ಚಿತ್ರೀಕರಣದಿಂದ ದಿಢೀರ್ ಬ್ರೇಕ್ ಪಡೆದ ಹರಿಪ್ರಿಯಾ ಕಾರಣ ಇಲ್ಲಿದೆ
ನಟಿ ಹರಿಪ್ರಿಯಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದರು. ಮೊನ್ನೆ ಮೊನ್ನೆಯಷ್ಟೆ ರಿಲೀಸ್ ಆದ ಹರಿಪ್ರಿಯಾ ಅವರ 'ಡಾಟರ್ ಆಫ್ ಪಾರ್ವತಮ್ಮ' ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ವಿಭಿನ್ನ ಪಾತ್ರದಲ್ಲಿ ಮಿಂಚಿದ್ದ ಹರಿಪ್ರಿಯಾ ಪಾತ್ರವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದರು.
ಜೊತೆಗೆ ಹರಿಪ್ರಿಯಾ ಕೈಯಲ್ಲಿ 'ಕಥಾಸಂಗಮ', 'ಬಿಚ್ಚುಗತ್ತಿ', 'ಎಲ್ಲಿದ್ದೆ ಇಲ್ಲಿ ತನಕ', 'ಕನ್ನಡ ಗೊತ್ತಿಲ್ಲ', 'ಕುರುಕ್ಷೇತ್ರ' ಈ ಎಲ್ಲಾ ಸಿನಿಮಾಗಳನ್ನು ಪಂಕ್ಲೀಟ್ ಮಾಡಿದ್ದಾರಂತೆ. ಈ ಎಲ್ಲಾ ಸಿನಿಮಾಗಳ ಚಿತ್ರೀಕರಣದ ಜೊತೆಗೆ ಡಬ್ಬಿಂಗ್ ಕೂಡ ಮುಗಿಸಿ ರಿಲೀಸ್ ಗೆ ಎದುರು ನೋಡುತ್ತಿರುವ ಹರಿಪ್ರಿಯಾ ಈಗ ಸಿನಿಮಾದಿಂದ ಕೊಂಚ ಬ್ರೇಕ್ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಹರಿಪ್ರಿಯಾ ಅವರೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. "ಕೈಯಲ್ಲಿದ್ದ ಎಲ್ಲಾ ಪ್ರಾಜೆಕ್ಟ್ ಮುಗಿಸಿ ಬ್ರೇಕ್ ತೆಗೆದುಕೊಂಡಿದ್ದೀನಿ. ಬ್ರೇಕ್ ಮುಗಿಸಿ ಮುಂದಿನ ಸಿನಿಮಾಗಳ ಬಗ್ಗೆ ಮಾಹಿತಿ ನೀಡುತ್ತೇನೆ. ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿದೆ. ಹೊಸ ತಂಡದೊಂದಿಗೆ ಬರುತ್ತೇನೆ" ಎಂದು ಹೇಳಿದ್ದಾರೆ.

ಹರಿಪ್ರಿಯಾ ಮುಂದಿನ ಸಿನಿಮಾಗಳ ಬಗ್ಗೆ ಕುತೂಹಲ ಹೆಚ್ಚಾಗಿದೆ. 'ಬೆಲ್ ಬಾಟಂ-2' ಸಿನಿಮಾ ಕೂಡ ಬರ್ತಿದೆ ಅಂತ ಹೇಳಲಾಗುತ್ತಿತ್ತು. ಹಾಗಾಗಿ ಮತ್ತೆ ಕುಸುಮ ಆಗಿ ಕಾಣಿಸಿಕೊಳ್ಳುತ್ತಾ ಎನ್ನುವುದು ಸಧ್ಯದಲ್ಲೇ ಗೊತ್ತಾಗಲಿದೆ. ಹರಿಪ್ರಿಯಾ ಅಭಿನಯದ ಬಹುನಿರೀಕ್ಷೆಯ ಚಿತ್ರಗಳಲ್ಲಿ 'ಕುರುಕ್ಷೇತ್ರ' ಚಿತ್ರ ಆಗಸ್ಟ್ ನಲ್ಲಿ ತೆರೆಗೆ ಬರುತ್ತಿದೆ. ದೊಡ್ಡ ತಾರಾಗಣ ಇರುವ ಸಿನಿಮಾ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.


Click it and Unblock the Notifications











