twitter
    For Quick Alerts
    ALLOW NOTIFICATIONS  
    For Daily Alerts

    'ಅಮೃತಮತಿ' ಚಿತ್ರಕ್ಕಾಗಿ ಹಾಲಿವುಡ್ ಪ್ರಶಸ್ತಿ ಪಡೆದ ಹರಿಪ್ರಿಯಾ

    |

    ಬರಗೂರು ರಾಮಚಂದ್ರಪ್ಪ ನಿರ್ದೇಶನದಲ್ಲಿ ತಯಾರಾಗಿರುವ 'ಅಮೃತ ಮತಿ' ಸಿನಿಮಾಗೆ ಮತ್ತೊಂದು ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿದೆ. 'ಅಮೃತ ಮತಿ' ಸಿನಿಮಾದಲ್ಲಿ ಮುಖ್ಯ ಪಾತ್ರ ಪೋಷಿಸಿರುವ ಹರಿಪ್ರಿಯಾಗೆ ಹಾಲಿವುಡ್ ಅಂತಾರಾಷ್ಟ್ರೀಯ ಗೋಲ್ಡನ್ ಏಜ್ ಫೆಸ್ಟಿವಲ್‌ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.

    Recommended Video

    ಅಂತರಾಷ್ಟ್ರೀಯ ಮಟ್ಟದಲ್ಲಿ ಶ್ರೇಷ್ಟ ನಟಿಯಾದ ಹರಿಪ್ರಿಯಾ | Filmibeat Kannada

    ಈ ಮೂಲಕ ಮೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಹರಿಪ್ರಿಯಾ ಶ್ರೇಷ್ಠ ನಟಿಯಾಗಿ ಹೊರಹೊಮ್ಮಿದ್ದಾರೆ. ಇದಕ್ಕೂ ಮುಂಚೆ ನೋಯ್ಡಾದಲ್ಲಿ ಎರಡು ಸಂಸ್ಥೆಗಳು ಪ್ರತ್ಯೇಕವಾಗಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಹರಿಪ್ರಿಯಾಗೆ ಪ್ರಶಸ್ತಿ ದೊರಕಿತ್ತು.

    ಲಾಸ್ ಏಂಜಲಿಸ್ ಸನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದಿದ್ದೆ. ಚಿತ್ರಕಥೆ ರಚನೆಗೆ ಬರಗೂರು ರಾಮಚಂದ್ರಪ್ಪ ಅವರು ವೈಯಕ್ತಿಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅದಕ್ಕೂ ಮುಂಚೆ ಅಟ್ಲಾಂಟ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅಮೃತಮತಿ ಸಿನಿಮಾ ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ಪ್ರಶಸ್ತಿ ಗೆದ್ದು ಬೀಗಿತ್ತು.

    Haripriya wins Best Actress in International Golden Age Film Festival

    ಈವರೆಗೂ ಈ ಚಿತ್ರವೂ ಹತ್ತಕ್ಕೂ ಹೆಚ್ಚು ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿ ಪ್ರದರ್ಶನ ಕಂಡಿದೆ. ಹೀಗೆ, ಅಂತರರಾಷ್ಟ್ರೀಯ ಮನ್ನಣೆಗೆ ಪಾತ್ರವಾಗುತ್ತಿರುವ 'ಅಮೃತಮತಿ'ಯು ಕನ್ನಡದ ಪ್ರಾಚೀನ ಕೃತಿಯಾದ 'ಯಶೋಧರ ಚರಿತೆ'ಯ ಪ್ರಸಂಗವನ್ನು ಆಧರಿಸಿ ಮರುವ್ಯಾಖ್ಯಾನಗೊಂಡ ಚಿತ್ರವೆನ್ನುವುದು ವಿಶೇಷ.

    'ಪಿಂಕಿ ಎಲ್ಲಿ' ನಟನೆಗಾಗಿ ಅಕ್ಷತಾಗೆ ಮತ್ತೊಂದು ಅಂತಾರಾಷ್ಟ್ರೀಯ ಪ್ರಶಸ್ತಿ'ಪಿಂಕಿ ಎಲ್ಲಿ' ನಟನೆಗಾಗಿ ಅಕ್ಷತಾಗೆ ಮತ್ತೊಂದು ಅಂತಾರಾಷ್ಟ್ರೀಯ ಪ್ರಶಸ್ತಿ

    ಬರಗೂರು ರಾಮಚಂದ್ರಪ್ಪ ಚಿತ್ರಕತೆ, ಸಂಭಾಷಣೆ, ಗೀತೆರಚನೆ ಮಾಡಿ ನಿರ್ದೇಶಿಸಿರುವ ಅಮೃತಮತಿ ಸಿನಿಮಾದಲ್ಲಿ ಪ್ರಶಸ್ತಿ ಪುರಸ್ಕೃತ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಸಂಕಲನಕಾರರಾಗಿ ಸುರೇಶ್ ಅರಸು, ಛಾಯಾಗ್ರಾಹಕರಾಗಿ ನಾಗರಾಜ ಆದವಾನಿ, ಸಂಗೀತ ನಿರ್ದೇಶಕರಾಗಿ ಶಮಿತಾ ಮಲ್ನಾಡ್ ಕಾರ್ಯ ನಿರ್ವಹಿಸಿದ್ದಾರೆ. ಇಂಚರ ಪ್ರೊಡಕ್ಷನ್‌ನಲ್ಲಿ ಪುಟ್ಟಣ್ಣ ನಿರ್ಮಾಣ ಮಾಡಿದ್ದಾರೆ.

    Haripriya wins Best Actress in International Golden Age Film Festival

    ಯಶೋಧರನ ಪಾತ್ರದಲ್ಲಿ ಬಹುಭಾಷಾ ನಟ ಕಿಶೋರ್ ಅಭಿನಯಿಸಿದ್ದಾರೆ. ಸುಂದರ್ ರಾಜ್, ಪ್ರಮೀಳಾ ಜೋಷಾಯ್ ತಿಲಕ್, ಸುಪ್ರಿಯಾರಾವ್, ವತ್ಸಲಾ ಮೋಹನ್, ಅಂಬರೀಶ್ ಸಾರಂಗಿ ಸೇರಿದಂತೆ ಮುಂತಾದವರು ಕಾಣಿಸಿಕೊಂಡಿದ್ದಾರೆ. ಅಧಿಕೃತವಾಗಿ ಚಿತ್ರಮಂದಿರಗಳಲ್ಲಿ ತೆರೆಕಾಣದ ಸಿನಿಮಾ ಶೀಘ್ರದಲ್ಲಿ ಪ್ರೇಕ್ಷಕರೆದುರು ಬರಲಿದೆ.

    English summary
    Kannada actress Haripriya wins Best Actress for Amruthamathi film in International Golden Age Film Festival.
    Wednesday, July 7, 2021, 13:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X