For Quick Alerts
    ALLOW NOTIFICATIONS  
    For Daily Alerts

    ಗುರು ರಾಯರ ಸನ್ನಿಧಿಯಲ್ಲಿ ನಟಿ ಹರಿಪ್ರಿಯಾ: ತುಂಬಾ ವಿಶೇಷ ದಿನವಿದು ಎಂದ ನಟಿ

    |

    ಇತ್ತೀಚಿಗಷ್ಟೆ ಸ್ಯಾಂಡಲ್ ವುಡ್ ಡಿ ಬಾಸ್ ದರ್ಶನ್ ಗುರು ರಾಯರ ಸನ್ನಿಧಿ ಮಂತ್ರಾಲಯಕ್ಕೆ ಭೇಟಿ ನೀಡಿದ್ದರು. ರಾಬರ್ಟ್ ಸಕ್ಸಸ್ ಬಳಿಕ ರಾಯರ ದರ್ಶನ ಮಾಡಿ ದರ್ಶನ್ ಧನ್ಯರಾಗಿದ್ದರು. ಇದೀಗ ಚಂದನವನದ ನಟಿ ಹರಿಪ್ರಿಯಾ ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ.

    ಗುರುರಾಯರ ಸನ್ನಿಧಿಗೆ ತೆರಳಿ ರಾಯರ ದರ್ಶನ ಪಡೆದ ನಟಿ ಹರಿಪ್ರಿಯ.. | Filmibeat Kannada

    ಹರಿಪ್ರಿಯಾ ಮಂತ್ರಾಲಯದಲ್ಲಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರಾಘವೇಂದ್ರ ಸ್ವಾಮಿ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ಹರಿಪ್ರಿಯಾ ಅವರಿಗೆ ಮಠದ ಸ್ವಾಮಿಜಿ ಶ್ರೀ ಸುಬುಧೇಂದ್ರ ತೀರ್ಥರು ಸನ್ಮಾನ ಮಾಡಿ ಗೌರವಿಸಿದ್ದಾರೆ.

    ಫೋಟೋ ವೈರಲ್: ಮಂತ್ರಾಲಯದ ರಾಯರ ಮಠದ ಗೋ ಶಾಲೆಯಲ್ಲಿ ದರ್ಶನ್ಫೋಟೋ ವೈರಲ್: ಮಂತ್ರಾಲಯದ ರಾಯರ ಮಠದ ಗೋ ಶಾಲೆಯಲ್ಲಿ ದರ್ಶನ್

    ಜರಿ ಸೀರೆ ಧರಿಸಿ ಮಂತ್ರಾಲಯದಲ್ಲಿ ಕಾಣಿಸಿಕೊಂಡಿರುವ ನಟಿ ಹರಿಪ್ರಿಯಾ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಂದಿಷ್ಟು ಸುಂದರ ಫೋಟೋಗಳನ್ನು ಹಂಚಿಕೊಂಡಿರುವ ಹರಿಪ್ರಿಯಾ, 'ಮಂತ್ರಾಲಯದ ಶ್ರೀ ಸುಬುಧೇಂದ್ರ ಸ್ವಾಮಿ ಅವರಿಂದ ಸನ್ಮಾನ ಸ್ವೀಕರಿಸಿದ್ದು ಅಪಾರ ಹೆಮ್ಮೆ ಇದೆ. ರಾಘವೇಂದ್ರ ಸ್ವಾಮಿಯ ಜನ್ಮ ದಿನದಂದು ಗೌರವ ಸಿಕ್ಕಿರುವುದು ಇನ್ನಷ್ಟು ವಿಶೇಷ. ಮಂತ್ರಾಲಯ ನನ್ನನ್ನು ವಿಸ್ಮಯಗೊಳಿಸುವುದನ್ನು ಎಂದಿಗೂ ಕಮ್ಮಿಯಾಗಿಲ್ಲ. ವಿಶೇಷವಾಗಿ ಅವರ ಆತಿಥ್ಯ ಮತ್ತು ಅಲ್ಲಿನ ಅದ್ಭುತ ವೈಬ್ಸ್' ಎಂದು ಬರೆದುಕೊಂಡಿದ್ದಾರೆ.

    ಹರಿಪ್ರಿಯಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ನೀನಾಸಂ ಸತೀಶ್ ನಾಯಕನಾಗಿ ನಟಿಸುತ್ತಿರುವ ಪೆಟ್ರೋಮ್ಯಾಕ್ಸ್ ಸಿನಿಮಾದ ಚಿತ್ರೀಕರಣ ಮುಗಿಸಿರುವ ನಟಿ, ಬೆಲ್ ಬಾಟಂ-2ನಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಹೊಸ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಇನ್ನು ಮೂರ್ನಾಲ್ಕು ಸಿನಿಮಾಗಳಲ್ಲಿ ಹರಿಪ್ರಿಯಾ ನಟಿಸುತ್ತಿದ್ದಾರೆ.

    English summary
    Sandalwood Actress Haripriya visits Mantralaya and felicitated by Sri Subudhendra Swami.

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X