಗಂತ್, ಹರಿಪ್ರಿಯಾ, ವಸಿಷ್ಠ ಸಿಂಹ ಚಿತ್ರದ ತಾರಾಗಣದಲ್ಲಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ತೆರೆಗೆ ಬರಲಿದೆ. ಇನ್ನುಳಿದಂತೆ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಇಬ್ಬರ ಕೈಯಲ್ಲಿ ಅರ್ಧ ಡಜನ್‌ಗೂ ಹೆಚ್ಚು ಸಿನಿಮಾಗಳಿವೆ.